ಇಡಿ ಸಹ ಬಿಜೆಪಿ ಸ್ಟಾರ್ ಕ್ಯಾಂಪೇನರ್ : ಖರ್ಗೆ

ಗ್ವಾಲಿಯರ್:

     ಈಗ ನಡೆಯುತ್ತಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಂತೆ ಜಾರಿ ನಿರ್ದೇಶನಾಲಯ(ಇಡಿ) ಸಹ ಭಾರತೀಯ ಜನತಾ ಪಕ್ಷದ “ಸ್ಟಾರ್ ಕ್ಯಾಂಪೇನರ್” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಟೀಕಿಸಿದ್ದಾರೆ.

    ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಇಂದು ಗ್ವಾಲಿಯರ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಬಿಜೆಪಿ ಪರವಾಗಿ ಕೇಂದ್ರೀಯ ತನಿಖಾ ಸಂಸ್ಥೆಗಳು ಮತ್ತು ಆದಾಯ ತೆರಿಗೆ ಇಲಾಖೆ ಕೂಡ ಕಣದಲ್ಲಿವೆ ಎಂದರು.

    “ಕಾಂಗ್ರೆಸ್‌ಗೆ ಒಬ್ಬ ಅಭ್ಯರ್ಥಿ. ಆದರೆ ಬಿಜೆಪಿಗೆ ನಾಲ್ವರು ಇದ್ದಾರೆ, ಒಬ್ಬರು  ಮಾತ್ರ ಕಾಣಿಸುತ್ತಾರೆ. ಆದರೆ ಕಾಣದ ಇನ್ನೂ ಮೂವರು ಕಣದಲ್ಲಿದ್ದಾರೆ…. ಸ್ಟಾರ್ ಪ್ರಚಾರಕನಂತೆ ಪ್ರಚಾರ ಮಾಡುತ್ತಿರುವ ಇಡಿ. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಎರಡನೇ ಅಭ್ಯರ್ಥಿ ಸಿಬಿಐ, ಮತ್ತು ಮೂರನೆಯ ಅಭ್ಯರ್ಥಿ ಆದಾಯ ತೆರಿಗೆ ಇಲಾಖೆ” ಎಂದು ಖರ್ಗೆ ವಾಗ್ದಾಳಿ ನಡೆಸಿದರು.

     “ಈ ಮೂವರ ಜೊತೆಗೆ, ಮೋದಿ ಮತ್ತು ಚೌಹಾಣ್ ಇದ್ದಾರೆ…. ಅವರು ಪಂಚ ಪಾಂಡವರಂತೆ, ಪ್ರಾಚೀನ ಕಾಲದವರಲ್ಲ. ಇಂದಿನವರು, ನಮ್ಮನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ” ಎಂದರು.ಆದರೆ ನಾವು ಅವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಕರೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap