ಮ್ಯಾಂಚೆಸ್ಟರ್:
ಭಾರತ ವಿರುದ್ಧದ ಟೆಸ್ಟ್ ಸರಣಿಯ ಮುಂದಿನ ಪಂದ್ಯಗಳಿಂದ ಇಂಗ್ಲೆಂಡ್‌ನ ಆಫ್ ಸ್ಪಿನ್ನರ್ ಶೋಯೆಬ್ ಬಶೀರ್ ಅವರು ಹೊರಬಿದ್ದಿದ್ದಾರೆ. ಎಡಗೈಯ ಬೆರಳಿಗೆ ಮೂಳೆ ಮುರಿತಕ್ಕೆ ಒಳಗಾಗಿರುವ ಬಶೀರ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಲಾರ್ಡ್ಸ್ ಪಂದ್ಯದ ವೇಳೆ ಕೈ ಬೆರಳಿಗೆ ಬ್ಯಾಡೆಂಜ್ ಸುತ್ತಿಕೊಂಡೇ ಬೌಲಿಂಗ್ ನಡೆಸಿದ್ದರು. ಮೊಹಮ್ಮದ್ ಸಿರಾಜ್ ವಿಕೆಟ್ ಕಿತ್ತು ಇಂಗ್ಲೆಂಡ್‌ಗೆ ಗೆಲುವು ತಂದುಕೊಟ್ಟಿದ್ದರು.
ಭಾರತದ ಮೊದಲ ಇನ್ನಿಂಗ್ಸ್ ನ 78ನೇ ಓವರ್ ವೇಳೆ ರವೀಂದ್ರ ಜಡೇಜಾದ ಹೊಡೆದ ಚೆಂಡನ್ನು ಹಿಡಿಯಲು ಹೋದಾಗ ಬೆರಳಿನ ಮೂಳೆ ಮುರಿತವಾಗಿತ್ತು. ಒಟ್ಟಾರೆಯಾಗಿ, ಅವರು ಸರಣಿಯಲ್ಲಿ 54.1 ಸರಾಸರಿಯಲ್ಲಿ ಮೂರು ಪಂದ್ಯಗಳಿಂದ 10 ವಿಕೆಟ್‌ಗಳನ್ನು ಪಡೆದಿದ್ದರು.
ಶೋಯೆಬ್ ಬಶೀರ್ ಬದಲಿಗೆ ಎಡಗೈ ಸ್ಪಿನ್ನರ್ ಲಿಯಾಮ್ ಡಾಸನ್ ಅವರನ್ನು ಇಂಗ್ಲೆಂಡ್ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. 35 ವರ್ಷದ ಡಾಸನ್ 2017ರಲ್ಲಿ ಇಂಗ್ಲೆಂಡ್ ಪರ ಕಡೆಯದಾಗಿ ಟೆಸ್ಟ್ ಪಂದ್ಯವಾಡಿದ್ದರು. ಇದುವರೆಗೆ ಒಟ್ಟು ಮೂರು ಟೆಸ್ಟ್ ಆಡಿರುವ ಡಾಸನ್ ಏಳು ವಿಕೆಟ್ ಪಡೆದಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಜುಲೈ 23ರಂದು ನಡೆಯಲಿದೆ. ಈ ಪಂದ್ಯವು ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆಯಲಿದೆ.
ಬೆನ್ ಸ್ಟೋಕ್ಸ್ (ನಾ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಜ್ಯಾಕ್ ಕ್ರಾಲಿ, ಲಿಯಾಮ್ ಡಾಸನ್, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜೇಮೀ ಸ್ಮಿತ್, ಜೋಶ್ ಟಂಗ್, ಕ್ರಿಸ್ ವೋಕ್ಸ್.
