ಕಾರ್ಮಿಕರಿಗೆ ಪಿಎಫ್, ಮತ್ತು ಇಎಸ್‍ಐ ಸೌಲಭ್ಯಗಳನ್ನು ನೀಡದೇ ಶೋಷಣೆ :ಹೆಚ್.ಕೆ.ಪಾಟೀಲ್

ಬೆಂಗಳೂರು

     ಕಾಮಗಾರಿ ಇನ್ನಿತರ ಕೆಲಸಗಳಿಗೆ ಸರ್ಕಾರ ಹೆಚ್ಚು ಹಣವನ್ನು ನೀಡಿದರೂ ಅದನ್ನು ಪಡೆದ ಗುತ್ತಿಗೆದಾರರು, ಕಾರ್ಮಿಕರಿಗೆ ಪಿಎಫ್, ಮತ್ತು ಇಎಸ್‍ಐ ನಂತಹ ಸೌಲಭ್ಯಗಳನ್ನು ನೀಡದೇ ಶೋಷಣೆ ಮಾಡುತ್ತಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್ ಅವರು ಅಸಮಾಧಾನ ವ್ಯಕ್ತಪಡಿಸಿದರು.

      ವಿಧಾನ ಸೌಧದಲ್ಲಿ ಸೇವೆ ಸಲ್ಲಿಸುವ ಲೀಫ್ಟ್ ಆಪರೇಟರ್ ಸೇರಿದಂತೆ ಇತರ ವಲಯಗಳ ಕಾರ್ಮಿಕರಿಗೆ ಹೊರ ಗುತ್ತಿಗೆ ಆಧಾರದಲ್ಲಿ ವೇತನ ನೀಡುವ ಮೂಲಕ ಸರ್ಕಾರವೇ ಕಾರ್ಮಿಕರಿಗೆ ಶೋಷಣೆ ಮಾಡುತ್ತಿದೆ ಎಂದು ದೂರಿದರು..

     ರೇಸ್ ಕೋರ್ಸ್ ಮುಖ್ಯ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ಕಾರ್ಮಿಕ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಾರ್ಮಿಕರಿಗೆ ಪಿಎಫ್, ಮತ್ತು ಇಎಸ್‍ಐ ನಂತಹ ಸೌಲಭ್ಯಗಳನ್ನು ನೀಡದೇ ಶೋಷಣೆ ಮಾಡುತ್ತಿರುವುದನ್ನು ನೋಡಿಕೊಂಡು ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಳ್ಳಬಾರದು ಎಂದು ಹೇಳಿದರು.

        ಹೊರ ಗುತ್ತಿಗೆ ಪದ್ಧತಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಳಿಗೆ ಕಾರ್ಮಿಕರ ನಿಯೋಗವೊಂದು ತೆರಳಿ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಇದಕ್ಕೆ ತಮ್ಮ ಬೆಂಬಲವೂ ಇದೆ ಎಂದು ಅವರು ತಿಳಿಸಿದರು.

       ಕಾಂಗ್ರೆಸ್ ಪಕ್ಷಕ್ಕೆ ಅಂಬಾನಿಯಂತಹ ದೊಡ್ಡ ಉದ್ದಿಮೆದಾರರ ಬೆಂಬಲವಿಲ್ಲ, ಆದರೆ ಕೃಷಿ, ಕಟ್ಟಡ, ಗಾರ್ಮೆಂಟ್ಸ್, ಕೈಗಾರಿಕಾ ವಲಯದ ಕಾರ್ಮಿಕರೇ ದೊಡ್ಡ ಬೆಂಬಲವಾಗಿದ್ದಾರೆ ಕಾರ್ಮಿಕರು ಘೋಷಣೆ ಕೂಗಿದರೇ ಸರ್ಕಾರ ಮತ್ತು ಉದ್ದಿಮೆದಾರರು ಅಂಜುತ್ತಿದ್ದರು. ಆದರೆ ಇಂದು ಕೇಂದ್ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಮಿಕ ಸಂಘಟನೆಗಳನ್ನು ಧಮನ ಮಾಡಲಾಗಿದೆ ಎಂದು ಆರೋಪಿಸಿದರು.

       ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮೋದಿ ಸರ್ಕಾರದ ಮೂರ್ಖತನದ ಆರ್ಥಿಕ ನೀತಿಗಳೇ ದೇಶದಲ್ಲಿ ಉದ್ಯೋಗದ ಸೃಷ್ಟಿಯಾಗದಿರುವುದು ಕಾರಣವಾಗಿದೆ ಕಳೆದ 5 ವರ್ಷಗಳಲ್ಲಿ ಉದ್ಯೋಗ ನಿರೀಕ್ಷಿತ ಮಟ್ಟದಲ್ಲಿ ಸೃಷ್ಟಿಯಾಗಿಲ್ಲ. ಕೆಟ್ಟ ಆರ್ಥಿಕ ನೀತಿಗಳಿಂದ ದೊಡ್ಡ ಉದ್ದಿಮೆದಾರರಿಗೆ ಅನುಕೂಲವಾಗಿದೆಯೇ ಹೊರತು ಮಧ್ಯಮ ವರ್ಗದ ಉದ್ದಿಮೆದಾರರಿಗೆ ಅಲ್ಲ ಎಂದು ಹೇಳಿದರು.

        ಕಳೆದ 5 ವರ್ಷಗಳಲ್ಲಿ ಕಾರ್ಮಿಕ ಸಂಘಟನೆಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಜೆಟ್ ಏರ್ ವೇಸ್, ಎಚ್.ಎ.ಎಲ್. ಬಿ.ಎಸ್.ಎನ್.ಎಲ್, ನಂತಹ ದೊಡ್ಡ ಉದ್ದಿಮೆಗಳು ಬಿದ್ದಿಗೆ ಬಿದ್ದಿವೆ. ಇದಕ್ಕೆ ಕೆಟ್ಟ ಆರ್ಥಿಕ ನೀತಿಗಳೇ ಕಾರಣ ಎಂದು ಹೇಳಿದರು.
ಕೇಂದ್ರ ಸರ್ಕಾರವು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪೌರತ್ವವನ್ನು ಪ್ರಶ್ನಿಸಿ ನೋಟಿಸ್ ನೀಡುವ ಕೀಳುಮಟ್ಟಕ್ಕೆ ತಲುಪಿದೆ. ಇದು ಅಧಿಕಾರದ ದುರ್ಬಳಕೆ ಎಂದು ಹೇಳಿದರು.ಬಿಜೆಪಿ ಅಧಿಕಾರಕ್ಕೆ ಬರುವ ದೊಡ್ಡ ಭ್ರಮೆ ಇಟ್ಟುಕೊಂಡಿದೆ. ದೇಶದಲ್ಲಿ 160 ಸ್ಥಾನಗಳು ಬಂದರೇ ಅದೇ ಹೆಚ್ಚು. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link