ನವದೆಹಲಿ:
ಉದ್ಯೋಗಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಕೂಡಿಡುವ ಹಣ ನಿಧಿ ಸಂಸ್ಥೆ (ಇಪಿಎಫ್‌ಒ) 2022-23ನೇ ಸಾಲಿನಲ್ಲಿ ಭವಿಷ್ಯ ನಿಧಿ ಬಡ್ಡಿ ದರವನ್ನು ಶೇ 8.15ಕ್ಕೆ ಹೆಚ್ಚಿಸಿದೆ.
2020–21ರಲ್ಲಿ ಶೇ. 8.5ರಷ್ಟಿದ್ದ ಇಪಿಎಫ್ ಬಡ್ಡಿ ದರವನ್ನು ಮಾರ್ಚ್ 2022ರಲ್ಲಿ 2021–22ರ ಅವಧಿಗೆ ನಾಲ್ಕು ದಶಕಗಳಲ್ಲೇ ಕನಿಷ್ಠ ಮಟ್ಟವಾದ ಶೇ. 8.1ಕ್ಕೆ ಇಳಿಸಲಾಗಿತ್ತು. 1977–78ರಿಂದೀಚೆಗೆ(ಶೇ.8ರಷ್ಟಿದ್ದ) ಇದು ಅತ್ಯಂತ ಕಡಿಮೆ ಬಡ್ಡಿದರವಾಗಿತ್ತು.
ಇದೀಗ, ಮಂಗಳವಾರ ನಡೆದ ಇಪಿಎಫ್‌ಒ ಕೇಂದ್ರೀಯ ಮಂಡಳಿಯ ಟ್ರಸ್ಟಿಗಳ(ಸಿಬಿಟಿ) ಸಭೆಯಲ್ಲಿ ಬಡ್ಡಿ ದರವನ್ನು 8.15ಕ್ಕೆ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
