ಪ್ರಾಥಮಿಕ ತನಿಖೆ ಆಗುವವರೆಗೂ ಈಶ್ವರಪ್ಪ ರಾಜೀನಾಮೆ ಪಡೆಯಲ್ಲ: ಸಿಎಂ ಬೊಮ್ಮಾಯಿ

ಬೆಂಗಳೂರು:

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ಪ್ರಾಥಮಿಕ ತನಿಖೆಯಾಗುತ್ತಿದೆ. ಅದರ ಆಧಾರದ ಮೇಲೆ ಮುಂದಿನ ತನಿಖೆ ಬಗ್ಗೆ ನಿರ್ಣಯ ಮಾಡುತ್ತೇವೆ. ಈಶ್ವರಪ್ಪ ವಿಷಯದಲ್ಲಿ ಹೈಕಮಾಂಡ್ ನ ಮಧ್ಯ ಪ್ರವೇಶ ಏನು ಇಲ್ಲ. ಅವರು ಬರೀ ಮಾಹಿತಿ ಪಡೆದಿದ್ದಾರೆ ಅಷ್ಟೇ, ಆದರೆ ಇದರಲ್ಲಿ ಅವರ ಪಾತ್ರವೇನಿಲ್ಲ.

ಪ್ರಾಥಮಿಕ ತನಿಖೆ ಆಗುವವರೆಗೂ ಈಶ್ವರಪ್ಪ ರಾಜೀನಾಮೆ ಪಡೆಯುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.ಆರ್ ಟಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಬಂಧನಕ್ಕೆ ಹೋರಾಟಕ್ಕೆ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

 ದ್ವಿಚಕ್ರ ವಾಹನ ಸವಾರರೇ ಗಮನಿಸಿ : 2 ಕಡೆ ಮಿರರ್, ಇಂಡಿಕೇಟರ್ ಇಲ್ಲದಿದ್ರೆ 500 ರೂ. ದಂಡ ಫಿಕ್ಸ್!

ಕಾಂಗ್ರೆಸ್ ನವರ ಕಾಲದಲ್ಲಿ ಹಲವು ಕಾಲದಲ್ಲಿ ಕೊಲೆಗಳಾಗಿ, ಆ ಕೊಲೆ ಮಾಡಿದವರ ಕೇಸ್ ವಾಪಸ್ಸು ಪಡೆದಿದ್ದರು. ಇವತ್ತು ಅವರಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದಕ್ಕೆ ಅವರನ್ನು ಜನರು ತಿರಸ್ಕಾರ ಮಾಡಿದ್ದಾರೆ. ಅವರಿಗೆ ಯಾವುದೇ ನೈತಿಕತೆ ಇಲ್ಲ. ಅವರು ಬರೀ ರಾಜಕೀಯ ಲಾಭಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎಂದರು.

ಸಂತೋಷ್ ಆತ್ಮಹತ್ಯೆ ಕೇಸ್ ತನಿಖೆಯಾಗುತ್ತಿದೆ. ಸಂಪೂರ್ಣವಾಗಿ ತನಿಖೆ ಆಗಿ ಸತ್ಯ ಹೊರಗೆ ಬರಲಿದೆ ಎಂದರು.ಮುಖ್ಯಮಂತ್ರಿ ಕಚೇರಿಯಲ್ಲೇ ಕಮಿಷನ್ ದಂಧೆ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ, ಆಧಾರ ರಹಿತ ಆರೋಪಕ್ಕೆ ಪ್ರತಿಕ್ರಿಯೆ ಕೊಡುವ ಅವಶ್ಯಕತೆ ಇಲ್ಲ. ಅವರಲ್ಲಿರುವ ದಾಖಲೆ ಕೊಡಲಿ, ತನಿಖೆ ಮಾಡಿಸುತ್ತೇವೆ ಎಂದರು.

ಗುತ್ತಿಗೆದಾರ ಸಂತೋಷ್ ಮೃತದೇಹ ಹುಟ್ಟೂರು ತಲುಪುತ್ತಿದ್ದಂತೆ​ ಪೊಲೀಸರು ಮತ್ತು ಕುಟುಂಬಸ್ಥರ ಮಧ್ಯೆ ವಾಗ್ವಾದ

ಸಿದ್ದರಾಮಯ್ಯವರು ಸಿಎಂ ಆದಾಗ ಹಲವಾರು ಲಂಚ ಆರೋಪ ಪ್ರಕರಣಗಳು ಬಂದಿದ್ದಾವೆ. ಬಿಡಿಎದಲ್ಲೇ ದೊಡ್ಡ ಹಗರಣ ಸೇರಿದಂತೆ ಹಲವಾರು ಆರೋಪಗಳು ಅವರ ಮೇಲೆ ಬಂದಿದ್ದವು. ಅವರ ಈ ಬಗ್ಗೆ ಮಾತಾಡಲಿ ಯಾವ ಹಕ್ಕಿದೆ? ಅವರು ಒಬ್ಬರು ಜವಬ್ದಾರಿಯುತ ಸ್ಥಾನದಲ್ಲಿದ್ದಾರೆ. ಏನಾದರೂ ಸರಿಯಾದ ಪ್ರಕರಣಗಳಿದ್ದರೆ ಹೇಳಲಿ, ತನಿಖೆ ಮಾಡಿಸುತ್ತೇವೆ ಎಂದರು.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link