ಇಥಿಯೋಪಿಯಾ – ಬೆಂಗಳೂರು ನಡುವೆ ವಿಮಾನ ಸೇವೆ ಪುನರಾರಂಭ: ಎರಡು ವರ್ಷಗಳ ನಂತರ ಮತ್ತೆ ವೈಭವದ ಚಾಲನೆ

ಬೆಂಗಳೂರು:

ರಿಟಿಜ್ ಕಾರ್ಲಟನ್ ಹೋಟೆಲು ಸಭಾಂಗಣದಲ್ಲಿ ಇಥಿಯೋಪಿಯನ್ ಏರ್ ಲೈನ್ಸ್ ತಡೆರಹಿತ ವಿಮಾನಯಾನ ಹಾರಾಟ ಬೆಂಗಳೂರು ನಗರ ಮತ್ತು ಅಡಿಸ್ ಅಬಬಾಗೆ ನೇರ ಹಾರಾಟವನ್ನು ಇಥಿಯೋಪಿಯನ್ ಏರ್ ಲೈನ್ಸ್ ಮರು ಪ್ರಾರಂಭವನ್ನು ಮಾಡಲಾಯಿತು.

ಭಾರತ ಮತ್ತು ಉಪ-ಖಂಡದ ಇಥಿಯೋಪಿಯನ್ ಏರ್ ಲೈನ್ಸ್ ಪ್ರಾದೇಶಿಕ ನಿರ್ದೇಶಕರಾದ ಟಿಜಿಸ್ಟ್ ಎಶೆತು ಸೇಲ್ಸ್ ಮ್ಯಾನೇಜರ್ ಅಡಿಸ್ಸು ಎರ್ಮಿಯಾಸ್ ರವರು ಮತ್ತು ಎಸ್.ಟಿ.ಐ.ಸಿ.ನಿರ್ದೇಶಕರಾದ ಅಂಜು ವಾರಿಯಾರವರು,ಇಂಡಿಯ-ಎಥಿಯೋಪಿಯನ್ ಸೇಲ್ಸ್ ಮ್ಯಾನೇಜರ್ ಸಂದೀಪ್ ಕುಮಾರ್ ಮೀನಾ,ಪ್ರಾದೇಶಿಕ ವ್ಯವಸ್ಥಾಪಕರು ಮಾರಾಟ ದಕ್ಷಿಣ ಭಾರತ-ಇಥಿಯೋಪಿಯನ್ ಏರ್ ಲೈನ್ಯ್ ಶ್ರೀನಿವಾಸನ್ ಜಯಶೀಲನ್ ರವರು ಚಾಲನೆ ನೀಡಿದರು.

ಸೈಬರ್ ಭದ್ರತಾ ನೀತಿ: ಸರಕಾರಕ್ಕೆ ನೆರವು ನೀಡಲು ಐಬಿಎಂ ಆಸಕ್ತಿ ಕೃಷ್ಣರಾಜೇಂದ್ರ ಎಂಜಿನಿಯರಿಂಗ್ ಕಾಲೇಜು ಅಭಿವೃದ್ಧಿಗೆ ಐಬಿಎಂ ಆಸಕ್ತಿ

ಬೆಂಗಳೂರು, ಏ, 12; ಆಫ್ರಿಕಾದ ಅತಿ ದೊಡ್ಡ ವೈಮಾನಿಕ ಸಂಸ್ಥೆ ಮತ್ತು ಆಫ್ರಿಕಾದ ಅತ್ಯುತ್ತಮ ವಿಮಾನಯಾನ ಸೇವೆಯಾದ ಇಥಿಯೋಪಿಯನ್ ಏರ್ ಲೈನ್ಸ್ ಇದೀಗ ಭಾರತದ ಬೆಂಗಳೂರು – ಇಥಿಯೋಪಿಯಾ ನಡುವೆ ವಿಮಾನ ಸೇವೆಯನ್ನು ಪುನರಾರಂಭಿಸಿದೆ. 2022 ರ ಮಾರ್ಚ್ 27 ರಿಂದ ವಾರದಲ್ಲಿ ಮೂರು ದಿನ ವಿಮಾನ ಸೇವೆಯನ್ನು ವೈಭವದಿಂದ ಆರಂಭಿಸಿದೆ.

ಕೋವಿಡ್ ಸಾಂಕ್ರಾಮಿಕ ಆರಂಭವಾದ ಎರಡು ವರ್ಷಗಳ ನಂತರ ವಿಮಾನ ಸೇವೆ ಪುನರಾರಂಭವಾಗಿದೆ. 2019 ರ ಅಕ್ಟೋಬರ್ ನಲ್ಲಿ ಮೊದಲ ಬಾರಿಗೆ ಬೆಂಗಳೂರಿನಿಂದ ಇಥಿಯೋಪಿಯಾಗೆ ವಿಮಾನ ಸೇವೆ ಆರಂಭವಾಗಿತ್ತು. ಬೆಂಗಳೂರು ಮತ್ತು ಅಡ್ಡಿಸ್ ಅಬಡ ನಡುವೆ ಬಿ738 ವಿಮಾನದ ಮೂಲಕ ನಿಗದಿತ ವೇಳಾಪಟ್ಟಿಯಂತೆ ತಡೆರಹಿತ ಸೇವೆ ನೀಡಲಾಗುತ್ತಿತ್ತು.

ಸಿಎಂ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕರು ಸಚಿವ ಈಶ್ವರಪ್ಪ ವಜಾಗೆ ಕೈ ನಾಯಕರ ಪಟ್ಟು

ಪ್ರತಿ ಮಂಗಳವಾರ, ಗುರುವಾರ ಮತ್ತು ಭಾನುವಾರ ದಂದು ಇಥಿಯೋಪಿಯಾದಿಂದ ರಾತ್ರಿ 11 ಗಂಟೆಗೆ ಹೊರಡಲಿರುವ ವಿಮಾನ ಬೆಳಿಗ್ಗೆ 7.10 ಕ್ಕೆ ಬೆಂಗಳೂರಿಗೆ ಬರಲಿದೆ, ಮಂಗಳವಾರ, ಗುರುವಾರ ಮತ್ತು ಶನಿವಾರ 2.30 ಕ್ಕೆ ಬೆಂಗಳೂರಿನಿಂದ ಹೊರಡಲಿರುವ ವಿಮಾನ 5.50 ಕ್ಕೆ ಇಥಿಯೋಪಿಯಾಗೆ ತೆರಳಲಿದೆ.

ವಿಮಾನ ಸೇವೆ ಪುನರಾರಂಭ ಕುರಿತು ಮಾಹಿತಿ ನೀಡಿದ ಇಥಿಯೋಪಿಯಾ ವಿಮಾನ ಗುಂಪಿನ ಸಿಇಒ ಮೆಸ್ಪಿನ್ ತಾಸೆವ್, “ಭಾರತದ ವಾಣಿಜ್ಯ ರಾಜಧಾನಿಗೆ ವಿಮಾನ ಪುನರಾರಂಭಿಸಿರುವುದು ತಮಗೆ ಸಂತಸವಾಗಿದೆ. ನಮ್ಮ ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಲು ನಾವು ಬದ್ಧವಾಗಿದ್ದೇವೆ. ಭಾರತ – ಆಫ್ರಿಕಾ ಮತ್ತು ಅದರಾಚೆಗೆ ಸಂಪರ್ಕ ಸಾಧಿಸುವಲ್ಲಿ ಇಥಿಯೋಪಿಯಾ ವಿಮಾನ ಸಂಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ. ಐಸಿಟಿ ಕೇಂದ್ರವಾಗಿರುವ ಬೆಂಗಳೂರು, ರಾಜಧಾನಿ ನವದೆಹಲಿ ಮತ್ತು ಮುಂಬೈಗೆ ಹೆಚ್ಚುವರಿಯಾಗಿ ನಿರಂತರವಾಗಿ ಸೇವೆ ಒದಗಿಸುತ್ತಿದೆ.

ಕೆಪಿಎಸ್‍ಸಿ ಸದಸ್ಯರಾಗಿ ಬಿ.ವಿ ಗೀತಾ ನೇಮಕ

ಈ ವಿಮಾನಗಳು ಅಸ್ತಿತ್ವದಲ್ಲಿರುವ ಸರಕು ಸಾಗಾಣೆ ಮತ್ತು ಪ್ರಯಾಣಿಕ ವಿಮಾನ ಸೇವೆಗಳು ಭಾರತದ ಇತರ ಸ್ಥಳಗಳಿಗೆ ಪೂರಕವಾಗಿವೆ. “ ಭಾರತ ಮತ್ತು ಆಫ್ರಿಕಾ ನಡುವೆ ವೇಗವಾಗಿ ಬೆಳೆಯುತ್ತಿರುವ ವಿಮಾನ ಪ್ರಯಾಣಿಕರ ಬೇಡಿಕೆಗಳನ್ನು ಪೂರೈಸಲು ಬೆಂಗಳೂರು ನಗರವನ್ನು ಸೇರಿಸುವುದು ಅತ್ಯಂತ ಅಗತ್ಯವಾಗಿದೆ.

ಭಾರತದ ಉಪಖಂಡದಲ್ಲಿ ವ್ಯಾಪಾರ, ಹೂಡಿಕೆ, ಪ್ರವಾಸೋದ್ಯಮ ವಲಯಕ್ಕೆ ಈ ಸೇವೆ ಅನುಕೂಲವಾಗಲಿದೆ. ಬೆಂಗಳೂರು – ಅಡಿಸ್ ಅಬಾಬದ ನಡುವಿನ ವಿಮಾನ ಸೇವೆಯಿಂದ ದಕ್ಷಿಣ ಭಾರತದ ಬೆಂಗಳೂರು ಮತ್ತು ಆಫ್ರಿಕಾದ 60ಕ್ಕೂ ಹೆಚ್ಚು ಸ್ಥಳಗಳ ನಡುವೆ ವೇಗವಾಗಿ ಸಂಪರ್ಕ ಒದಗಿಸುತ್ತದೆ. ಪ್ರಸ್ತುತ ಇಥಿಯೋಪಿಯನ್, ಮುಂಬೈ ಮತ್ತು ದೆಹಲಿಗೆ ಪ್ರಯಾಣಿಕ ವಿಮಾನಗಳು ಮತ್ತು ಬೆಂಗಳೂರು,, ಚೆನ್ನೈ, ಮುಂಬೈ ಮತ್ತು ದೆಹಲಿಗೆ ಸರಕು ಸೇವೆಯನ್ನು ಇಥಿಯೋಪಿಯನ್ ವಿಮಾನ ಸಂಸ್ಥೆ ನಿರ್ವಹಿಸುತ್ತದೆ.

ಬೆಂಗಳೂರು : ಸರ್ವೋಚ್ಛ ನ್ಯಾಯಾಲಯದಿಂದ 1475 ಕಟ್ಟಡಗಳಿಗೆ ಅನುಮೋದನೆ

ಇಥಿಯೋಪಿಯಾದ ವಿಮಾನ ಅತ್ಯಂತ ತ್ವರಿತವಾಗಿ ವಿಮಾನ ಸೇವೆ ಒದಗಿಸುವ ಸಂಸ್ಥೆಯಾಗಿದ್ದು, 75 ವರ್ಷಗಳಿಂದ ವಿಮಾನಯಾನ ವಲಯದಲ್ಲಿ ಸೇವೆ ಸಲ್ಲಿಸುತ್ತಿದೆ. 130ಕ್ಕೂ ಹೆಚ್ಚು ರಾಷ್ಟ್ರಗಳಿಗೆ ನಾಗರಿಕ ಮತ್ತು ಸರಕು ಸೇವೆಯನ್ನು ಒದಗಿಸುತ್ತಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap