ಮೈಸೂರು
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಕೆ. ಜಯಪ್ರಕಾಶ್ ಹೆಗ್ಡೆ ಅವರು ನವೆಂಬರ್‌ನಲ್ಲಿ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ. ಅದು ಸಲ್ಲಿಕೆಯಾದ ಬಳಿಕ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಮ್ಮದು ಜಾತಿ ವ್ಯವಸ್ಥೆ ಆಧಾರಿತ ಸಮಾಜ. ಎಲ್ಲರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆ ಕೊಡಬೇಕು. ಅದಕ್ಕೆ ಜಾತಿವಾರು ಅಂಕಿ ಅಂಶಗಳು ಬೇಕು. ಅದಕ್ಕಾಗಿ ನಾವು ಜಾತಿಗಣತಿ ಮಾಡಿಸಿದ್ದೆವು. ಜಾತಿ ಗಣತಿ ಆದಾಗ ಕಾಂತರಾಜ್ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದರು.