ಲೋಕಸಭಾ ಚುನಾವಣೆ : ಬಂಗಾಳದಲ್ಲಿ ಸ್ಥಳೀಯರಿಂದ EVM ಲೂಟಿ…!

ನವದೆಹಲಿ:

    ಲೋಕಸಭಾ ಚುನಾವಣೆಯ 7 ಮತ್ತು ಅಂತಿಮ ಹಂತದ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈವರೆಗೂ ಶೇ.11.31ರಷ್ಟು ಮತದಾನವಾಗಿದೆ.

    ಬಿಹಾರ, ಚಂಡೀಗಢ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 7 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಭೆ ಕ್ಷೇತ್ರಗಳಲ್ಲಿ 2024ರ ಲೋಕಸಭೆ ಚುನಾವಣೆಯ ಏಳನೇ ಹಾಗೂ ಅಂತಿಮ ಹಂತದ ಮತದಾನ ಇಂದು (ಶನಿವಾರ) ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದ್ದು, ಬೆಳಿಗ್ಗೆ 9 ಗಂಟೆಯ ವೇಳೆಗೆ ಶೇ.11.31ರಷ್ಟು ಮತದಾನವಾಗಿದೆ.

   ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಶೇ.12.94ರಷ್ಟು ಮತದಾನವಾಗಿದ್ದಾರೆ, ಪಂಜಾಬ್ ನಲ್ಲಿ ಕಡಿಮೆ ಶೇ.9.64ರಷ್ಟು ಮತದಾನವಾಗಿದೆ.

ರಾಜ್ಯವಾರು ಮತದಾನದ ಮಾಹತಿ ಇಲ್ಲಿದೆ…

  • ಬಿಹಾರ ಶೇ,10.58
  • ಚಂಡೀಗಢ ಶೇ.11.64
  • ಹಿಮಾಚಲ ಪ್ರದೇಶ ಶೇ.14.35
  • ಜಾರ್ಖಂಡ್ ಶೇ.12.15
  • ಒಡಿಶಾ ಶೇ.7.69
  • ಪಂಜಾಬ್ ಶೇ.9.64
  • ಉತ್ತರ ಪ್ರದೇಶ ​ಶೇ.12.94
  • ಪಶ್ಚಿಮ ಬಂಗಾಳ ಶೇ.12.63

19-ಜಯನಗರ (SC) ಸಂಸದೀಯ ಕ್ಷೇತ್ರದ ವ್ಯಾಪ್ತಿಗೆ ಬರುವ 129-ಕುಲ್ತಾಲಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಗುಂಪೊಂದು ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಲೂಟಿ ಮಾಡಿದೆ ಎಂದು ವರದಿಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap