ಬೆಂಗಳೂರು:
ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್.ಡಿ ಕುಮಾರಸ್ವಾಮಿಯವರು ಇಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರಕ್ಕೆ ಭೇಟಿ ನೀಡಬೇಕಿತ್ತು. ಅರಣ್ಯ ಭೂಮಿ ಒತ್ತುವರಿ ತೆರವು ವೇಳೆ ರೈತರ ಬೆಳೆ ನಾಶಪಡಿಸಿರುವ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಸ್ಥಳೀಯ ರೈತರು ಹಾಗೂ ಅಧಿಕಾರಿಗಳೊಂದಿಗೆ ಹೆಚ್ಡಿ ಕುಮಾರಸ್ವಾಮಿಯವರು ಮಾತುಕತೆ ನಡೆಸಲಿದ್ದರು. ಆದರೆ, ಏಕಾಏಕಿ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಶ್ರೀನಿವಾಸಪುರ ಭೇಟಿ ರದ್ದಾಗಿದೆ.
ಹಲವು ವರ್ಷಗಳಿಂದ ರೈತರು ಹಾಗೂ ಅರಣ್ಯ ಇಲಾಖೆ ನಡುವೆ ನ್ಯಾಯಾಲಯದಲ್ಲಿ ಭೂ ವಿವಾದವಿತ್ತು, ನ್ಯಾಯಾಲಯದಲ್ಲಿ ಅರಣ್ಯ ಇಲಾಖೆ ಪರ ಆದೇಶ ಬಂದ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ, ಚಿಂತಗುಂಡ, ಕೇತಗಾನಹಳ್ಳಿ ಬಳಿ ಕಳೆದ 6 ದಿನಗಳಲ್ಲಿ ಇದುವರೆಗೆ ಸುಮಾರು 560 ಎಕರೆ ಒತ್ತುವರಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯ ನಡೆದಿದೆ. ತೆರವು ಕಾರ್ಯಾಚರಣೆ ವೇಳೆ ಕೋಳಿ ಫಾರಂಗಳು, ಮಾವಿನ ಮರಗಳು, ಎಲೆಕೋಸು, ಕ್ಯಾಪ್ಸಿಕಂ ಹಾಗೂ ಇತರೆ ಬೆಳೆಗಳು, ಪಂಪ್ ಸೆಟ್, ಬೋರ್ ವೆಲ್ ಎಲ್ಲವನ್ನೂ ತೆರವು ನಾಶಪಡಿಸಿದ ಆರೋಪ ಕೇಳಿಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ