ಡಿ ಕೆ ಶಿ ವಿರುದ್ಧ ಹರಿಹಾಯ್ದ ಮಾಜಿ ಸಿಎಂ…..!

ಬೆಂಗಳೂರು
 
    ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಪರಸ್ಪರ ವಾಗ್ದಾಳಿ ಜೋರಾಗುತ್ತಿದೆ. ಮೊನ್ನೆಯಷ್ಟೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದರು.
 
    ನನ್ನ ನಂಬಿಸಿ ಶಿವಕುಮಾರ್ ಕುತ್ತಿಗೆ ಕುಯ್ದರು ಎಂದಿದ್ದರು. ಕುಮಾರಸ್ವಾಮಿ ಅವರ ಆರೋಪಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ, ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಎಚ್.ಡಿ ಕುಮಾರಸ್ವಾಮಿ ಅವರೇ ಮೊದಲು ಮೈತ್ರಿ ಸರ್ಕಾರವನ್ನು ಉರುಳಿಸಿದ್ದು ಯಡಿಯೂರಪ್ಪನವರು ಎಂದಿರಿ, ನಂತರ ಮೈತ್ರಿ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯನವರು ಎಂದಿರಿ, ಈಗ ಡಿ ಕೆ ಶಿವಕುಮಾರ್ ಅವರು ಮೈತ್ರಿ ಸರ್ಕಾರ ಬೀಳಿಸಿದರು ಎನ್ನುತ್ತಿದ್ದೀರಿ.
 
    ಮಾತು ಬದಲಿಸುವ ನಿಮ್ಮ ನಾಲಿಗೆಯನ್ನು ಕಂಡು ಬಣ್ಣ ಬದಲಿಸುವ ಗೋಸುಂಬೆಯೂ ನಾಚಿಕೊಳ್ಳುತ್ತಿದೆ, ಅಂದು ಶಾಸಕರನ್ನು ಅಪಹರಿಸಿ ಸ್ಪೆಷಲ್ ಫ್ಲೈಟ್ ಹತ್ತಿಸಿ ಕಳಿಸಿದವರೊಂದಿಗೆ ಇಂದು ಕುಳಿತು ನಾಲಿಗೆ ಹೊರಳಿಸುತ್ತಿರುವ ನಿಮಗೆ ಕನಿಷ್ಠ ಲಜ್ಜೆ ಎಂಬುದಿಲ್ಲದಾಗಿದ್ದು ದುರಂತ ಎಂದು ಲೇವಡಿ ಮಾಡಿದೆ.
    ಕುಮಾರಸ್ವಾಮಿಯವರೇ, ನಿಮ್ಮ ಪಕ್ಷದಲ್ಲಿ ನಿಮ್ಮ ಕುಟುಂಬವಲ್ಲದೆ ಬೇರೆ ಇನ್ಯಾರಿಗಾದರೂ ಉಸಿರಾಡಲು ಬಿಟ್ಟಿದ್ದೀರಾ? ಸಿದ್ದರಾಮಯ್ಯನವರಿಗೆ ದ್ರೋಹ ಎಸಗಿದಿರಿ, ಹೆಚ್ ವಿಶ್ವನಾಥ್ ಅವರಿಗೆ ದ್ರೋಹ ಮಾಡಿದಿರಿ, ಈಗ ಸಿ ಎಂ ಇಬ್ರಾಹಿಂ ಅವರನ್ನು ಮೂಲೆಗುಂಪು ಮಾಡಿದಿರಿ, ಬೆಂಬಲಿಸಿದ ಜಾತ್ಯತೀತ ಸಿದ್ಧಾಂತದ ಮತದಾರರು ಹಾಗೂ ಅಲ್ಪಸಂಖ್ಯಾತರಿಗೆ ವಂಚಿಸಿದಿರಿ. ಹಿಂದೆ ನಿಮ್ಮನ್ನು ಹಾಗೂ ನಿಮ್ಮ ಪಕ್ಷವನ್ನು ಬೆಳೆಸಿದ ಯಾರ ಬಗ್ಗೆಯೂ ನಿಮ್ಮಲ್ಲಿ ಕೃತಜ್ಞತೆಯಾಗಲಿ, ಉಪಕಾರ ಸ್ಮರಣೆಯಾಗಲಿ ಇಲ್ಲ. ನಿಮ್ಮ ಕೈಗೆ ಅಧಿಕಾರ ಕೊಟ್ಟವರ ಬಗ್ಗೆ ಕನಿಷ್ಠ ಗೌರವವೂ ಇಲ್ಲ.

    ಕುಮಾರಸ್ವಾಮಿ ಎಂದರೆ ಅವಕಾಶವಾದಿ, ಗೋಸುಂಬೆ ಬುದ್ಧಿಯ ರಾಜಕಾರಿಣಿ ಎಂದು ರಾಜ್ಯದ ಜನತೆಗೆ ಅರಿವಾಗಿದೆ ಎಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap