ಮಾಜಿ ಗೆಳತಿಗೆ ನೂರಾರು ಕೋಟಿ ಆಸ್ತಿ ನೀಡಿದ ಮಾಜಿ ಪ್ರಧಾನಿ….!

ವದೆಹಲಿ:

      ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ (86) ಜೂ.12ಕ್ಕೆ ಅಸುನೀಗಿದ್ದು ಈಗ ಹಳೆಯ ವಿಚಾರ. ಅವರ ಹೆಸರಲ್ಲಿ ಇರುವ ಆಸ್ತಿ ಮೌಲ್ಯ 44,612 ಕೋಟಿ ರೂ.ಗಳು! ಇದರಲ್ಲಿ ಅವರು ತಮ್ಮ ಜೊತೆಗಾರ್ತಿ, ಕೇವಲ 33 ವರ್ಷದ ಮಾರ್ತಾ ಫಾಸಿನಾ ಹೆಸರಿಗೆ 906 ಕೋಟಿ ರೂ.ಗಳನ್ನು ಬರೆದಿದ್ದಾರೆ.

      ಗೆಳತಿಯಂತಿದ್ದ ಫಾಸಿನಾಗೆ ಅಷ್ಟು ಆಸ್ತಿ ನೀಡಿರುವುದು ಅಚ್ಚರಿ ಸೃಷ್ಟಿಸಿದೆ. ಬೆರ್ಲುಸ್ಕೋನಿ ಕೇವಲ ಮಾಜಿ ಪ್ರಧಾನಿಯಾಗಿರಲಿಲ್ಲ. ಮಾಧ್ಯಮ ಜಗತ್ತಿನ ಖ್ಯಾತ ಉದ್ಯಮಿಯೂ ಆಗಿದ್ದರು. ಇದೀಗ ಅವರು ಬರೆದಿಟ್ಟಿದ್ದ ವಿಲ್‌ ಬಹಿರಂಗವಾಗಿದೆ. ಅದರಲ್ಲಿ ಯಾರಿಗೆ ಏನು ಸೇರಬೇಕು ಎಂಬ ವಿಚಾರ ದಾಖಲಿಸಲಾಗಿದೆ.

     ತಮ್ಮ ಮಾಧ್ಯಮ ಜಗತ್ತಿನ ಉತ್ತರಾಧಿಕಾರವನ್ನು ಅವರು ಇಬ್ಬರು ಹಿರಿಯ ಮಕ್ಕಳಿಗೆ ನೀಡಿದ್ದಾರೆ. ತಮ್ಮ ಸಹೋದರನಿಗೂ 906 ಕೋಟಿ ರೂ. ಸಿಗುವಂತೆ ಮಾಡಿದ್ದಾರೆ. ಅವರು ಆತ್ಮೀಯ ಸಲಹೆಗಾರ ಮಾರ್ಸೆಲೊ ಡೆಲ್‌ ಉಟ್ರಿಗೂ ದೊಡ್ಡ ಮೊತ್ತ ಸಿಗುವಂತೆ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap