ಇದು ಈಗ ಭಾರತದ ದುಬಾರಿ ಜಾಹೀರಾತು….!

ನವದೆಹಲಿ :

     ಜನರನ್ನು ಆಕರ್ಷಿಸಲು ದೊಡ್ಡ ಬಜೆಟ್​ನಲ್ಲಿ ಜಾಹೀರಾತುಗಳನ್ನು ಮಾಡಲಾಗುತ್ತಿದೆ. ಜನರನ್ನು ಆಕರ್ಷಿಸಲು ಏನೆಲ್ಲ ಬೇಕೋ ಅದೆಲ್ಲವನ್ನೂ ಮಾಡಲಾಗುತ್ತಿದೆ. ಇತ್ತೀಚೆಗೆ ಡ್ರೀಮ್ 11  ಜಾಹೀರಾತೊಂದು ಪ್ರಸಾರ ಕಂಡಿದೆ. ಇದರಲ್ಲಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಈ ಜಾಹೀರಾತಿಗೆ ಖರ್ಚಾದ ಹಣದಲ್ಲಿ ಒಂದು ದೊಡ್ಡ ಬಜೆಟ್​ನ ಸಿನಿಮಾನೇ ಮಾಡಬಹುದು ಎಂಬ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ಭರ್ಜರಿ ಚರ್ಚೆ ನಡೆಯುತ್ತಿದೆ. ಹಾಗಾದರೆ ಈ ಜಾಹೀರಾತಿಗೆ ಖರ್ಚಾದ ಹಣ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ. 

    ‘ಡ್ರೀಮ್ 11’ ಜಾಹೀರಾತಿನಲ್ಲಿ ನಟರಾದ ಆಮಿರ್ ಖಾನ್, ರಣಬೀರ್ ಕಪೂರ್, ಕ್ರಿಕೆಟರ್​ಗಳಾದ ರೋಹಿತ್ ಶರ್ಮಾ, ಜಸ್​ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಮೊದಲಾದವರು ಇದ್ದರು. ಇನ್ನು, ಇದರ ಪ್ರಮೋಷನ್​ಗೆ ಆಲಿಯಾ ಭಟ್ ಹಾಗೂ ಮೊದಲಾದವರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ಜಾಹೀರಾತು ನಿರ್ಮಾಣಕ್ಕೆ ಖರ್ಚಾದ ಮೊತ್ತಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ.

   ಆಮಿರ್ ಖಾನ್ ಅವರು ಪ್ರತಿ ಜಾಹೀರಾತಿಗೆ 10-12 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ರೋಹಿತ್ ಶರ್ಮಾ ಅವರು 3.5 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ರಿಷಭ್ ಪಂತ್ 1-2 ಕೋಟಿ ರೂಪಾಯಿ, ರಣಬೀರ್ ಕಪೂರ್ 6 ಕೋಟಿ ರೂಪಾಯಿ, ಹಾರ್ದಿಕ್ ಪಾಂಡ್ಯ 2-3 ಕೋಟಿ ರೂಪಾಯಿ. ಅರ್ಬಾಜ್ ಖಾನ್ 35 ಲಕ್ಷ ರೂಪಾಯಿ, ಅಶ್ವಿನ್ 1 ಕೋಟಿ ರೂಪಾಯಿ, ಬೂಮ್ರಾ 2-3 ಕೋಟಿ ರೂಪಾಯಿ, ಜಾಕಿ ಶ್ರಾಫ್ 50 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಾರೆ. ಈ ಎಲ್ಲರೂ ಈ ಜಾಹೀರತಿನಲ್ಲಿ ಇದ್ದಾರೆ. ಇವರ ಸಂಭಾವನೆ ಸೇರಿದರೆ 25-35 ಕೋಟಿ ರೂಪಾಯಿ ಆಗುತ್ತದೆ. ಇಷ್ಟಕ್ಕೆ ನಿಂತಿಲ್ಲ.

   ಈ ಜಾಹೀರಾತಿನ ಪ್ರೊಡಕ್ಷನ್​ಗೂ ಹಣ ಬೇಕಾಗುತ್ತದೆ. ನಿರ್ದೇಶಕರಿಗೆ, ಸೆಟ್ ನಿರ್ಮಾಣಕ್ಕೆ ಹಣ ಪಾವತಿ ಮಾಡಬೇಕಾಗುತ್ತದೆ. ಈ ಜಾಹೀರಾತಿನ ಪ್ರಮೋಷನ್​ಗೆ ಆಲಿಯಾ ಭಟ್ ಅವರನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಅವರು ಕೂಡ ಸಂಭಾವನೆ ಪಡೆದಿದ್ದಾರೆ. ಇದು ಸೇರಿದರೆ 40-50 ಕೋಟಿ ರೂಪಾಯಿವರೆಗೆ ಜಾಹೀರಾತು ನಿರ್ಮಾಣಕ್ಕೆ ಖರ್ಚಾಗಿದೆ ಎಂದು ವರದಿ ಆಗಿದೆ. 

   ಇಷ್ಟು ದೊಡ್ಡ ಮೊತ್ತದಲ್ಲಿ ಒಂದು ದೊಡ್ಡ ಬಜೆಟ್ ಸಿನಿಮಾ ನಿರ್ಮಾಣ ಮಾಡಬಹುದು ಎಂಬುದು ಕೆಲವರ ಅಭಿಪ್ರಾಯ. ಇನ್ನೂ ಕೆಲವು ವರದಿಗಳ ಪ್ರಕಾರ ಈ ಜಾಹೀರಾತಿನಲ್ಲಿ ಭಾಗಿ ಆದ ಎಲ್ಲಾ ಸೆಲೆಬ್ರಿಟಿಗಳು ವರ್ಷದ ಕಾಂಟ್ರ್ಯಾಕ್ಟ್​ನಲ್ಲಿ ಇರುವವರು. ಹೀಗಾಗಿ, ಆ ಲೆಕ್ಕದಲ್ಲಿ ಹಣ ಪಾವತಿ ಮಾಡಲಾಗಿದ್ದು, ಇಷ್ಟು ದೊಡ್ಡ ಮೊತ್ತ ಖರ್ಚಾಗಿಲ್ಲ ಎಂದು ಕೂಡ ಹೇಳಲಾಗುತ್ತಿದೆ.

Recent Articles

spot_img

Related Stories

Share via
Copy link