ತುಮಕೂರು:
ಫೇಸ್‍ಬುಕ್‍ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಮೂಲಕ ಪರಿಚಿತರ ಹೆಸರಿನಲ್ಲಿ ಹಣ ಕೇಳಿ ವಂಚಿಸುವ ದಂಧೆ ಮುಂದುವರಿದೇ ಇದ್ದು, ಇದಕ್ಕೆ ಸಂಬಂಧಿಸಿದಂತೆ ನ. 6 ರಂದು ವ್ಯಕ್ತಿಯೊಬ್ಬರು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಭಿಜಿತ್ ರಾಮಚಂದ್ರ ಎಂಬುವರು ಕನ್ನಯ್ಯ ಕುಮಾರ್ ಎಂಬುವರಿಗೆ ಇತ್ತೀಚೆಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ. ಅದರಲ್ಲಿ, `ನನಗೆ ಅಪಘಾತವಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ತಕ್ಷಣ 25 ಸಾವಿರ ರೂ. ಕಳುಹಿಸಿ’ ಎಂದು ಫೇಸ್ ಬುಕ್ ಖಾತೆ ಮೂಲಕ ಕೋರಿ ಕೊಂಡಿದ್ದಾರೆ. ಅವರ ಮನವಿ ಪರಿಗಣಿಸಿ ಕನ್ನಯ್ಯ ಕುಮಾರ್ ಒಮ್ಮೆ 15 ಸಾವಿರ, ಮತ್ತೊಮ್ಮೆ 10 ಸಾವಿರ ರೂ. ಹಣವನ್ನು ಫೋನ್ ಪೇ ಮಾಡಿದ್ದಾರೆ.
ಇದಾದ ನಂತರ ಅದೇ ಅಭಿಜಿತ್ ರಾಮಚಂದ್ರ ಅವರು ಕನ್ನಯ್ಯಕುಮಾರ್ ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಹಣ ಕೇಳಿದ್ದಾರೆ. ಆದರೆ ಈ ಬಾರಿ ಕನ್ನಯ್ಯ ಕುಮಾರ್ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಹಣ ಕೇಳಿದ್ದಾರೆ. ಕೆಲವರು ಕರೆ ಮಾಡಿ ವಿಚಾರಿಸಿದಾಗ ಇಲ್ಲಿ ವಂಚನೆ ನಡೆಯುತ್ತಿರುವುದು ಬಯಲಾಗಿದೆ. ಹೀಗೆ ಸ್ನೇಹಿತರಂತೆ ಪರಿಚಯಿಸಿಕೊಂಡು ಹಣ ಕಿತ್ತಿರುವ ವ್ಯಕ್ತಿ ವಿರುದ್ಧ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕೆಂದು ಕನ್ನಯ್ಯಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಭಿಜಿತ್ ರಾಮಚಂದ್ರ ಅವರ ಖಾತೆ ಮತ್ತು ಮೊಬೈಲ್ ನಂಬರ್ 8811960139 ಆಗಿದ್ದು, ಮಾಹಿತಿ ಸಂಗ್ರಹಿಸಲಾಗಿ ಇದು ಕೇರಳ ಮೂಲದ್ದು ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ