ಬೆಂಗಳೂರು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತವರಿಗೆ ಹೋಗಿದ್ದ ಪತ್ನಿಯ ಮೊಬೈಲ್ಗೆ ಕರೆ ಮಾಡಿ ಕೊನೆಯ ಬಾರಿ ನನ್ನ ಮುಖ ನೋಡು ಎಂದು ಹೇಳಿ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಮಾದನಾಯಕನಹಳ್ಳಿಯ ಅಡಕಿ ಮಾರನಹಳ್ಳಿಯ ಆನಂದ್ (28) ಎಂದು ಗುರುತಿಸಲಾಗಿದೆ. ಆನಂದ್ ಪ್ರತಿದಿನ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ದರಿಂದ ಬೇಸರಗೊಂಡು ಪತ್ನಿ ತವರಿಗೆ ಹೋಗಿದ್ದರು.
ಇದರಿಂದ ನೊಂದ ಆನಂದ್ ಬುಧವಾರ ರಾತ್ರಿ ಮನೆಗೆ ಕುಡಿದು ಬಂದು ಪತ್ನಿಗೆ ಕರೆ ಮಾಡಿ ಕೊನೆಯ ಬಾರಿ ನನ್ನ ಮುಖ ನೋಡಿಕೋ ಎಂದು ತಿಳಿಸಿ ನೇಣು ಹಾಕಿಕೊಂಡಿದ್ದಾನೆ.
ಪ್ರತಿ ಬಾರಿ ಜಗಳ ಆದಾಗ ಸಾಯ್ತಿನಿ ಎನ್ನುತ್ತಿದ್ದ. ರಾತ್ರಿಯೂ ಕೂಡ ಮನೆಯವರಿಗೆ ತಿಳಿಸಿದ್ದ. ಆದರೆ ಅಷ್ಟೊಂದು ಗಂಭೀರವಾಗಿ ಮನೆಯವರು ಪರಿಗಣಿಸದ ಹಿನ್ನೆಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








