ನವದೆಹಲಿ
ಅಮೇರಿಕದ ಪ್ರಸಿದ್ಧ ಖಾಸಗಿ ಇಕ್ವಿಟಿ ಹೂಡಿಕೆ ಮತ್ತು ಹತೋಟಿ ಖರೀದಿಗಳ ಕ್ಷೆತ್ರದಲ್ಲಿ ಅಗ್ರಗಣ್ಯ ಎಂದು ಹೆಸರಾಗಿದ್ದ ಅಮೇರಿಕದ ಬಿಲಿಯನೇರ್ ಥಾಮಸ್ ಲೀ ಅವರು ಫೆ.23ರಂದು ಮ್ಯಾನ್‌ಹ್ಯಾಟನ್ ನಲ್ಲಿರುವ ತಮ್ಮ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಲೀ ಅವರು ತಮ್ಮ ಸಂಸ್ಥೆಯ ಪ್ರಧಾನ ಕಚೇರಿಯಾದ ಮ್ಯಾನ್‌ಹ್ಯಾಟನ್ ಕಚೇರಿಯಲ್ಲಿ ಬೆಳಗ್ಗೆ ಸ್ಥಳೀಯ ಕಾಲಮಾನ 11:10 ರ ಸುಮಾರಿಗೆ ಸಾವನ್ನಪ್ಪಿದ್ದಾರೆ. ಲೀ ಅವರು ಸ್ವಯಂ ಗುಂಡು ಹಾರಿಸಿಕೊಳ್ಳುವ ಮೂಲಕ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ ಜೀವ ಉಳಿಸುವ ಸಕಲ ಪ್ರಯತ್ನಗಳನ್ನು ಮಾಡಲಾಯಿತಾದರೂ ವಿಫಲವಾಗಿವೆ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
