ದಸರಾ ಪ್ರಯುಕ್ತ ವಿವೇಕಾನಂದ ವಿದ್ಯಾಪೀಠ ಶಾಲೆಯಲ್ಲಿ ವಿಶೇಷ ಪೋಷಕು ಪ್ರದರ್ಶನ

ಗುಬ್ಬಿ:

    ನಮ್ಮ ಪಾರಂಪರಿಕ ನವರಾತ್ರಿ ಮತ್ತು ಒಂಬತ್ತು ದಿನಗಳ ಕಾಲ ಮನೆ ಮನೆಗಳಲ್ಲಿ ಗೊಂಬೆ ಕೂಡಿಸುತ್ತಿದ್ದ ಕಾಲ ಮರೆಯಾಗುತ್ತಿದ್ದು ಇಂದಿನ ಯುವ ಪೀಳಿಗೆಗೆ ಇದನ್ನು ನೆನಪಿಸುವ ಕಾಲ ಬಂದಿದೆ ಎಂದು ಗುಬ್ಬಿಯ ವಿವೇಕಾನಂದ ಸಂಸ್ಥೆಯ ಕಾರ್ಯದರ್ಶಿ ಅರುಣ್ ಕುಮಾರ್ ತಿಳಿಸಿದರು 

  ಸೋಮವಾರ ದಸರಾ ಹಬ್ಬದ ವಿಶೇಷ ಶಾಲೆಯ ಮಕ್ಕಳಿಗೆ ವಿವಿಧ ವೇಷ ಭೂಷಣಗಳನ್ನು ತೊಡಿಸಿ.ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು

     ವಿವೇಕಾನಂದ ವಿದ್ಯಾ ಪೀಠ ಶಾಲೆಯಲ್ಲಿ ಪೌರಾಣಿಕ ವೇಷಭೂಷಣಗಳಲ್ಲಿ, ನವದುರ್ಗೆ, ಸೀತಾರಾಮ, ಹನುಮಂತ, ಗಣೇಶ, ನರಸಿಂಹ, ಕೃಷ್ಣ, ಮತ್ತು ಅನೇಕ ಉಡುಪುಗಳನ್ನು ಧರಿಸಿ ಸಿಂಗಾರಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಸಂಗೀತಾ, ಅಚಲಾ, ಅಭಿಷೇಕ್, ಶಿಕ್ಷಕ-ಶಿಕ್ಷಕಿಯರು, ಪೋಷಕರು ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು,

Recent Articles

spot_img

Related Stories

Share via
Copy link