ಸಚಿವರ ವಿರುದ್ಧ ರೈತರ ಆಕ್ರೋಶ

 

ಬೆಂಗಳೂರು:

ಕರ್ನಾಟಕ ಪಶು ವೈದ್ಯಕೀಯ ಪರಿಷತ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾವು ಖರೀದಿದಾರರು ಮತ್ತು ಮಾರಾಟಗಾರರ ಸಮಾವೇಶದಲ್ಲಿ ತೋಟಗಾರಿಕೆ ಸಚಿವ ಸಚಿವ ಮುನಿರತ್ನ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ರೈತರ ಕೆಂಗಣ್ಣಿಗೆ ಗುರಿಯಾದ ಪ್ರಸಂಗ ನಡೆಯಿತು.

ತಮ್ಮ ಭಾಷಣ ಆಗುತ್ತಿದ್ದಂತೆ ಹೊರಡಲು ಅಣಿಯಾದ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ರೈತರ ಕಷ್ಟ ಸ್ವಲ್ಪ ಕೇಳಿಸಿಕೊಳ್ಳಿ. ಇದಕ್ಕಾಗಿ 10 ನಿಮಿಷ ಸಮಯ ಕೊಡಿ ಎಂದು ಕಿಡಿಕಾರಿದರು. ಈ ವೇಳೆ ಮಾತನಾಡಿದ ಮಾವು ಬೆಳೆಗಾರರ ಸಂಘದ ಚಿನ್ನಪ್ಪರೆಡ್ಡಿ, ಸರ್ಕಾರ ಬದಲಾಗುತ್ತಿದೆ. ಮಂತ್ರಿಗಳು ಬದಲಾಗುತ್ತಿದ್ದಾರೆ. ಆದರೆ ಹಲವು ವರ್ಷದಿಂದ ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಸಲ್ಲಿಸುತ್ತಿರುವ ಮನವಿಗೆ ಮಾತ್ರ ಸ್ಪಂದಿಸುತ್ತಿಲ್ಲ. ಅತಿ ಹೆಚ್ಚು ಮಾವು ಬೆಳೆಯುವ ಕೋಲಾರ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಮಾವು ಅಭಿವೃದ್ಧಿ ಮಂಡಳಿಗೂ ಹೆಚ್ಚು ಅನುದಾನ ನೀಡುತ್ತಿಲ್ಲ.

ಮಾವು ಸಂಸ್ಕರಣಾ ಘಟಕ ಸ್ಥಾಪಿಸಿಲ್ಲ ಎಂದು ದೂರಿದರು. ಮಂಡಳಿಗೆ 100ಕೋಟಿ ಅನುದಾನ ಒದಗಿಸಬೇಕೆಂದು ಒತ್ತಾಯಿಸಿದರು. ಮಂಡಳಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಮಾವು ರಫ್ತು ಮಾಡುವವರು ಅನೇಕ ಸಮಸ್ಯೆ ವಿವರಿಸಿದರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link