ತುರುವೇಕೆರೆ:
ಟ್ರಾಕ್ಟರ್ ನಲ್ಲಿ ಭೂಮಿ ಉಳುಮೆ ಮಾಡುವ ಸಂಧರ್ಭದಲ್ಲಿ ಬದಿಯಲ್ಲಿ ನಿಂತಿದ್ದ ರೈತನ ಮೇಲೆ ಟ್ಯಾಕ್ಟರ್ ಉರುಳಿ ಬಿದ್ದು ರೈತ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಮೃತ ದುರ್ದೈವಿ ಕೋಡಿಹಳ್ಳಿ ಕಂಚೀರಾಯಪ್ಪ (45) ಎಂದು ತಿಳಿದು ಬಂದಿದ್ದು. ಈತನು ಭಾನುವಾರ ಬೆಳಿಗ್ಗೆ ತೋಟದಲ್ಲಿ ಉಳುಮೆ ಮಾಡಿಸಲು ಚಾಲಕನ ಜೊತೆ ತೋಟಕ್ಕೆ ತೆರಳಿದ್ದಾರೆ. ಟ್ರಾಕ್ಟರ್ ಚಾಲಕ ಉಳುಮೇ ಮಾಡುವಾಗ ಅತೀ ವೇಗವಾಗಿ ಚಲಿಸಿದ್ದರಿಂದ ಒಂದು ಚಕ್ರ ಬದುವನ್ನು ಹತ್ತಿ ಟ್ರಾಕ್ಟರ್ ಪಲ್ಟಿಯಾಗಿ ಬದುವಿನಲ್ಲಿ ನಿಂತಿದ್ದ ರೈತ ಕಂಚಿರಾಯಪ್ಪ ಮೇಲೆ ಬಿದ್ದಿದೆ.
ಟ್ರಾಕ್ಟರ್ ಅಡಿ ಸಿಲುಕಿದ ರೈತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತ ರೈತನಿಗೆ ತಂದೆ, ತಾಯಿ, ಹೆಂಡತಿ ಹಾಗೂ ಮಗಳನ್ನು ಹೊಂದಿದ್ದಾರೆ. ಬಡ ಕುಟುಂಬದಿಂದ ಬಂದ ಈತ ರೈತಸಂಘದ ಸದಸ್ಯನಾಗಿದ್ದನು. ಕುಟುಂಬಕ್ಕೆ ಆಸರೆಯಾಗಿದ್ದ ಇದ್ದೊಬ್ಬ ಮಗನನ್ನು ಕಳೆದುಕೊಂಡ ಕುಟುಂಬದ ಹಾಗು ಸಂಬಂದಿಕರ ರೋಧನ ಮುಗಿಲು ಮುಟ್ಟಿತ್ತು. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ