ರೈತರ ಆದಾಯ ದುಪ್ಪಟ್ಟಿಗೆ ಹೆಜ್ಜೆ: ರಾಜ್ಯದಲ್ಲಿ ಸೆಕೆಂಡರಿ ಅಗ್ರಿಕಲ್ಚರ್

ಬೆಂಗಳೂರು:

 ಕೃಷಿ ಹೊರತುಪಡಿಸಿ ಇತರ ಚಟುವಟಿಕೆಗಳ ಮೂಲಕ ರಾಜ್ಯದಲ್ಲಿ ರೈತರ ಆದಾಯ ದುಪ್ಪಟ್ಟು ಮಾಡುವುದಕ್ಕೆ ಪೂರಕವಾಗಿ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಕೃಷಿ ಸಚಿವ ಬಿ.ಸಿ. ಪಾಟೀಲ್ ಸಿಎಂ ಬಸವರಾಜ ಬೊಮ್ಮಾಯಿ ಜತೆ ರ್ಚಚಿಸಿದ ಬಳಿಕ ನಿರ್ದೇಶನಾಲಯ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಕೃಷಿಕರ ಆದಾಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಶೋಕ್ ದಳವಾಯಿ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆ ಸಮಿತಿ ಒಂಬತ್ತು ಸಂಪುಟಗಳಲ್ಲಿ ವರದಿ ನೀಡಿತ್ತು.

ದಳವಾಯಿ ಜತೆಗೂ ಸಭೆ ನಡೆಸಿದ್ದ ಸರ್ಕಾರ ಇದೀಗ ರಾಜ್ಯದಲ್ಲಿ ಕೃಷಿ ನಿರ್ದೇಶಕರ ಹುದ್ದೆಗೆ ಸಮಾನವಾದ ಅಧಿಕಾರಿ ನೇತೃತ್ವದಲ್ಲಿ 13 ಜನ ತಜ್ಞರ ತಂಡವನ್ನೊಳಗೊಂಡ ನಿರ್ದೇಶನಾಲಯ ಸ್ಥಾಪಿಸಿದೆ. ಇದಕ್ಕೆ ಪೂರಕವಾಗಿ ಸಚಿವ ಬಿ.ಸಿ. ಪಾಟೀಲ್ ಹಲವು ಸಭೆ ನಡೆಸಿದ್ದರು.

ಏನೇನು ಬರುತ್ತದೆ?: 

ಜೇನುಸಾಕಣೆ, ಜೈವಿಕ ಗೊಬ್ಬರ ಘಟಕಗಳು, ಸಾವಯವ ಬಣ್ಣ ಅಥವಾ ಡೈ ತಯಾರಿಕೆ, ಅಣಬೆ, ರೇಷ್ಮೆ ಹುಳು ಸಾಕಣೆ, ನರ್ಸರಿ ಇತ್ಯಾದಿ ಸಣ್ಣ ಪ್ರಮಾಣದ ಚಟುವಟಿಕೆಗಳು ಸೆಕೆಂಡರಿ ಕೃಷಿಗೆ ಉತ್ತಮ ಉದಾಹರಣೆಯಾಗಿದೆ. ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರ ಜೈವಿಕ ಸಂಪನ್ಮೂಲಗಳ ಪ್ರಾಥಮಿಕ ಉತ್ಪನ್ನ ಮತ್ತು ಉಪಉತ್ಪನ್ನಗಳನ್ನು ಕಚ್ಚಾವಸ್ತುವಾಗಿ ಬಳಸಿಕೊಂಡು ಉತ್ಪಾದಕ ಚಟುವಟಿಕೆ ಮಾಡುವುದು.

ಸ್ಥಳೀಯವಾಗಿ ಲಭ್ಯವಿರುವ ಮಾನವ ಸಂಪನ್ಮೂಲ ಬಳಕೆಗೆ ಕೌಶಲ ತರಬೇತಿ ನೀಡಿ ಉದ್ಯಮ ಚಟುವಟಿಕೆ ಮಾಡುವುದು. ಎಂ.ಎಸ್.ಎಂ.ಇ.ಡಿ ಕಾಯಿದೆ 2006 ಅಡಿಯಲ್ಲಿ ವರ್ಗೀಕರಿಸಲಾದ ಸಣ್ಣ ಅಥವಾ ಮಧ್ಯಮ ಉದ್ಯಮಗಳನ್ನು ಅಭಿವೃದ್ಧಿಪಡಿಸುವುದು ಪ್ರಮುಖವಾಗಿ ಸೇರಿದೆ.

ಆರ್ಥಿಕ ನೆರವು ಹೇಗೆ: 

ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆ, ಸಣ್ಣ ಉದ್ಯಮಗಳಿಗೆ ನೆರವು ನೀಡಲು ಇರುವ ಮೊತ್ತದಲ್ಲಿ ರಾಜ್ಯಕ್ಕೆ ಸಿಗುವ 500 ಕೋಟಿ ರೂ., ರಾಜ್ಯದ ಸಣ್ಣ ಹಾಗೂ ಸೂಕ್ಷ್ಮ ಉದ್ಯಮಗಳಿಗೆ ನೀಡುವ ಅನುದಾನ, ಮೇಕ್ ಇನ್ ಇಂಡಿಯಾ ಮೊದಲಾದ ಮೂಲಗಳಿಂದ ಆರ್ಥಿಕ ನೆರವು ಪಡೆಯುವುದು.

ನಿರ್ದೇಶನಾಲಯ, ಸಮಿತಿಗಳು:

ಯೋಜನೆ ಜಾರಿಗೆ ನಿರ್ದೇಶನಾಲಯ ರಚಿಸಲಾಗಿದೆ. ಕೃಷಿ ನಿರ್ದೇಶಕರ ಹುದ್ದೆಗೆ ಸಮಾನಾಂತರವಾಗಿ ನಿರ್ದೇಶಕರ ಹುದ್ದೆ ಇರುತ್ತದೆ. ಸಕ್ಕರೆ ನಿರ್ದೇಶಕ, ಖಾದಿ ಮತ್ತು ಗ್ರಾಮೋದ್ಯಮ ನಿರ್ದೇಶಕ, ಜಲಾನಯನ, ಪಶು ಸಂಗೋಪನೆ, ತೋಟಗಾರಿಕೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ ಇಲಾಖೆಗಳ ಜಂಟಿ ನಿರ್ದೇಶಕರು,

ಅರಣ್ಯ ಸಂರಕ್ಷಣಾಧಿಕಾರಿ, ಕೃಷಿ ವಿವಿಯ ಕೃಷಿ ಮಾರುಕಟ್ಟೆ, ಕೃಷಿ ಆರ್ಥಿಕತೆ ವಿಭಾಗಗಳ ಪ್ರಾಧ್ಯಾಪಕರು, ಇಬ್ಬರು ಪ್ರಗತಿಪರ ಕೃಷಿಕರು, ಇಬ್ಬರು ಕೃಷಿ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಪ್ರತಿನಿಧಿಗಳ ಸಮಿತಿಯನ್ನು ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸಿಇಓ ನೇತೃತ್ವದಲ್ಲಿ ಸಮಿತಿಗಳಿರುತ್ತವೆ.

ಯಾಕೆ ಅಗತ್ಯ?: 

ಈವರೆಗೆ ಕೇವಲ ಉತ್ಪಾದನೆಗಷ್ಟೇ ಕೃಷಿ ಇಲಾಖೆ ಚಟುವಟಿಕೆ ಸೀಮಿತವಾಗಿತ್ತು. ‘ಒಂದು ಕಾಳು ಉಳಿಸುವುದು ಎರಡು ಕಾಳು ಉತ್ಪಾದನೆಗೆ ಸಮ’ ಎಂಬ ಮಾತಿನ ನಡುವೆಯೇ ಕೊಯ್ಲೋತ್ತರ ನಷ್ಟ ಹೆಚ್ಚಾಗುತ್ತಿದೆ. ಕೃಷಿಯಲ್ಲಿ ಶೇ.10 ರಿಂದ 12, ತೋಟಗಾರಿಕೆಯಲ್ಲಿ ಶೇ.30-35 ನಷ್ಟವಿದೆ. ಈ ನಷ್ಟ ತಗ್ಗಿಸಿದರೆ ಅಷ್ಟು ಉತ್ಪಾದನೆಗೆ ಸಮಾನವಾಗುತ್ತದೆ.

ಪ್ರಾಥಮಿಕ ವಸ್ತುವಿನಿಂದ ಇನ್ನೊಂದು ವಸ್ತು ಉತ್ಪಾದನೆ ಮಾಡುವುದು ಸೆಕೆಂಡರಿ ಅಗ್ರಿಕಲ್ಚರ್ ಆಗುತ್ತದೆ. ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಬ್ರಾಯಂಡಿಂಗ್, ಪ್ಯಾಕೇಜಿಂಗ್, ಮಾರುಕಟ್ಟೆ ಮತ್ತು ರಫ್ತು ನೋಡಿಕೊಳ್ಳುವುದು ನಿರ್ದೇಶನಾಲಯದ ಉದ್ದೇಶವಾಗಿದೆ.

     ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರ ಜೈವಿಕ ಸಂಪನ್ಮೂಲಗಳ ಪ್ರಾಥಮಿಕ ಉತ್ಪನ್ನ ಮತ್ತು ಉಪ ಉತ್ಪನ್ನಗಳನ್ನು ಕಚ್ಚಾವಸ್ತುವಾಗಿ ಬಳಸಿಕೊಂಡು ಸಂಸ್ಕರಣೆ, ಪ್ಯಾಕಿಂಗ್ ಹಾಗೂ ಸೂಕ್ತ ಬ್ರ್ಯಾಂಡ್ ಮೂಲಕ ಮಾರುಕಟ್ಟೆ ಕಲ್ಪಿಸುವುದು ಸೆಕೆಂಡರಿ ಅಗ್ರಿಕಲ್ಚರ್​ನ ಮುಖ್ಯ ಧ್ಯೇಯೋದ್ದೇಶವಾಗಿದೆ. ಇದರಿಂದ ಕೃಷಿಕರಿಗೆ ಅನುಕೂಲವಾಗುವುದರ ಜತೆಗೆ ಉದ್ಯೋಗ ಸೃಷ್ಟಿಯೂ ಆಗುತ್ತದೆ.

 ಬಿ.ಸಿ.ಪಾಟೀಲ್ ಕೃಷಿ ಸಚಿವ

ಏನಿದು ಸೆಕೆಂಡರಿ ಅಗ್ರಿಕಲ್ಚರ್?: 

ಕೃಷಿ ಆದಾಯ ಮಾತ್ರ ನಂಬಿ ರೈತರು ಜೀವನ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅದಕ್ಕೆ ಪೂರಕವಾಗಿ ಇತರ ಚಟುವಟಿಕೆ ನಡೆಸುವುದಕ್ಕೆ ಪ್ರೋತ್ಸಾಹ ನೀಡುವುದು ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯದ ಜವಾಬ್ದಾರಿ. ಇತ್ತೀಚಿನ ವರ್ಷಗಳಲ್ಲಿ ವಿದ್ಯಾವಂತ ಯುವಕರು ಕೃಷಿಯ ಕಡೆ ಹೊರಳುತ್ತಿದ್ದಾರೆ.

ಅವರಿಗೆ ಈ ಮೂಲಕ ನೆರವಾಗ ಲಾಗುತ್ತದೆ. ಗ್ರಾಮೀಣ ಮಟ್ಟದಲ್ಲಿ ಗುಡಿ ಕೈಗಾರಿಕೆ ಎನ್ನಬಹುದಾದ ಚಟುವಟಿಕೆಯು ಸ್ಥಳೀಯ ಮತ್ತು ಸುತ್ತಮುತ್ತಲಿನ ರೈತರ ಆರ್ಥಿಕ ಮಟ್ಟ ಹೆಚ್ಚಳಕ್ಕೆ ಕೊಡುಗೆ ನೀಡುವ ಪ್ರಮಾಣದಲ್ಲಿ ಇರುವುದೆಲ್ಲವು ಎರಡನೇ ಕೃಷಿ ಎಂದೇ ಪರಿಗಣಿಸಲಾಗುತ್ತದೆ.

ಸ್ಥಳೀಯವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಲಭ್ಯವಾಗುವ ಕಚ್ಚಾವಸ್ತು, ಮಾನವ ಶಕ್ತಿ ಕೌಶಲಗಳನ್ನು ಮೂಲವಾಗಿ ಸದುಪಯೋಗಪಡಿಸಿಕೊಂಡು ಅಳವಡಿಸುವ ಸಮಗ್ರ ಚಟುವಟಿಕೆಗಳನ್ನು ಸೆಕೆಂಡರಿ ಕೃಷಿಯಡಿ ಕೈಗೊಳ್ಳಲಾಗುತ್ತದೆ.

ಸ್ಥಳೀಯವಾಗಿ ಉತ್ಪಾದಿಸಲಾದ ಕಚ್ಚಾವಸ್ತುವು ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಸಂಸ್ಕರಣೆಗೆ ಒಳಗಾಗಿದ್ದರೆ ಮತ್ತು ಅಂತಹ ಕಚ್ಚಾವಸ್ತುಗಳಿಂದ ಮೌಲ್ಯವರ್ಧಿತಗೊಳಿಸಿ ಪ್ರಾಥಮಿಕ ಉತ್ಪಾದನೆಯನ್ನು ಉದ್ಯಮಕ್ಕೆ ಸರಬರಾಜು ಮಾಡಿದರೆ ಅದನ್ನು ಸೆಕೆಂಡರಿ ಕೃಷಿಗೆ ಪರಿಗಣಿಸಲಾಗುತ್ತದೆ.

           ವ್ಯಾಪ್ತಿಗಿಲ್ಲ…: ರೇಸ್ ಕುದುರೆಗಳ ಸಾಕಣೆ, ವನ್ಯಜೀವಿ ಮೀಸಲು ಪ್ರದೇಶಗಳ ಅಭಿವೃದ್ಧಿ, ದೊಡ್ಡ ಔಷಧೀಯ ಮತ್ತು ಕೃಷಿ ರಾಸಾಯನಿಕ ಉದ್ಯಮ, ದೊಡ್ಡ ಕೃಷಿ ಕೈಗಾರಿಕೆಗಳನ್ನು ಸೆಕೆಂಡರಿ ಅಗ್ರಿಕಲ್ಚರ್ ಎಂದು ಪರಿಗಣಿಸಲಾಗುವುದಿಲ್ಲ.

ಯಾವುದು ವ್ಯಾಪ್ತಿಗೆ?

· ಸಾವಯವ ಗೊಬ್ಬರ ತಯಾರಿಕೆ, ತೋಟಗಾರಿಕೆ ಹೂವು ಅರಣ್ಯ ಕೃಷಿ ಬೆಳೆಗಳ ನರ್ಸರಿ, ಜೈವಿಕ ಕೀಟನಾಶಕಗಳ ತಯಾರಿಕೆ

· ನೀರು ಮತ್ತು ಮಣ್ಣು ಪರೀಕ್ಷೆ

· ಪಶು ಆಹಾರ ಮೇವು ಉತ್ಪಾದನೆ, ಉತ್ಪಾದಿತ ಬೆಳೆಗಳ ಮೌಲ್ಯವರ್ಧನೆ ಮಾಡುವುದು

· ಕಟಾವು ಆದ ನಂತರ ಹೂವು, ಹಣ್ಣು, ಸಾಂಬಾರು ಪದಾರ್ಥಗಳು ಇತ್ಯಾದಿಗಳನ್ನು ಪೂರ್ವಸಿದ್ಧತೆಗೊಳಿಸಿ ಮಾರುಕಟ್ಟೆಗೆ ತಲುಪಿಸುವುದು.

· ಬಾಡಿಗೆ ಆಧಾರಿತ ಸೇವಾ ಕೇಂದ್ರಗಳು, ಅಗ್ರಿ ಟೂರಿಸಂ

· ಆಯುಷ್ ಮೆಡಿಸಿನ್ಸ್

· ನೇಯ್ಗೆ ಉತ್ಪನ್ನಗಳು

· ಸುಗಂಧ ದ್ರವ್ಯ, ಜೇನು ಸಾಕಣೆ

· ಅಂಟು ಉತ್ಪಾದನೆ

· ರೇಷ್ಮೆ ಉತ್ಪನ್ನಗಳು

· ಬಿದಿರು ಉತ್ಪನ್ನಗಳು

· ಅತಿಸಣ್ಣ, ಸಣ್ಣ ಉದ್ದಿಮೆ ಗಳಾದ ಉಪ್ಪಿನಕಾಯಿ, ಜಾಮ್ ಅರಿಶಿನ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ತಯಾರಿ

· ಡೈ ಇತ್ಯಾದಿ ಮೌಲ್ಯವರ್ಧನೆ ಕೇಂದ್ರಿತ ಚಟುವಟಿಕೆ

· ಬೇವಿನ ಉತ್ಪನ್ನಗಳು

· ಕಾರ್ನ್ ಪೌಡರ್ ತಯಾರಿಕೆ

· ಹೈಡ್ರೋಪೋನಿಕ್ಸ್, ಕೈತೋಟ

· ಅಡಕೆ ಹಾಳೆ ಉತ್ಪನ್ನಗಳು

· ಅಲೊವೆರಾ ಉತ್ಪನ್ನಗಳು

· ಕುರಿಮರಿ ಹೊಸ ತಳಿ ಸಾಕಣೆ, ಹೋರಿ ಸಾಕಣೆ

· ಡಯಾಂಚ ಬೆಳೆಸುವ ಮೂಲಕ ಪರ್ಯಾಯ/ಪೂರಕ ಉದ್ಯಮಗಳಿಗೆ ಉತ್ತೇಜಿಸುವುದು

· ಹತ್ತಿ ಬೆಳೆ ಉಳಿಕೆಯ ಉತ್ಪನ್ನಗಳು, ಹತ್ತಿ ಭತ್ತದ ಉಳಿಕೆಯಿಂದ ಫೈಬರ್ ಬೋರ್ಡ್ ತಯಾರಿ

· ಕತ್ತಾಳೆ ಬಾಳೆ ನಾರಿನ ಉತ್ಪನ್ನಗಳು

· ಬಯೋಗ್ಯಾಸ್ ಉತ್ಪಾದನೆ

· ಯೂರಿಯಾ ಲೇಪಿಸಿ ಮೇವಿನ ಬ್ಲಾಕ್​ಗಳ ತಯಾರಿಕೆ

· ಕಬ್ಬು ಸೋಗೆಯಿಂದ ಉತ್ಪನ್ನಗಳ ತಯಾರಿಕೆ

· ಉದ್ಯೋಗ ಸೃಷ್ಟಿ

 

 ಬಿ.ಸಿ.ಪಾಟೀಲ್ ಕೃಷಿ ಸಚಿವ

· ನೀರು ಮತ್ತು ಮಣ್ಣು ಪರೀಕ್ಷೆ

· ಪಶು ಆಹಾರ ಮೇವು ಉತ್ಪಾದನೆ, ಉತ್ಪಾದಿತ ಬೆಳೆಗಳ ಮೌಲ್ಯವರ್ಧನೆ ಮಾಡುವುದು

· ಬಾಡಿಗೆ ಆಧಾರಿತ ಸೇವಾ ಕೇಂದ್ರಗಳು, ಅಗ್ರಿ ಟೂರಿಸಂ

· ಆಯುಷ್ ಮೆಡಿಸಿನ್ಸ್

· ನೇಯ್ಗೆ ಉತ್ಪನ್ನಗಳು

· ಸುಗಂಧ ದ್ರವ್ಯ, ಜೇನು ಸಾಕಣೆ

· ಅಂಟು ಉತ್ಪಾದನೆ

· ರೇಷ್ಮೆ ಉತ್ಪನ್ನಗಳು

· ಬಿದಿರು ಉತ್ಪನ್ನಗಳು

· ಡೈ ಇತ್ಯಾದಿ ಮೌಲ್ಯವರ್ಧನೆ ಕೇಂದ್ರಿತ ಚಟುವಟಿಕೆ

· ಬೇವಿನ ಉತ್ಪನ್ನಗಳು

· ಕಾರ್ನ್ ಪೌಡರ್ ತಯಾರಿಕೆ

· ಹೈಡ್ರೋಪೋನಿಕ್ಸ್, ಕೈತೋಟ

· ಅಡಕೆ ಹಾಳೆ ಉತ್ಪನ್ನಗಳು

· ಅಲೊವೆರಾ ಉತ್ಪನ್ನಗಳು

· ಕುರಿಮರಿ ಹೊಸ ತಳಿ ಸಾಕಣೆ, ಹೋರಿ ಸಾಕಣೆ

· ಡಯಾಂಚ ಬೆಳೆಸುವ ಮೂಲಕ ಪರ್ಯಾಯ/ಪೂರಕ ಉದ್ಯಮಗಳಿಗೆ ಉತ್ತೇಜಿಸುವುದು

· ಕತ್ತಾಳೆ ಬಾಳೆ ನಾರಿನ ಉತ್ಪನ್ನಗಳು

· ಬಯೋಗ್ಯಾಸ್ ಉತ್ಪಾದನೆ

· ಯೂರಿಯಾ ಲೇಪಿಸಿ ಮೇವಿನ ಬ್ಲಾಕ್​ಗಳ ತಯಾರಿಕೆ

· ಕಬ್ಬು ಸೋಗೆಯಿಂದ ಉತ್ಪನ್ನಗಳ ತಯಾರಿಕೆ

· ಉದ್ಯೋಗ ಸೃಷ್ಟಿ

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap