ಅಂಬುಲೆನ್ಸ್ ಸಿಗದೆ ಬೈಕ್ ನಲ್ಲೇ ಪುತ್ರನ ಶವವನ್ನು ಮನೆಗೆ ಕೊಂಡೊಯ್ದ ತಂದೆ; ಆಂಧ್ರದಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ ಬೆಳಕಿಗೆ

ಆಂಧ್ರಪ್ರದೇಶ:

ದೇಶದಲ್ಲಿ ಮಾನವೀಯತೆಯ ಸರಪಳಿ ದಿನೇದಿನೇ ಕಳಚುತ್ತಾ ಸಾಗುತ್ತಿದೆ ಎಂದೆನಿಸುತ್ತಿದೆ. ಆಂಧ್ರಪ್ರದೇಶದಲ್ಲಿ ಮಗುವಿನ ಮೃತದೇಹವನ್ನು ಬೈಕ್‌ನಲ್ಲಿ ಸಾಗಿಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.ಅಂಬುಲೆನ್ಸ್ ಚಾಲಕ ಬಾಲಕನ ಶವವನ್ನು ಮನೆಗೆ ಸಾಗಿಸಲು ಸಹಾಯ ಮಾಡಲು ನಿರಾಕರಿಸಿದ್ದರಿಂದ, ತಂದೆಯೊಬ್ಬರು ತನ್ನ ಮಗನ ಮೃತದೇಹವನ್ನು ಬೈಕ್‌ ಮುಖಾಂತರ ಸಾಗಿಸಿದ್ದಾರೆ.ನೆಲ್ಲೂರು ಜಿಲ್ಲೆಯ ಸಂಗಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಅನಧಿಕೃತವಾಗಿ ಮನೆ ನಿರ್ಮಿಸಿದವರಿಗೆ ಸಿಹಿ ಸುದ್ದಿ: ಅಕ್ರಮ-ಸಕ್ರಮ ಯೋಜನೆ ಜಾರಿಗೆ ಸರ್ಕಾರ ಚಿಂತನೆ

ಶ್ರೀರಾಮ್ ಎಂಬ ಬಾಲಕ ಕಾಲುವೆಯಲ್ಲಿ ಮುಳುಗಿದ್ದಾನೆ. ಕೂಡಲೇ ಆತನ ತಂದೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಬಾಲಕನ ಮೃತದೇಹವನ್ನು ಸಾಗಿಸಲು ಅಂಬುಲೆನ್ಸ್ ಚಾಲಕರಲ್ಲಿ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಚಾಲಕ ನಿರಾಕರಿಸಿದ ಕಾರಣ, ಬಾಲಕನ ತಂದೆ ಶವವನ್ನು ಬೈಕ್ ನಲ್ಲಿ ಸಾಗಿಸಿದ್ದಾರೆ.

ಜಾನುವಾರುಗಳ ಆಯಂಬುಲೆನ್ಸ್‌ : ನಾಳೆ ಚಾಲನೆ

ಘಟನೆಯ ಕುರಿತು ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಎನ್.ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿ ವೈ.ಎಸ್. ಜಗನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತೆಲುಗು ದೇಶಂ ಪಕ್ಷದ (ಟಿಡಿಪಿ) ಸದಸ್ಯ ನಾರಾ ಲೋಕೇಶ್ ಆಡಳಿತಾರೂಢ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನೆಲ್ಲೂರು ಜಿಲ್ಲೆಯ ಸಮುದಾಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ನೊಂದ ತಂದೆ ಅಂಬುಲೆನ್ಸ್ ಗಾಗಿ ಮೊರೆ ಇಟ್ಟರೂ ಆಸ್ಪತ್ರೆ ಸಿಬ್ಬಂದಿ ಮಾನವೀಯತೆಯಿಂದ ಸ್ಪಂದಿಸದಿರುವುದು ವಿಷಾದನೀಯ ಎಂದು ಹೇಳಿದ್ದಾರೆ.

 

 

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ