ಬೆಂಗಳೂರು
ನಿಧಿಗಾಗಿ ಹೆತ್ತ ಮಗುವನ್ನು ಕೊಲ್ಲಲು ಮುಂದಾದ ಪತಿಯ ವಿರುದ್ಧ ಪತ್ನಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಸದ್ದಾಂ ಹುಸೇನ್ ಅಲಿಯಾಸ್ ಈಶ್ವರ್ ಹೆತ್ತ ಮಗನನ್ನೇ ಕೊಲೆ ಮಾಡಲು ಮುಂದಾಗಿದ್ದನು. ಪತಿ ಸದ್ದಾಂ ಹುಸೇನ್ ಅಲಿಯಾಸ್ ಈಶ್ವರ್ ತನಗೆ ಕಿರುಕುಳ, ಜೀವ ಬೆದರಿಕೆ ಮತ್ತು ಮತಾಂತರಕ್ಕೆ ಯತ್ನಿಸಿದ್ದಾನೆ ಎಂದು ಪತ್ನಿ ವನಜಾಕ್ಷಿ ಎಂಬುವರು ದೂರು ನೀಡಿದ್ದಾರೆ. ಪತಿಯ ಸದ್ದಾಂ ಹುಸೇನ್ ಅಲಿಯಾಸ್ ಈಶ್ವರ್ ವಿರುದ್ಧ ಕೆಆರ್ ಪುರಂ ಠಾಣೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ವನಜಾಕ್ಷಿ ಆರೋಪಿಸಿದ್ದಾರೆ.
“ನಾನು (ವನಜಾಕ್ಷಿ) 2020 ರಲ್ಲಿ ಬ್ಲೂಡಾರ್ಟ್‌ನಲ್ಲಿ ಉದ್ಯೋಗಿಯಾಗಿದ್ದಾಗ ಸದ್ದಾಂ ಹುಸೇನ್ ಅಲಿಯಾಸ್ ಈಶ್ವರ್ ಪರಿಚಯವಾಗಿದ್ದಾನೆ. ಈ ವೇಳೆ ಸದ್ದಾಂ ಹುಸೇನ್ ಅಲಿಯಾಸ್ ಈಶ್ವರ್ ಪ್ರೀತಿ ಪ್ರೀತಿ ಮಾಡು, ನಾನು ನಿನ್ನನ್ನು ಮದುವೆ ಆಗುತ್ತೇನೆ ಎಂದು ಹಿಂದೆ ಬಿದಿದ್ದನು. ಬಳಿಕ, ನಾವಿಬ್ಬರು ಹಿಂದೂ ಸಂಪ್ರದಾಯದಂತೆ ವಿವಾಹವಾದೇವು. ನಂತರ, ನವೆಂಬರ್ 2020ರಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗುವಂತೆ ಸದ್ದಾಂ ಹುಸೇನ್ ಅಲಿಯಾಸ್ ಈಶ್ವರ್ ಒತ್ತಾಯಿಸಿದನು.”
“ಬಳಿಕ, ಸದ್ದಾಂ ಹುಸೇನ್ ಅಲಿಯಾಸ್ ಈಶ್ವರ್ ನನ್ನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದನು. ಅಲ್ಲಿ ಸದ್ದಾಂ ಹುಸೇನ್ ಅಲಿಯಾಸ್ ಈಶ್ವರ್ ಮತ್ತು ಆತನ ಸಹಚರನಾದ ನಯಾಜ್, ಇಸ್ಲಾಂ ಧರ್ಮಕ್ಕೆ ಮತಾಂತರವಾಗವಂತೆ ನನಗೆ ಒತ್ತಾಯಿಸಿದರು. ಅಲ್ಲಿ ನನಗೆ ಸಾದಿಯಾ ಕೌಸರ್ ಎಂದು ಮರುನಾಮಕರಣ ಮಾಡಿದರು. ಮುಸ್ಲಿಂ ವಿವಾಹ ಪ್ರಮಾಣಪತ್ರಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕುವಂತೆ ಅವರು ನನಗೆ ಒತ್ತಡ ಹೇರಿದರು.”
“ಈ ಬಗ್ಗೆ ಕೆಆರ್ ಪುರಂ ಠಾಣೆಗೆ ದೂರು ನೀಡಿದರೂ ಪೊಲೀಸರು ನನ್ನ ದೂರನ್ನು ಸ್ವೀಕರಿಸಿಲ್ಲ.
ಆದ್ದರಿಂದ, ಕೂಡಲೇ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಸದ್ದಾಂ ಹುಸೇನ್ ಅಲಿಯಾಸ್ ಈಶ್ವರ್ ಮತ್ತು ಆತನ ಸಹಚರನಾದ ನಯಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು. ನನ್ನ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು.ನಮಗೆ ಯಾವುದೇ ಹಾನಿಯುಂಟಾದರೆ, ಅದಕ್ಕೆ ಸದ್ದಾಂ ಹುಸೇನ್ ಅಲಿಯಾಸ್ ಈಶ್ವರ್ ಕಾರಣನಾಗಿರುತ್ತಾನೆ” ಎಂದು ವನಜಾಕ್ಷಿ ದೂರು ನೀಡಿದ್ದಾರೆ.