ಬೆಂಗಳೂರು:
ಭಾರತದ ಪ್ರಮುಖ ಖಾಸಗಿ ಸಂಸ್ಥೆ ಫೆಡರಲ್ ಬ್ಯಾಂಕ್ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಬಾಲಿವುಡ್ ನಟಿ ವಿದ್ಯಾಬಾಲನ್ ಅವರನ್ನು ತನ್ನ ಮೊದಲ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಿಸಿದೆ. ಮುಂಬೈನಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ಫೆಡರಲ್ ಬ್ಯಾಂಕ್ ಈ ಘೋಷಣೆಯನ್ನು ಮಾಡಿದೆ.
“ನಟಿ ವಿದ್ಯಾ ಬಾಲನ್ ಆಯ್ಕೆ ಬ್ಯಾಂಕ್‌ನ ಬ್ರ್ಯಾಂಡ್ ಪ್ರಚಾರದಲ್ಲಿ ಮಹತ್ವದ ಹೆಜ್ಜೆಯಾಗಿದೆ. ವಿದ್ಯಾ ಬಾಲನ್ ಎಲ್ಲಾ ಪ್ರದೇಶ, ವರ್ಗದ ಜನರ ಗಮನವನ್ನು ಸೆಳೆಯುವಲ್ಲಿ ಉತ್ತಮ ಆಯ್ಕೆಯಾಗಿದೆ. ಸಿನಿಮಾಗಳಲ್ಲಿ ಅವರ ನಟನೆ ಎಷ್ಟು ಪ್ರಭಾವಶಾಲಿಯಾಗಿದೆಯೋ ನಿಜ ಜೀವನದಲ್ಲೂ ಅವರ ವಿಚಾರಗಳು, ಕೆಲಸ ನಿರ್ವಹಿಸುವ ರೀತಿ ಬಹಳ ಉತ್ತಮವಾಗಿದೆ. ಫೆಡರಲ್ ಬ್ಯಾಂಕ್ ತಮ್ಮ ಗ್ರಾಹಕರನ್ನು ಅರ್ಥ ಮಾಡಿಕೊಂಡು ಉತ್ತಮ ಸೇವೆಯನ್ನು ನೀಡುವಲ್ಲಿ ಬದ್ಧವಾಗಿದೆ.ವಿದ್ಯಾ ಬಾಲನ್ ಫೆಡರಲ್ ಬ್ಯಾಂಕ್ ಬೆಳವಣಿಗೆಯ ಜತೆ ಕೈಜೋಡಿಸಿದ್ದಾರೆ, ಇದು ನಮಗೆ ಅತ್ಯಂತ ಸಂತೋಷದ ಸಂದರ್ಭ “ ಎಂದು ಫೆಡರಲ್ ಬ್ಯಾಂಕ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಎಮ್ ವಿ ಎಸ್ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಬ್ರ್ಯಾಂಡ್ ಅಂಬಾಸೆಡರ್ ಎಂಬ ಜವಾಬ್ದಾರಿಯ ಮೂಲಕ ನಾವು ಭಾರತದ ಕಥೆಯನ್ನು ಜಗತ್ತಿಗೆ ಸಾರುತ್ತಿದ್ದೇವೆ. ಫೆಡರಲ್ ಬ್ಯಾಂಕ್ ದಕ್ಷಿಣದಿಂದ ಉತ್ತರದವರೆಗೆ ಆರ್ಥಿಕತೆಗೆ ಬಲ ನೀಡುತ್ತಿದೆ. ಫೆಡರಲ್ ಬ್ಯಾಂಕ್ ಡಿಜಿಟಲ್ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ. ಇಂತಹ ಅದ್ಭುತವಾದ ತಂಡದ ಜತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ” ಎಂದು ನಟಿ ವಿದ್ಯಾ ಬಾಲನ್ ಸಂತಸ ವ್ಯಕ್ತಪಡಸಿದ್ದಾರೆ.
