ಕೊರಟಗೆರೆ:
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿನ ಅವ್ಯವಸ್ಥೆ, ಅಭದ್ರತೆ, ಹುಳು ಬಿದ್ದಿರುವ ಊಟ, ಪ್ರಾಂಶುಪಾಲರು-ಬೋಧÀಕ ವರ್ಗದ ನಡುವಿನ ಜಗಳ ಸೇರಿದಂತೆ ಹಲವು ಸಮಸ್ಯೆಗಳಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಿ ವಿದ್ಯಾಭ್ಯಾಸ ಮಾಡದ ಸ್ಥಿತಿ ಉಂಟಾಗಿದೆ ಎಂದು ಪೆÇೀಷಕರು ದೂರಿ ವಸತಿ ಶಾಲೆಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಸರಣಿ ರಜಾ ಇರುವ ಕಾರಣ ತಮ್ಮ ಮನೆಗಳಿಗೆ ತೆರಳಿದ್ದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆಯುತ್ತಿದ್ದ ಅವ್ಯವಸ್ಥೆ ಬಗ್ಗೆ ತಂದೆ-ತಾಯಿಗಳಿಗೆ ತಿಳಿಸಿದ ಪರಿಣಾಮ, ವಿವಿಧ ತಾಲ್ಲೂಕುಗಳಿಂದ ಪೆÇೀಷಕರು ಮಕ್ಕಳೊಂದಿಗೆ ಆಗಮಿಸಿ ವಸತಿ ಶಾಲೆ ಪ್ರಾಂಶುಪಾಲರ ವಿರುದ್ದ ಪ್ರತಿಭಟನೆ ನಡೆಸಿ ವಾಗ್ವಾದಕ್ಕೆ ಇಳಿದರು.
ನಂತರ ಶಾಲೆಯ ಎಲ್ಲಾ ಮಕ್ಕಳನ್ನು ಒಂದೆÀಡೆ ಸೇರಿಸಿ ಪೆÇೀಷಕರ ಮುಂದೆ ಪ್ರಾಂಶುಪಾಲರು ಮತ್ತು ಬೋಧÀಕ ವರ್ಗ ಸಮಸ್ಯೆಗಳ ಬಗ್ಗೆ ಆಲಿಸಿದಾಗ ಬಹುತೇಕ ಮಕ್ಕಳು ಅಡಿಗೆಯವರ ಬಗ್ಗೆ ಹಾಗೂ ಹಲವು ಬಾರಿ ಹುಳುಬಿದ್ದ ಆಹಾರ ನೀಡಿದ್ದರ ಬಗ್ಗೆ ದೂರಿದರು. ಇಷ್ಟೆಲ್ಲಾ ಸಮಸ್ಯೆಗಳನ್ನು ಪ್ರಾಂಶುಪಾಲರ ಬಳಿ ಹೇಳಿದ್ದರೂ ಸಹ ತಿಪ್ಪೆ ಸಾರಿಸುವ ಕೆಲಸವನ್ನು ಅವರು ಮಾಡಿದ್ದನ್ನು ಪೆÇೀಷಕರ ಬಳಿ ತಿಳಿಸಿದರು. ಗಂಡು ಮಕ್ಕಳಿಗೂ ಸಹ ಅನಾರೋಗ್ಯದ ಸಮಸ್ಯೆ ಇದ್ದಾಗ ಸರಿಯಾದ ಚಿಕಿತ್ಸೆ ನೀಡಿಲ್ಲದ ಬಗ್ಗೆ ದೂರುಗಳು ಬಂದವು.
ಸ್ಥಳಕ್ಕೆ ತಹಸೀಲ್ದಾರ್ ಭೇಟಿ:-
ವಿಷಯ ತಿಳಿದ ತಹಸೀಲ್ದಾರ್ ನಾಹೀದಾ ಜಮ್ ಜಮ್ ಸ್ಥಳಕ್ಕೆ ಧಾವಿಸಿ, ಊಟ ಮತ್ತು ಕೊಠಡಿ ಸ್ವಚ್ಛತೆ ಹಾಗೂ ಶೌಚಾಲಯವನ್ನು ಪರಿಶೀಲಿಸಿದರು. ಆಹಾರ ದಾಸ್ತಾನು ಕೊಠಡಿಗೆ ಹೋದಾಗ ಕೆಲವು ಪದಾರ್ಥಗಳಲ್ಲಿ ಹುಳು ಬಿದ್ದಿರುವುದನ್ನು ಖುದ್ದು ಕಂಡು ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು. ಆಹಾರ ದಾಸ್ತಾನು ಪುಸ್ತಕ ಮತ್ತು ಊಟದ ಮೆನು ಚಾರ್ಟ್ ಈ ಎರಡನ್ನು ನಿರ್ವಹಿಸದೆ ಇದ್ದುದನ್ನು ಗಮನಿಸಿದರು. ನಂತರ ವಿದ್ಯಾರ್ಥಿ ನಿಲಯದ ಎಲ್ಲಾ ಹೆಣ್ಣು ಮಕ್ಕಳನ್ನು ಒಂದೆಡೆ ್ಲ ಕರೆಸಿ, ಅವರ ಸಮಸ್ಯೆಗಳ ಬಗ್ಗೆ ಗುಪ್ತವಾಗಿ ಆಲಿಸಿ, ವೈಯಕ್ತಿಕ ಸಮಸ್ಯೆಗಳನ್ನು ತಿಳಿದ ನಂತರ ಹೊರ ಬಂದು ಪ್ರಾಂಶುಪಾಲರು ಮತ್ತು ಭದ್ರತಾ ಸಿಬ್ಬಂದಿ ವಿರುದ್ದ ಕೆಂಡಾಮಂಡಲವಾದರು. ಅಸಭ್ಯವಾಗಿ ವರ್ತಿಸುವ ಸಿಬ್ಬಂದಿಗಳನ್ನು ವಜಾಗೊಳಿಸುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು. ಇಂತಹ ಸಿಬ್ಬಂದಿಯನ್ನು ಕೆಲಸದಲ್ಲಿ ಮುಂದುವರೆಸುವುದಕ್ಕೆ ಹಾಗೂ ಇಲ್ಲಿನ ಯಾವುದೇ ಸಮಸ್ಯೆಗಳನ್ನು ಪರಿಹರಿಸದ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡು, ಅಡುಗೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ಬೋಧಕ ವರ್ಗದವರಿಗೂ ಸಹ ತಂದೆ ತಾಯಿಯರ ರೀತಿ ಬೆರೆತು ಅವರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವಂತೆ ಆದೇಶಿಸಿದರು. ಮುಂಬರುವ ದಿನಗಳಲ್ಲಿ ವಸತಿ ಶಾಲೆಯಲ್ಲಿ ದೂರು ಪೆಟ್ಟಿಗೆಯನ್ನು ಇಡುವಂತೆ, ಅದರಲ್ಲಿ ಮಕ್ಕಳು ತಮ್ಮ ದೂರುಗಳನ್ನು ಹಾಕುವಂತೆ ಅದನ್ನು ಸ್ವತಃ ತಾವೇ ನಿರ್ವಹಿಸುವುದಾಗಿ ಹೆಣ್ಣು ಮಕ್ಕಳಿಗೆ ಭರವಸೆ ನೀಡಿ, ಧೈರ್ಯ ತುಂಬಿದರು. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಮಾಧ್ಯಮದವರಿಗೆ ತಿಳಿಸಿದರು.
ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆಗಮನ:-
ಸ್ಥಳಕ್ಕೆ ಧಾವಿಸಿದ ಇಲಾಖಾ ಅಧಿಕಾರಿ ತ್ಯಾಗರಾಜು, ತಹಸಿಲ್ದಾರ್ ಮತ್ತು ಪೆÇೀಷಕರಿಂದ ಮಾಹಿತಿ ಪಡೆದು, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು. ದೂರು ನೀಡಿದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ನ್ಯೂನತೆಗಳನ್ನು ಸರಿಪಡಿಸಲಾಗುವುದು ಎಂದು ತಿಳಿಸಿ, ಪ್ರಾಂಶುಪಾಲ ಸುರೇಶ್‍ರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕೆಂಬ ಪೆÇೀಷಕರ ಅಹವಾಲನ್ನು ಪಡೆದು, ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಭರವಸೆ ನೀಡಿ, ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ವಸತಿ ಶಾಲೆಯಲ್ಲಿ ಪ್ರಾಂಶುಪಾಲರ ಅಸಮರ್ಥತೆ, ವಿದ್ಯಾರ್ಥಿನಿಯರ ಅಭದ್ರತೆ, ಮೂಲಭೂತ ಸೌಕರ್ಯ ಮತ್ತು ಸ್ವಚ್ಛತೆಯಿಲ್ಲದ ಶೌಚಾಲಯ, ಅಡುಗೆ ಮತ್ತು ವಸತಿ ಕೊಠಡಿಗಳು, ಬೋಧಕ ವರ್ಗದವರ ಒಳ ಜಗಳ, ಮಹಿಳಾ ವಸತಿ ನಿಲಯವಿದ್ದರೂ ರಾತ್ರಿ ವೇಳೆ ಮಹಿಳಾ ಭದ್ರತಾ ಸಿಬ್ಬಂದಿ ಇಲ್ಲದಿರುವುದು, ರಾತ್ರಿ ವೇಳೆಯಲ್ಲಿ ಕನಿಷ್ಠ ಒಬ್ಬ ಶಿಕ್ಷಕಿಯಾದರೂ ಉಳಿಯದೆ ಇರುವುದು ಮುಂತಾದ ಇಡೀ ವಸತಿಶಾಲೆಯ ಅವ್ಯವಸ್ಥೆ ಎದ್ದು ಕಾಣುತ್ತಿತ್ತು. ಜೊತೆಗೆ ಕೆಲ ಹುಳು ಬಿದ್ದ ಆಹಾರ ಪದಾರ್ಥಗಳ ಬಗ್ಗೆ ಅಡುಗೆಯವರ ನಿರ್ಲಕ್ಷತೆ ಕಂಡು ಬರುತ್ತಿತ್ತು. ಸರ್ಕಾರವು ವಸತಿ ಶಾಲೆಗಳಿಗೆ ಕೋಟಿಗಟ್ಟಲೆ ಹಣ ನೀಡುತ್ತಿದ್ದರೂ, ಇಲ್ಲಿನ ಅವ್ಯವಸ್ಥೆ ನಿಜಕ್ಕೂ ಆಘಾತಕಾರಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ