ನವದೆಹಲಿ :
ವಿಮಾನ ದಲ್ಲಿ ಮದ್ಯಪಾನ, ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದು, ಸಹ ಪ್ರಯಾಣಿಕರೊಂದಿಗೆ ಜಗಳ ಮಾಡಿರುವ ಸಾಕಷ್ಟು ನಿದರ್ಶನಗಳಿವೆ. ಹಾಗೆಯೇ ದೇಹದಿಂದ ಬರುವ ದುರ್ನಾತ ವಿಚಾರವಾಗಿ ಇಬ್ಬರು ಪ್ರಯಾಣಿಕರ ನಡುವೆ ಜಗಳ ನಡೆಯುತ್ತಿರುವಾಗ ಸಮಾಧಾನ ಮಾಡಲು ಬಂದ ವಿಮಾನ ಸಿಬ್ಬಂದಿಯನ್ನು ಪ್ರಯಾಣಿಕರಬ್ಬರು ಕಚ್ಚಿರುವ ಘಟನೆ ಶೆನ್ಜೆನ್ ಏರ್ಲೈನ್ಸ್ನಲ್ಲಿ ನಡೆದಿದೆ.
ಗಲಾಟೆ ನಡೆಯುತ್ತಿದ್ದಾಗ ಸೃಷ್ಟಿಯಾದ ಅವ್ಯವಸ್ಥೆಯನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ವಿಮಾನ ಸಿಬ್ಬಂದಿಯೊಬ್ಬರು, ಬಾಯಿ ತೆಗೆಯಿರಿ. ನೀವು ನನ್ನನ್ನು ಕಚ್ಚುತ್ತಿದ್ದೀರಾ ಎಂದು ವಿಮಾನ ಸಿಬ್ಬಂದಿ ಕೂಗುತ್ತಿದ್ದಾರೆ.
ಸಿಬ್ಬಂದಿ ಸಣ್ಣ ಗಾಯವಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಾಗೆಯೇ ಘರ್ಷಣೆಯಲ್ಲಿ ಭಾಗಿಯಾದ ಇಬ್ಬರು ಪ್ರಯಾಣಿಕರನ್ನು ಪೊಲೀಸರು ಕರೆದೊಯ್ದರು. ಇತರ ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಇಳಿಯುವಂತೆ ಹೇಳಲಾಯಿತು.
ಎರಡು ಗಂಟೆಗಳ ನಂತರ ಅವರು ಮತ್ತೆ ವಿಮಾನ ಹತ್ತಿದರು. ಶೆನ್ಜೆನ್ ಏರ್ಲೈನ್ಸ್ ಪ್ರಯಾಣಿಕರು ಮತ್ತು ಅದರ ಉದ್ಯೋಗಿಗಳ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತದೆ ಎಂದು ಹೇಳಿದೆ.ಈ ಇಬ್ಬರು ಮಹಿಳೆಯರನ್ನು ಭವಿಷ್ಯದಲ್ಲಿ ಯಾವುದೇ ವಿಮಾನ ಮತ್ತು ರೈಲುಗಳಲ್ಲಿ ಪ್ರಯಾಣಿಸದಂತೆ ಕಪ್ಪುಪಟ್ಟಿಗೆ ಸೇರಿಸಬೇಕು. ಇಂತಹ ಅವಿವೇಕಿ ಜನರು ಯಾವುದೇ ಸ್ಥಳದಲ್ಲಿ ಅಪಾಯವನ್ನುಂಟು ಮಾಡಬಹುದು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
