ಎರಡು ವರ್ಷಗಳ ಹಿಂದೆ ನಿರ್ಮಾಣವಾಗಿ ತೆರೆ ಕಂಡ ಯಶಸ್ವಿ ಚಿತ್ರ ತಿಥಿ ಆ ಚಿತ್ರದಲ್ಲಿ ಅಭಿನಯಿಸಿದ್ದ ಹಿರಿಯರಾದ ಗಡ್ಡಪ್ಪ ಹಾಗೂ ಸೆಂಚುರಿ ಗೌಡ ದಿನ ಬೆಳಗಾಗು ವುದ ರೊಳಗೆ ಸ್ಟಾರ್‍ಗಳಾದರು ಅವರನ್ನು ಹಾಕಿ ಕೊಂಡು ಅನೇಕ ನಿರ್ದೇಶಕರು ಚಿತ್ರಗಳನ್ನು ನಿರ್ಮಿಸಿದರು.
ಅಂಥ ಮತ್ತೊಂದು ಚಿತ್ರ ಸದ್ದಿಲ್ಲದೆ ನಿರ್ಮಾಣವಾಗಿದ್ದು ಇಂದು ತೆರೆಗೆ ಬರುತ್ತಿದೆ. ಅನಿಲ್ ವೆಂಕಟ್‍ರಾಜು ಹಾಗೂ ಸುನಿಲ್ ರೆಡ್ಡಿ ಸೇರಿ ನಿರ್ದೇಶನ ಮಾಡಿರುವ ಈ ಚಿತ್ರದ ಪತ್ರಿಕಾಗೋಷ್ಠಿ ನೆರವೇರಿತು.
ಚಿತ್ರದ ಹೆಸರು ಗಡ್ಡಪ್ಪನ ದುನಿಯಾ, ಕೆ.ಬಿ.ಅಜಿತ್‍ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೆಂಚುರಿ ಗೌಡ, ಗಡ್ಡಪ್ಪ, ಕೆ.ತಮ್ಮೇಗೌಡ, ಮಧು, ಬಾಲಕೃಷ್ಣ, ಪ್ರಕೃತಿ ಪ್ರಕಾಶ್ ಹಾಜರಿದ್ದು, ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದರು. ಹರ್ಷ ಕಾಗೋಡ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕ ಅನಿಲ್ ಮಾತನಾಡಿ ಇದು ಒಂದು ಹಳ್ಳಿಯಲ್ಲಿ ನಡೆಯುವ ಕಥೆ. ನೀರಿನ ಸಮಸ್ಯೆ ಬಗ್ಗೆ ಚಿತ್ರದಲ್ಲಿ ಹೇಳಿದ್ದೇವೆ. ಒಂದು ಹಳ್ಳಿಯಲ್ಲಿ ಬರಗಾಲ ಉಂಟಾಗಿ ನೀರಿನ ಸಮಸ್ಯೆ ಎದುರಾಗುತ್ತದೆ. ಆಗ ಗಡ್ಡಪ್ಪ ಬತ್ತಿಹೋಗಿದ್ದ ಕೆರೆ ಕಟ್ಟೆಗಳು ನೀರಿನಿಂದ ಹೇಗೆ ತುಂಬುವಂತೆ ಮಾಡಿದರು.
ಬರಗಾಲದಿಂದ ಊರನ್ನು ಬಿಟ್ಟು ಪಟ್ಟಣದ ಕಡೆಗೆ ಹೊರಟಿದ್ದ ಗ್ರಾಮಸ್ಥರು ಪುನ: ಹಳ್ಳಿಯಲ್ಲೇ ನೆಲೆಸುವಂತೆ ಹೇಗೆ ಮಾಡಿದರು ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ನಿರ್ಮಾಪಕರು ನಾವು ಕೇಳಿದ್ದ ಎಲ್ಲವನ್ನೂ ಒದಗಿಸಿ ಕೊಟ್ಟಿದ್ದಾರೆ. ಮೈಸೂರು, ಮಂಡ್ಯ, ಪಾಂಡವಪುರ ಸುತ್ತಮುತ್ತ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಿದ್ದೇವೆ. ಗಡ್ಡಪ್ಪ ಹಾಗೂ ಸೆಂಚುರಿಗೌಡ ಊರ ಬಗ್ಗೆ ಕಾಳಜಿ ವಹಿಸಿ ಜನರಲ್ಲಿ ಹೇಗೆ ಉತ್ಸಾಹ ತುಂಬುತ್ತಾರೆ ಎಂಬುವುದೇ ಈ ಚಿತ್ರದ ಕಥೆ ಎಂದು ಹೇಳಿದರು.
ಚಿತ್ರದ ನಾಯಕಿ ಪ್ರಕೃತಿ ಪ್ರಕಾಶ್ ಮಾತನಾಡಿ ನನಗೆ ಇದು ಮೊದಲ ಚಿತ್ರ, ಹಳ್ಳಿಯ ಹುಡುಗಿಯ ಪಾತ್ರ ನಿರ್ವಹಿಸಿz್ದÉೀನೆ. ಗಡ್ಡಪ್ಪರವರ ಪ್ರಯತ್ನಕ್ಕೆ ಬೆಂಬಲವಾಗಿ ನಾನು ನಿಲ್ಲುತ್ತೇನೆ ಎಂದು ಹೇಳಿದರು. ಚಿತ್ರದ ಛಾಯಾಗ್ರಹಕ ರಾಘವ್ ಮಾತನಾಡಿ ಇದು ನನ್ನ ಮೊದಲ ಚಿತ್ರ. ನಿರ್ದೇಶಕ ಅನಿಲ್ ನನ್ನ ಸ್ನೇಹಿತರು ಸಂಪೂರ್ಣ ಹಳ್ಳಿ ಪರಿಸರದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಚಿತ್ರದಲ್ಲಿ ಒಂದು ಒಳ್ಳೆ ಮೆಸೇಜ್ ಕೂಡ ಇದೆ ಎಂದರು. ನಿರ್ಮಾಪಕ ಅಜಿತ್ ಗೌಡ ಮಾತನಾಡಿ ಸಿನಿಮಾ ತುಂಬ ಚೆನ್ನಾಗೆ ಬಂದಿದೆ. ಗಡ್ಡಪ್ಪ ಅವರ ಪಾತ್ರ ತುಂಬ ಡಿಫರೆಂಟ್ ಆಗಿ ಬಂದಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
