ಅಪ್ರಾಪ್ತ ಮಗಳಿಗೆ ಆಕ್ಟಿವ್ ಹೊಂಡಾ ಕೊಟ್ಟು 25 ಸಾವಿರ ರೂ. ದಂಡ ಕಟ್ಟಿದ ತಾಯಿ

ದಾವಣೆಗೆರೆ

    ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ಕೊಡುವ ಪೋಷಕರ ವಿರುದ್ಧ ಟ್ರಾಫಿಕ್ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾಗಳಾಗುವ ಸಾಧ್ಯತೆಯನ್ನು ತಡೆಯುವುದಕ್ಕಾಗಿ ಸಾರಿಗೆ ಇಲಾಖೆಯೂ ಕಠಿಣ ನಿಯಮಗಳನ್ನು ರೂಪಿಸಿದೆ. ಆದಾಗ್ಯೂ, ಅಂಥ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಇದೀಗ ದಾವಣಗೆರೆಯಲ್ಲಿ, ಮಗಳಿಗೆ ಆಕ್ಟಿವ್ ಹೋಂಡಾ ಚಾಲನೆಗೆ ಅವಕಾಶ ಮಾಡಿಕೊಟ್ಟ ತಾಯಿಗೆ ಸಂಚಾರ ಪೊಲೀಸರು 25 ಸಾವಿರ ರೂ. ದಂಡ ವಿಧಿಸಿದ್ದಾರೆ.

   ದಾವಣಗೆರೆ ನಗರದ ಗಡಿಯಾರ ಕಂಬದ ಬಳಿ ಅಪ್ರಾಪ್ತ ಬಾಲಕಿಯೊಬ್ಬಳು ಆಕ್ಟಿವ್ ಹೊಂಡಾ ಚಲಾಯಿಸುತ್ತಿದ್ದಳು. ಅದನ್ನು ತಡೆದ ಟ್ರಾಫಿಕ್ ಪೊಲೀಸರು ದಾಖಲೆ ಪರಿಶೀಲನೆ ಮಾಡಿದ್ದಾರೆ. ಇದೇ ವೇಳೆ, ಅದನ್ನು ಚಲಾಯಿಸುತ್ತಿರುವುದು ಅಪ್ರಾಪ್ತ ಬಾಲಕಿ ಎಂಬುದು ದೃಢವಾಗೊದೆ. ನಂತರ ಪೊಲೀಸರು ಆಕೆಯ ತಾಯಿಗೆ 25 ಸಾವಿರ ರೂ. ದಂಡ ವಿಧಿಸಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

   ಕರ್ನಾಟಕದಲ್ಲಿ, ಸಣ್ಣ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡುವುದು ಅಪರಾಧವಾಗಿದೆ. ಅಂಥ ಪೋಷಕರು ಅಥವಾ ಪಾಲಕರಿಗೆ ಕಠಿಣ ದಂಡವನ್ನು ವಿಧಿಸಲು ಅವಕಾಶವಿದೆ. ‘ಮೋಟಾರು ವಾಹನಗಳ ಕಾಯ್ದೆ, 1988’ ರ ಅಡಿಯಲ್ಲಿ, ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ, ವಾಹನದ ಮಾಲೀಕರಿಗೆ (ಸಾಮಾನ್ಯವಾಗಿ ಪೋಷಕರು) ಮೂರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 25,000 ರೂ. ಮೇಲ್ಪಟ್ಟು ದಂಡ, ಅಥವಾ ಎರಡೂ ಶಿಕ್ಷೆಯನ್ನು ವಿಧಿಸಬಹುದಾಗಿದೆ. ವಾಹನದ ನೋಂದಣಿಯನ್ನು 12 ತಿಂಗಳ ಅವಧಿಗೆ ಅಮಾನತಿನಲ್ಲಿ ಇಡುವುದಕ್ಕೂ ಅವಕಾಶವಿದೆ. 

   ಕರ್ನಾಟಕದ ಹಲವೆಡೆ ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ಮಾಡಿಕೊಟ್ಟವರಿಗೆ ದಂಡ ವಿಧಿಸಿದ ಉದಾಹರಣೆಗಳಿವೆ. 17 ವರ್ಷದ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಾಯಿಗೆ 30,000 ರೂ. ದಂಡ ವಿಧಿಸಿದ ಘಟನೆ ಇತ್ತೀಚೆಗೆ ಶಿವಮೊಗಾದಲ್ಲಿ ವರದಿಯಾಗಿತ್ತು. ಬೆಂಗಳೂರು ಟ್ರಾಫಿಕ್ ಪೊಲೀಸರು ಸಹ ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ಚಲಾಯಿಸಲು ಅವಕಾಶ ನೀಡಿದ ಪೋಷಕರಿಗೆ ತಲಾ 25,000 ದಂಡ ವಿಧಿಸಿದ್ದಾರೆ.

Recent Articles

spot_img

Related Stories

Share via
Copy link