ಬೆಂಗಳೂರಿನಲ್ಲಿ ತಲೆ ಎತ್ತಿದ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ: 91 ಮಂದಿ ವಿರುದ್ಧ FIR ದಾಖಲು

ಬೆಂಗಳೂರು: 

      ನಕಲಿ ಮಾರ್ಕ್ಸ್ ಕಾರ್ಡ್ ಸೃಷ್ಟಿಸಿ ಅಭ್ಯರ್ಥಿಗಳು ಸರ್ಕಾರಿ ಹುದ್ದೆ ಪಡೆದಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ನಕಲಿ ಮಾರ್ಕ್ಸ್ ಕಾರ್ಡ್ ನೀಡಿ ಸರ್ಕಾರಿ ಖಾಸಗಿ ಹುದ್ದೆ ಪಡೆದ ಅಭ್ಯರ್ಥಿಗಳು, ಮಾರ್ಕ್ಸ್ ಕಾರ್ಡ್ ಪರಿಶೀಲನೆ ವೇಳೆ, ನಕಲಿ ಆಟ ಬಯಲಾಗಿದೆ.

   ಈ ಸಂಬಂಧ ಕೈಗಾರಿಕಾ ತರಬೇತಿ & ಉದ್ಯೋಗ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ಅವರಿಂದ ದೂರು ಸಲ್ಲಿಸಲಾಗಿದ್ದು, ಬರೋಬ್ಬರಿ 91 ಮಂದಿ ವಿರುದ್ಧ FIR ದಾಖಲಾಗಿದೆ.

ಐಟಿಐ ತರಬೇತಿ ಕೇಂದ್ರಗಳಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ಕೊಟ್ಟು, ಕೆಲಸಕ್ಕೆ ಸೇರಿದ್ದು, ಸದ್ಯ ಇದೀಗ ಬಯಲಾಗಿದೆ. ಈ ನಕಲಿ ಆಟದಲ್ಲಿ ಇಲಾಖೆಯ ಕೆಲವು ಸಿಬ್ಬಂದಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು,

ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಈ ಸಂಬಂಧ ದಕ್ಷಿಣಾ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಪ್ರತಿಕ್ರಿಯೆ ನೀಡಿದ್ದು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾ ಗಿದೆ ಎಂದು ಹೇಳಿದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap