ಅದಿತ್ಯ ಠಾಕ್ರೆ ವಿರುದ್ಧ FIR ದಾಖಲು ….!

ಮುಂಬೈ

     ಕಾಮಗಾರಿ ಪೂರ್ಣವಾಗದ ಸೇತುವೆಯನ್ನು ಉದ್ಘಾಟಿಸಿದ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.  ನಗರದ ಲೋವರ್‌ ಪರೆಲ್‌ನಲ್ಲಿರುವ ಡೆಲಿಸ್ಲೆ ಮೇಲ್ಸೇತುವೆಯನ್ನು ಅಧಿಕಾರಿಗಳ ಅನುಮತಿ ಇಲ್ಲದೆ ಉದ್ಘಾಟಿಸಿದ ಆರೋಪದ ಮೇಲೆ ಶಿವಸೇನಾ ನಾಯಕ ಆದಿತ್ಯ ಠಾಕ್ರೆ, ಸುನಿಲ್‌ ಶಿಂದೆ ಹಾಗೂ ಸಚಿನ್‌ ಅಹಿರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ಬೃಹತ್ ಮುಂಬೈ ಮಹಾನಗರ ಪಾಲಿಗೆ ಅಧಿಕಾರಿಗಳು ದೂರು ನೀಡಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದಿತ್ಯ ಠಾಕ್ರೆ ಹಾಗೂ ಇತರರು ನವೆಂಬರ್‌ 16ರಂದು ಮೇಲ್ಸೇತುವೆ ಉದ್ಘಾಟಿಸಿದ್ದಾರೆ. ಆದರೆ, ಸೇತುವೆಯ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

    ಈ ಸಂಬಂಧ ಎನ್‌.ಎಂ.ಜೋಶಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ, ಸೇತುವೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ ಬಳಕೆಗೆ ಸುರಕ್ಷಿತವೆಂದು ಪ್ರಮಾಣೀಕರಿಸಲಾಗಿಲ್ಲ. ಸೇತುವೆಯನ್ನು ಅಕಾಲಿಕವಾಗಿ ಬಳಸುವ ವಾಹನ ಚಾಲಕರಿಗೆ ಸಂಭವನೀಯ ಅಪಾಯಗಳ ಬಗ್ಗೆ ನಾಗರಿಕ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

    ಸದ್ಯ ದೂರಿನ ಹಿನ್ನೆಲೆಯಲ್ಲಿ ಆದಿತ್ಯ ಠಾಕ್ರೆ ಜೊತೆಗೆ ಸುನಿಲ್ ಶಿಂದ್ ಹಾಗೂ ಸಚಿನ್ ಅಹಿರ್ ವಿರುದ್ಧ ಐಪಿಸಿ ಸೆಕ್ಷನ್ 143 , 149̧ 336 ಜೀವನ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯಿದೆ ಹಾಗೂ 447  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ದಕ್ಷಿಣ ಮುಂಬೈ ಮತ್ತು ಲೋವರ್ ಪರೇಲ್ ನಡುವಿನ ನಿರ್ಣಾಯಕ ಸಂಪರ್ಕವಾದ ಡೆಲಿಸ್ಲೆ ಸೇತುವೆಯನ್ನು ಜೂನ್‍ನಲ್ಲಿ ಭಾಗಶಃ ತೆರೆಯಲಾಯಿತು. ಕರಿ ರಸ್ತೆಯನ್ನು ಲೋವರ್ ಪರೇಲ್‍ಗೆ ಸಂಪರ್ಕಿಸುವ ಮತ್ತೊಂದು ಹಂತವು ಸೆಪ್ಟೆಂಬರ್ ನಲ್ಲಿ ತೆರೆಯಲ್ಪಟ್ಟಿತು.

    ಈ ಸಂವಿಧಾನಬಾಹಿರ ಸರ್ಕಾರದ ಮಂತ್ರಿಗಳಿಗೆ ಮೆಟ್ರೋ ಉದ್ಘಾಟನೆ ಮಾಡಲು ಸಮಯವಿಲ್ಲದಿದ್ದರೆ ಉದ್ಘಾಟನೆ ಮಾಡದೆ ಜನರಿಗಾಗಿ ಮೆಟ್ರೋವನ್ನು ಪ್ರಾರಂಭಿಸಿ. ಪ್ರಸ್ತುತ ಶಿಂಧೆ-ಬಿಜೆಪಿ ಆಡಳಿತದಲ್ಲಿ ಪಕ್ಷಕ್ಕೆ ಮೊದಲ ಸ್ಥಾನ ಮತ್ತು ಸಾರ್ವಜನಿಕರಿಗೆ ಕೊನೆಯ ಸ್ಥಾನ. ಅವರಿಗೆ ತಮ್ಮ ಪಕ್ಷಕ್ಕಾಗಿ ಪ್ರಚಾರ ಮಾಡಲು ಸಮಯವಿದೆ, ಆದರೆ ನವಿ ಮುಂಬೈ ಮೆಟ್ರೋವನ್ನು ಉದ್ಘಾಟಿಸಲು ಸಮಯವಿಲ್ಲ. ಡೆಲಿಸ್ಲೆ ರಸ್ತೆ ಸೇತುವೆಯೂ ಅದೇ ದಾರಿ” ಎಂದು ಆದಿತ್ಯ ಠಾಕ್ರೆ ನವೆಂಬರ್ 16 ರಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link