ಒಕ್ಕಲಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ : ಪ್ರೊ.ಭಗವಾನ್‌ ವಿರುದ್ಧ FIR ದಾಖಲು

ಮೈಸೂರು: 

      ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವಿಚಾರಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದ ಸಾಹಿತಿ, ಚಿಂತಕ ಪ್ರೊ ಭಗವಾನ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಗಂಗಾಧರ್ ಅವರು ನೀಡಿದ ದೂರಿನ ಆಧಾರದ ಮೇಲೆ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 ಹಾಗೂ 153A ಅಡಿಯಲ್ಲಿ ಎಫ್​ಐಆರ್ ದಾಖಲಾಗಿದೆ. 

     ಪ್ರೊ.ಭಗವಾನ್ ಅವರನ್ನು ಬಂಧಿಸಬೇಕೆಂದು ರಾಜ್ಯ ಒಕ್ಕಲಿಗರ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ. ಪ್ರೊ.ಭಗವಾನ್ ಅವರು ಶ್ರೀರಾಮ ಹಾಗೂ ಒಕ್ಕಲಿಗ ಸಮುದಾಯದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಕೆಲವು ಹಿಂಬಾಲಕರನ್ನು ಖುಷಿಯಾಗಿಡಲು ಈ ರೀತಿ ಹೇಳಿಕೆ ನೀಡಿದ್ದಾರೆ.

     ಒಕ್ಕಲಿಗ ಸಮುದಾಯದ ವಿರುದ್ಧ ಉದ್ದೇಶಪೂರ್ವಕವಾಗಿ ಮಾತನಾಡಿದ್ದಾರೆ. ಇದು ದೇಶದ ಸಹಬಾಳ್ವೆ ಒಗ್ಗಟ್ಟು‌ ಒಡೆಯುವ ಕೆಲಸ. ಅದಕ್ಕೆ ದೇಶದ್ರೋಹಿ ಪ್ರಕರಣ ದಾಖಲಿಸುವಂತೆ ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಗಂಗಾಧರ್ ಅವರು ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಸದ್ಯ ಸೆಕ್ಷನ್ 153 ಅಡಿ ಗಲಾಟೆಗೆ ಪ್ರಚೋದನಕಾರಿಯಾಗುವಂತಹ ಭಾಷಣ. 153A ಎರಡು ಸಮುದಾಯದ ನಡುವೆ ಗಲಾಟೆ ಉಂಟು ಮಾಡುವುದು, ದ್ವೇಷ ಹೆಚ್ಚಿಸುವ ಆರೋಪದಡಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link