ಕೊಚ್ಚಿ:
ಹಾಸ್ಟೆಲ್ ಒಳಗಡೆ ಅತಿಕ್ರಮ ಪ್ರವೇಶ ಮಾಡಿ ಹುಡುಗಿಯರ ಜತೆ ಮಲಗಲು ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ತೋಡಪುಳದಲ್ಲಿ ನಡೆದಿದೆ.ಬಂಧಿತ ಯುವಕನನ್ನು 23 ವರ್ಷದ ಅಖಿಲ್ ಎಂದು ಗುರುತಿಸಲಾಗಿದೆ.ಈತ ಅರಕ್ಕುಲಂ ಗ್ರಾಮದ ನಿವಾಸಿ. ಬುಡಕಟ್ಟು ಹುಡುಗಿಯರ ವಸತಿ ನಿಲಯದಲ್ಲಿ ಜೂನ್ 15ರ ಬೆಳಗಿನ ಜಾವ ಈ ಘಟನೆ ನಡೆದಿದೆ.
ಹಾಸ್ಟೆಲ್ ಪ್ರವೇಶಿಸಿ ಅಖಿಲ್, ಹುಡುಗಿಯರ ಪಕ್ಕದಲ್ಲಿ ಹೋಗಿ ಮಲಗಲು ಯತ್ನಿಸಿದ್ದಾನೆ. ಈ ವೇಳೆ ಆತನನ್ನು ನೋಡಿದ ಹುಡುಗಿಯರು ಗಾಬರಿಗೆ ಒಳಗಾಗಿ ಜೋರಾಗಿ ಕಿರುಚಿಕೊಂಡಿದ್ದಾರೆ. ಇದರಿಂದ ಭಯಗೊಂಡ ಅಖಿಲ್ ಅಲ್ಲಿಂದ ಪರಾರಿಯಾಗಿದ್ದ.
ಪ್ರಕರಣ ದಾಖಲಾದ ಬಳಿಕ ಸಿಸಿಟಿವಿ ದೃಶ್ಯಾವಳಿ ನೆರವಿನೊಂದಿಗೆ ಆರೋಪಿ ಅಖಿಲ್ನನ್ನು ಕಂಜಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಖಿಲ್ ಓರ್ವ ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಪೂಮಲಾ-ಮುವಾಟ್ಟುಪುಳ ಮಾರ್ಗವಾಗಿ ಸಂಚರಿಸುವ ಬಸ್‌ನ ಕ್ಲೀನರ್. ವರದಿಗಳ ಪ್ರಕಾರ ಈತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
