ಬೆಂಗಳೂರು :

ಸೈಟ್ ಮತ್ತು ಫ್ಲಾಟ್ ಕೊಡಿಸ್ತೀನಿ ಅಂತ ಮೋಸ ಮಾಡಿದ ಆರೋಪದ ಮೇಲೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ, ಮಾಜಿ ಶಾಸಕನ ವಿರುದ್ಧ 2 ಕೋಟಿ 84 ಲಕ್ಷ ರೂ ವಂಚನೆ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಇಂಡ್ ಸಿಂಗ್ ಡೆವಲಪರ್ಸ್ ಪ್ರೈ.ಲಿ ನ ನಿರ್ದೇಶಕ ಕೃಷ್ಣ ಎಂಬುವವರು ಈ ದೂರು ನೀಡಿದ್ದಾರೆ.
2004 ರಲ್ಲಿ ಕಟ್ಟಾ ಸುಬ್ರಮಣ್ಯ ಎಂಎಲ್‌ಎ ಅಗಿದ್ದಾಗ ಹಣ ಪಡೆದುಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹಂತ ಹಂತವಾಗಿ ಒಟ್ಟು 2 ಕೋಟಿ 84 ಲಕ್ಷ ರೂಪಾಯಿಗಳನ್ನ ಇಂಡ್ ಸಿಂಡ್ ಕಂಪನಿಯಿಂದ ನಗದು ಮತ್ತು ಚೆಕ್ ಮೂಲಕ ಪಡೆದು ವಂಚನೆ ಮಾಡಲಾಗಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








