ಕೊರಟಗೆರೆ :  ದ್ವೇಷದಿಂದ ಬಣವೆಗೆ ಬೆಂಕಿ ಇಟ್ಟ ಕಿಡಿಗೇಡಿ

 ಕೊರಟಗೆರೆ : 

      ರೈತನೋರ್ವ ವರ್ಷಪೂರ್ತಿ ಕಷ್ಟಪಟ್ಟು ಶೇಖರಣೆ ಮಾಡಲಾಗಿದ್ದ ಸುಮಾರು 1 ಲಕ್ಷ ಮೌಲ್ಯದ 8 ಲೋಡು ಹುಲ್ಲಿನ ಬಣವೆಗೆ ವೈಯಕ್ತಿಕ ದ್ವೇಷದಿಂದ ಮಾಲೀಕನ ಕಣ್ಣೆದುರೆ ಬೆಂಕಿ ಇಟ್ಟು ಸ್ಥಳದಿಂದ ಪರಾರಿ ಆಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

      ಕೊರಟಗೆರೆ ತಾಲ್ಲೂಕು ಕಸಬಾ ಹೋಬಳಿ ಹೂಲೀಕುಂಟೆ ಗ್ರಾಪಂ ವ್ಯಾಪ್ತಿಯ ಕ್ಯಾಮೇನಹಳ್ಳಿಯ ಲೇಟ್ ವೆಂಕಟೇಶಪ್ಪನ ಮಗ ತಿಮ್ಮರಾಜು ಎಂಬಾತನಿಗೆ ಸೇರಿದ ಹುಲ್ಲಿನ ಬಣವೆಗೆ ಬೆಂಕಿ ಇಟ್ಟು ಸ್ಥಳದಿಂದ ಪರಾರಿ ಆಗುತ್ತಿದ್ದ ವ್ಯಕ್ತಿಯನ್ನು ಕಣ್ಣಾರೆ ಕಂಡ ರೈತ ತಿಮ್ಮರಾಜು ದ್ವಿಚಕ್ರ ವಾಹನ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ.

      ಕ್ಯಾಮೇನಹಳ್ಳಿಯ ತಿಮ್ಮರಾಜು ಕಳೆದ ಒಂದು ವರ್ಷದಿಂದ ಕಷ್ಟಪಟ್ಟು ಜಾನುವಾರುಗಳಿಗಾಗಿ ತನ್ನ ಜಮೀನಿನಲ್ಲಿ ಶೇಖರಣೆ ಮಾಡಲಾಗಿದ್ದ ರಾಗಿ ಹುಲ್ಲು, ಮುಸುಕಿನ ಜೋಳದ ಸೆಪ್ಪೆ, ಕಡಲೆ ಕಗ್ಗನ್ನು 18 ಅಡಿ ಉದ್ದ ಮತ್ತು 8 ಅಡಿ ಎತ್ತರ ಬಣವೆ ಹಾಕಿ ಶೇಖರಿಸಿದ್ದರು. ಒಣಗಿದ್ದ ಮೇವು ಕಿಡಿಗೇಡಿಯ ಬೆಂಕಿಯಿಂದಾಗಿ ಸಂಪೂರ್ಣ ಸುಟ್ಟು ಭಸ್ಮವಾಗಿ ರೈತನಿಗೆ ಅಪಾರ ಪ್ರಮಾಣದ ನಷ್ಟವಾಗಿದೆ.

      ಕೊರಟಗೆರೆ ಅಗ್ನಿಶಾಮಕ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link