ನವದೆಹಲಿ:
ಮಾಲ್ಡೀವ್ಸ್ ಭಾರತೀಯ ಯೋಧರ ಮೊದಲ ಬ್ಯಾಚ್ ಭಾರತಕ್ಕೆ ಮರಳಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ತಮ್ಮ ದೇಶದಿಂದ ಭಾರತೀಯ ಸೇನಾ ಸಿಬ್ಬಂದಿಯ ಮೊದಲ ತಂಡವನ್ನು ಹಿಂದಿರುಗಿಸಲು ಮಾರ್ಚ್ 10ರ ಗಡುವು ನಿಗದಿಪಡಿಸಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, HLA ಅನ್ನು ನಿರ್ವಹಿಸುವ ಸಿಬ್ಬಂದಿಯ ಮೊದಲ ತಂಡವನ್ನು ವಾಪಸ್ ಕರೆಸಿಕೊಳ್ಳುವ ಕಾರ್ಯ ಪೂರ್ಣಗೊಂಡಿದೆ. ಮೊದಲ ಬ್ಯಾಚ್‌ನಡಿ ಬದಲಾಯಿಸಬೇಕಿದ್ದವರನ್ನು ಬದಲಾಯಿಸುವ ಕಾರ್ಯ ಪೂರ್ಣಗೊಂಡಿದೆ.
ಭಾರತೀಯ ಸೇನಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವ ವಿಷಯದ ಕುರಿತು ರಚಿಸಲಾದ ಉನ್ನತ ಮಟ್ಟದ ಕೋರ್ ಗ್ರೂಪ್‌ನ ಎರಡನೇ ಸಭೆಯ ನಂತರ, ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯವು ಭಾರತವು ತನ್ನ ಎಲ್ಲಾ ಮಿಲಿಟರಿ ಸಿಬ್ಬಂದಿಯನ್ನು ಮೇ 10ರೊಳಗೆ ಎರಡು ಹಂತಗಳಲ್ಲಿ ಬದಲಾಯಿಸಲಿದೆ ಎಂದು ಹೇಳಿತ್ತು.
ಕೋರ್ ಗ್ರೂಪ್‌ನ ಎರಡನೇ ಸಭೆ ಫೆಬ್ರವರಿ 2 ರಂದು ದೆಹಲಿಯಲ್ಲಿ ನಡೆಯಿತು. ಡಿಸೆಂಬರ್‌ನಲ್ಲಿ ದುಬೈನಲ್ಲಿ ನಡೆದ COP-28 ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ನಡುವಿನ ಸಭೆಯ ನಂತರ ಕೋರ್ ಗ್ರೂಪ್ ರಚಿಸುವ ನಿರ್ಧಾರವನ್ನು ಉಭಯ ದೇಶಗಳು ತೆಗೆದುಕೊಂಡಿತ್ತು.