ಮಾತೃಭೂಮಿ ರಕ್ಷಣೆಗೆ ಮೊದಲ ಆದ್ಯತೆ : ಸ್ಮೃತಿ ಇರಾನಿ

ಬೆಂಗಳೂರು :

     ಭಾರತ ಭೂಮಿ ನಮಗೆ ಮಾತೃ ಸ್ವರೂಪಿಯಾಗಿದ್ದು ಈ ಭೂಮಿಯ ರಕ್ಷಣೆಗೆ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಭಿಪ್ರಾಯಪಟ್ಟರು. ನವಲಗುಂದ ಮತಕ್ಷೇತ್ರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ರೋಡ್ ಷೋದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಭಾರತದಲ್ಲಿ ಹರಿಯುವ ಎಲ್ಲ ಜಲವು ನಮಗೆ ಗಂಗೆಯಷ್ಟು ಪವಿತ್ರ, ಒಂದೊAದು ಮಣ್ಣಿನ ಕಣ ಕಣವು ದೇವ ಕಣವಾಗಿದ್ದು ಇದು ನಮಗೆ ನಿರಂತರವಾಗಿ ನಮ್ಮ ಸಂಸ್ಕಾರದಲ್ಲಿ ಬಂದ ಸಂಸ್ಕೃತಿ; ಇದನ್ನು ರಾಹುಲ್ ಗಾಂಧಿ ಕುಟುಂಬ ಕಿವಿ ತೆರೆದು ಕೇಳಬೇಕು ಎಂದು ತಿಳಿಸಿದರು.

     ಸಚಿವ ಶಂಕರ ಪಾಟೀಲ ಮುನೆನಕೊಪ್ಪ ಮಾತನಾಡಿ, ಈ ಭಾಗದ ಜ್ವಲಂತ ಸಮಸ್ಯೆಯಾಗಿದ್ದ ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು ರಾಜ್ಯ ಸರ್ಕಾರ ಸಾವಿರ ಕೋಟಿ ಅನುದಾನ ನೀಡಿದೆ. ಈ ಭಾಗದ ರೈತರ ಬಹು ದಿನಗಳ ಬೇಡಿಕೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮನ್ನಣೆ ಕೊಟ್ಟಿದೆ. ಇದೊಂದು ರೈತಪರ ಸರ್ಕಾರ ಎನ್ನುವುದಕ್ಕೆ ಇದೇ ಸಾಕ್ಷಿ. ಬರುವ ದಿನಗಳಲ್ಲಿ ಜನತೆ ಬಿಜೆಪಿಯನ್ನು ಬೆಂಬಲಿಸಿ ಗೆಲ್ಲಿಸಲಿದ್ದಾರೆ ಎಂದರು.

ಯಾತ್ರೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ರಾಜ್ಯ ಕಾರ್ಯದರ್ಶಿ ಭಾರತಿ ಮುಗ್ದುಂ, ಯಾತ್ರೆಯ ಸಂಚಾಲಕ ಅರುಣ ಶಾಹಾಪೂರ, ಸಹಸಂಚಾಲಕರಾದ ಡಾ.ಮಲ್ಲಿಕಾರ್ಜುನ ಬಾಳಿಕಾಯಿ, ವಿವೇಕಾನಂದ ಡಬ್ಬಿ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap