ಬೆಂಗಳೂರು:
ಸೆಪ್ಟೆಂಬರ್ 21 ರ ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದಂತೆಯೇ ಭಾರತದ ಅತಿದೊಡ್ಡ ಶಾಪಿಂಗ್ ಉತ್ಸವಕ್ಕೆ ಕ್ಷಣಗಣನೆ ಆರಂಭವಾಯಿತು. ಫ್ಲಿಪ್ ಕಾರ್ಟ್ ನ ದಿ ಬಿಗ್ ಬಿಲಿಯನ್ ಡೇಸ್ 2025 ರ ಆರಂಭವಾಗುತ್ತಿದ್ದಂತೆಯೇ ಫ್ಲಿಪ್ ಕಾರ್ಟ್ ಮಿನಿಟ್ಸ್ ನಲ್ಲಿ 45 ಲಕ್ಷಕ್ಕೂ ಅಧಿಕ ಗ್ರಾಹಕರು ಮತ್ತು ಸಾಮಾನ್ಯ ದಿನಗಳಿಗೆ ಹೋಲಿಸಿದರೆ 2 ಪಟ್ಟು ಹೆಚ್ಚು ಆರ್ಡರ್ ಗಳು ಬರುವ ಮೂಲಕ ದಾಖಲೆ ನಿರ್ಮಿಸಿದೆ.
ಆರಂಭವಾದ ಮೊದಲ ಗಂಟೆಯಿಂದಲೇ ಫ್ಲಿಪ್ ಕಾರ್ಟ್ ಮಿನಿಟ್ಸ್ ನಲ್ಲಿನ ಬಿಗ್ ಬಿಲಿಯನ್ ಡೇಸ್ ನಲ್ಲಿ ಅಗಾಧವಾದ ಗ್ರಾಹಕರನ್ನು ಗಮನಿಸಿದರೆ ಭಾರತವು ಹಬ್ಬದ ಸಂಭ್ರಮವನ್ನು ಹೇಗೆ ಆಚರಿಸು ತ್ತದೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ತ್ವರಿತ ವಿತರಣೆ, ಸಂತೋಷದಾಯಕ ಶಾಪಿಂಗ್ ಅನುಭವ ಮತ್ತು ಹಿಂದೆಂದಿಗಿಂತಲೂ ದೊಡ್ಡದಾದ ರೀತಿಯಲ್ಲಿನ ಈ ಉತ್ಸವವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಹಬ್ಬಕ್ಕಿಂತ ಮುಂಚಿನ ಸಮಯವನ್ನು ಹೋಲಿಸಿದರೆ, ಮಾರಾಟದ ಆರಂಭಿಕ ಪ್ರವೇಶದ ಸಮಯ ದಲ್ಲಿ ಫ್ಲಿಪ್ ಕಾರ್ಟ್ ಮಿನಿಟ್ಸ್ ನಲ್ಲಿ ಹೊಸ ಗ್ರಾಹಕರ ಸಂಖ್ಯೆಯಲ್ಲಿ 2.6 ಪಟ್ಟು ಹೆಚ್ಚಳವಾಗಿದೆ. ಆರಂಭವಾದ ಮೊದಲ ಗಂಟೆಯಲ್ಲೇ ಅಂದರೆ ಮಧ್ಯರಾತ್ರಿ 12 ರಿಂದ 1 ಗಂಟೆಯ ವೇಳೆಯಲ್ಲಿ ಐಫೋನ್ ನ ವೇಗದ ವಿತರಣೆಯನ್ನು 3 ನಿಮಿಷದೊಳಗೆ ಪೂರ್ಣಗೊಳಿಸಿರುವುದು ದಾಖಲೆಯಾಗಿ ಉಳಿಯಿತು.
ಈ ಸೀಸನ್ ನ ಆರಂಭವಾಗುತ್ತಿದ್ದಂತೆಯೇ ನಾಳೆಗಾಗಿ ಆಚರಣೆಯ ಬದಲಾಗಿ ತತ್ ಕ್ಷಣವೇ ಆ ಆಚರಣೆ ನಡೆಯುತ್ತಿದೆ ಎಂಬಂತೆ ಕಂಡುಬಂದಿತು. ಅಂದರೆ, ಗ್ರಾಹಕರು ತಮಗೆ ಅಗತ್ಯವಾದ ತುಪ್ಪ, ಗೋಧಿಹಿಟ್ಟು ಮತ್ತು ಎನರ್ಜಿ ಡ್ರಿಂಕ್ ಗಳಿಂದ ಹಿಡಿದು ಪ್ರೀಮಿಯಂ ಸ್ಮಾರ್ಟ್ ಫೋನ್ ಗಳು, ಲ್ಯಾಪ್ ಟಾಪ್ ಗಳವರೆಗೆ ಎಲ್ಲವನ್ನೂ ಅತ್ಯಂತ ವೇಗದಲ್ಲಿ ಖರೀದಿಸಿದರು.
ಈ ಹಬ್ಬದ ಸಂಭ್ರಮದಲ್ಲಿ ಪ್ರತಿ ಕಾರ್ಟ್ ಒಂದೊಂದು ಕಥೆಯನ್ನು ಹೇಳಿತು: ಒಂದು ನಗರದಲ್ಲಿ, ಒಬ್ಬ ಖರೀದಿದಾರ ಡ್ರೈಫ್ರೂಟ್ಸ್, ಔಷಧಗಳು, ಮನೆಗೆ ಬೇಕಾದ ಅಗತ್ಯ ವಸ್ತುಗಳು ಮತ್ತು ದಿನಸಿ ಪದಾರ್ಥಗಳನ್ನು ಒಂದೇ ಆರ್ಡರ್ ನಲ್ಲಿ ಸೇರಿಸಿದರೆ, ಮತ್ತೊಬ್ಬ ಖರೀದಿದಾರ ಐಫೋನ್ 16 ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಅನ್ನು ಒಳಗೊಂಡಂತೆ 1.57 ಪ್ರೀಮಿಯಂ ಕಾರ್ಟ್ ಅನ್ನು ಆರ್ಡರ್ ಮಾಡಿದ್ದಾನೆ. ಪೀಕ್ ಅವರ್ ನಲ್ಲಿ ಪ್ರತಿ 5 ಖರೀದಿದಾರರಲ್ಲಿ ಒಬ್ಬ ಖರೀದಿದಾರ ಸ್ಮಾರ್ಟ್ ಫೋನ್ ವಿನಿಮಯವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸ್ಮಾರ್ಟ್ ಫೋನ್ ಗಳ ಖರೀದಿ ಈ ಹಬ್ಬದ ನೆಚ್ಚಿನ ಉತ್ಪನ್ನವಾಗಿಸಿತು. ಈ ಸ್ಮಾರ್ಟ್ ಫೋನ್ ವಿನಿಮಯ ಪ್ರಕ್ರಿಯೆಯ ಮೌಲ್ಯಮಾಪನ ಮತ್ತು ಇನ್ನಿತರ ಪ್ರಕ್ರಿಯೆಗಳು ಕೇವಲ 30 ನಿಮಿಷಗಳಲ್ಲಿ ಪೂರ್ಣಗೊಂಡು ಗ್ರಾಹಕರ ಮನೆ ಬಾಗಿಲಿಗೆ ಹೊಸ ಉತ್ಪನ್ನ ತಲುಪಿತು.
ಇತ್ತೀಚಿನ ನೆಕ್ಸ್ಟ್-ಜೆನ್ GST ಸುಧಾರಣೆಗಳು, ಗ್ರಾಹಕರು ಅತ್ಯಂತ ವೇಗದ ವಿತರಣೆಗಳಿಂದಷ್ಟೇ ಸಂಭ್ರಮಿಸುವಂತೆ ಮಾಡಲಿಲ್ಲ. ಇದರ ಜೊತೆಗೆ ಭಾರೀ ಪ್ರಮಾಣದ ಉಳಿತಾಯದ ಸಂಭ್ರಮ ವನ್ನೂ ಹೆಚ್ಚು ಮಾಡಿದವು. ಫ್ಲಿಪ್ ಕಾರ್ಟ್ ಮಾರಾಟಗಾರರು ಈ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವುದನ್ನು ಖಚಿತಪಡಿಸಿಕೊಳ್ಳುವ ಕೆಲಸ ಮಾಡಿದೆ. ಈ ಮೂಲಕ ಈ ಹಬ್ಬದ ಋತುವಿನ ಖರೀದಿಗಳನ್ನು ಹೆಚ್ಚು ಲಾಭದಾಯಕವಾಗಿಸಿದೆ.
- ಆರಂಭಿಕ ಹಂತದಲ್ಲಿಯೇ ಅತಿ-ಹೆಚ್ಚು ಮಾರಾಟವಾದ ಉತ್ಪನ್ನ ಎಂಬ ಹೆಗ್ಗಳಿಕೆಗೆ iPhone16 ಪಾತ್ರವಾಗಿದೆ ಮತ್ತು ಇಲ್ಲಿ ಮತ್ತೊಂದು ವಿಶೇಷವೆಂದರೆ ಕೇವಲ 3 ನಿಮಿಷಗಳಲ್ಲಿ iPhone ಅನ್ನು ಗ್ರಾಹಕರಿಗೆ ತಲುಪಿಸಲಾಗಿದೆ.
- ಪ್ರತಿ 5 ಗ್ರಾಹಕರಲ್ಲಿ ಒಬ್ಬರು ಫ್ಲಿಪ್ ಕಾರ್ಟ್ ನ ಸ್ಮಾರ್ಟ್ ಫೋನ್ ವಿನಿಮಯ ಕಾರ್ಯಕ್ರಮದಡಿ ತಮ್ಮ ಫೋನ್ ಗಳನ್ನು ಅಪ್ ಗ್ರೇಡ್ ಮಾಡಿಕೊಂಡಿದ್ದಾರೆ. ತಮ್ಮ ಮನೆ ಬಾಗಿಲಿನಲ್ಲಿಯೇ ಫೋನ್ ಗಳ ಮೌಲ್ಯಮಾಪನ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಸುಮಾರು 30 ನಿಮಿಷಗಳಲ್ಲಿ ಪೂರ್ಣಗೊಳಿಸಲಾಗಿದೆ. ಈ ಪ್ರಕ್ರಿಯೆ ನಡೆದಿರುವುದು ಇದೇ ಮೊದಲು ಮತ್ತು ಇಂತಹ ಶಾಪಿಂಗ್ ಆವಿಷ್ಕಾರ ಮಾಡಿದ ಹೆಗ್ಗಳಿಕೆ ಫ್ಲಿಪ್ ಕಾರ್ಟ್ ಗೆ ಸಲ್ಲುತ್ತದೆ.
- iPhone ಮತ್ತು ಆ್ಯಂಡ್ರಾಯ್ಡ್ ಫೋನ್ ಗಳಂತಹ ಪ್ರೀಮಿಯಂ ಖರೀದಿಗಳಿಗೆ ಫ್ಲಿಪ್ ಕಾರ್ಟ್ ಮಿನಿಟ್ಸ್ ನ ವಿಶ್ವಾಸ ಹೆಚ್ಚಾಗಿದೆ.
● ಸಾಮಾನ್ಯ ದಿನಗಳಿಗೆ ಹೋಲಿಸಿದರೆ ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೊಲ್ಕತ್ತಾದಂತಹ ಮೆಟ್ರೋ ನಗರಗಳಲ್ಲಿ ಆರ್ಡರ್ ಗಳ ಪ್ರಮಾಣ 2 ಪಟ್ಟು ಹೆಚ್ಚಾಗಿದೆ.
● ಪುಣೆ ಮತ್ತು ತ್ರಿವಳಿ ನಗರಗಳ ಮಾರುಕಟ್ಟೆ ಅಂದರೆ ಅಂಬಾಲ, ಚಂಡೀಗಢ ಮತ್ತು ಪಂಚಕುಲದಲ್ಲಿ ಒಟ್ಟು ಆರ್ಡರ್ ಗಳ ಪ್ರಮಾಣದಲ್ಲಿ 4 ಪಟ್ಟು ಹೆಚ್ಚಳ ಕಂಡುಬಂದಿದೆ. ಅದೇ ರೀತಿ ಜೈಪುರ, ಪಾಟ್ನ, ಕಾನ್ಪುರ ಮತ್ತು ಮೈಸೂರಿನಂತಹ ಮೆಟ್ರೋ ನಗರಗಳಿಂದಾಚೆಗಿನ 2 ನೇ ಶ್ರೇಣಿಯ ನಗರಗಳ ಮಾರುಕಟ್ಟೆಗಳಲ್ಲಿ ಬೇಡಿಕೆಯಲ್ಲಿ ಹೆಚ್ಚಳವಾಗಿದೆ.
● ಬೋಟ್ ಸೌಂಡ್ ಬಾರ್ ಗಳು, ಟ್ರಿಮ್ಮರ್ ಗಳು, ಫಿಟ್ನೆಸ್ ಬ್ಯಾಂಡ್ಸ್, ಚಾರ್ಜರ್ ಗಳು ಮತ್ತು ಐಪಾಡ್ಸ್ ನಂತಹ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಭಾರೀ ಬೇಡಿಕೆ ಬಂದಿದ್ದು, ಇವುಗಳ ಮೌಲ್ಯ ಮತ್ತು ತಕ್ಷಣ ಪಡೆದುಕೊಳ್ಳುವಿಕೆಯ ಬಗ್ಗೆ ಶಾಪರ್ ಗಳು ಆಸಕ್ತಿ ತೋರಿದ್ದಾರೆ. ಇದು ಹಬ್ಬದ ಮತ್ತು ಉಡುಗೊರೆ ಬಳಕೆಯ ಸಂದರ್ಭಗಳನ್ನು ಬೆಂಬಲಿಸುವ ಸ್ಮಾರ್ಟ್ ಗ್ಯಾಜೆಟ್ ಗಳು ಮತ್ತು ಪರಿಕರಗಳಿಗೆ ಬೇಡಿಕೆಯನ್ನು ಹೆಚ್ಚಿಸಿದೆ.
● ಶಾಪರ್ ಗಳು ತ್ವರಿತ ಮರುಖರೀದಿ ಮತ್ತು ಕೊನೆಯ ನಿಮಿಷದ ಸ್ಟಾಕಿಂಗ್ ಗಾಗಿ ಹೆಚ್ಚು ಹುಡುಕಾಟ ನಡೆಸಿದ್ದಾರೆ. ಫಾರ್ಮ್ಲಿ, ಕ್ಲಾಸಿಕ್ ಮತ್ತು ಝಾಫ್ ನಂತಹ ಬ್ರ್ಯಾಂಡ್ ಗಳಿಂದ ಡ್ರೈಫ್ರೂಟ್ಸ್ ಹಾಗೂ ಮಖಾನಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಇದರ ಜೊತೆಗೆ ಸ್ಟಿಂಗ್ ಮತ್ತು ಹೆಲ್ ಫಾಸಿಲ್, ಪೀಟರ್ ಇಂಗ್ಲೆಂಡ್, ಅನಲಾಗ್ ವಾಚ್ ಗಳು ಸಹ ಖರೀದಿದಾರರ ನೆಚ್ಚಿನ ಉತ್ಪನ್ನಗಳಾಗಿದ್ದವು.
ಫ್ಲಿಪ್ ಕಾರ್ಟ್ ಗ್ರೂಪ್ ನ ಕಸ್ಟಮರ್ ಎಕ್ಸ್ ಪೀರಿಯೆನ್ಸ್ ಅಂಡ್ ರೀಕಾಮರ್ಸ್ ನ ಮಿನಿಟ್ಸ್ & ಸಪ್ಲೇ ಚೇನ್ ನ ಮುಖ್ಯಸ್ಥ ಹಾಗೂ ಹಿರಿಯ ಉಪಾಧ್ಯಕ್ಷ ಹೇಮಂತ್ ಬದ್ರಿ ಅವರು ಮಾತನಾಡಿ, “ಈ ಬಿಗ್ ಬಿಲಿಯನ್ ಡೇಸ್ ಭಾರತದ ಶಾಪಿಂಗ್ ವಿಧಾನದಲ್ಲಿ ಒಂದು ಮಹತ್ವದ ತಿರುವಾಗಿದೆ. ಮೊದಲ ಬಾರಿಗೆ, ಲಕ್ಷಾಂತರ ಗ್ರಾಹಕರು ಫ್ಲಿಪ್ ಕಾರ್ಟ್ ಮಿನಿಟ್ಸ್ ನಲ್ಲಿ ಐಸ್ ಕ್ರೀಂನಿಂದ ಹಿಡಿದು ಐಫೋನ್ ಗಳವರೆಗೆ ಎಲ್ಲವನ್ನೂ ಕೇವಲ 10 ನಿಮಿಷಗಳಲ್ಲಿ ಪಡೆದುಕೊಳ್ಳುವ ಮೂಲಕ ದೇಶದ ಅತಿದೊಡ್ಡ ಶಾಪಿಂಗ್ ಹಬ್ಬವನ್ನು ಆನ್ ಲೈನ್ ನಲ್ಲಿ ಮಾತ್ರವಲ್ಲದೇ ಇನ್ ಸ್ಟಂಟ್ ಆಗಿ ಆಚರಣೆ ಮಾಡುತ್ತಿದ್ದಾರೆ.
ಇದಕ್ಕೆ ಅವಕಾಶ ಕಲ್ಪಿಸಿದ ಇತ್ತೀಚಿನ ಜಿಎಸ್ ಟಿ ಸುಧಾರಣೆಗಳಿಗೆ ಧನ್ಯವಾದಗಳು. ಈ ಹಬ್ಬದ ಋತುವು ಗ್ರಾಹಕರಿಗೆ ಇನ್ನಷ್ಟು ತೃಪ್ತಿಕರವಾಗಿದೆ. ಏಕೆಂದರೆ ಅವರು ಕೆಲವೇ ನಿಮಿಷಗಳಲ್ಲಿ ತಮ್ಮ ನೆಚ್ಚಿನ ಉತ್ಪನ್ನಗಳಿಗೆ ಶಾಪಿಂಗ್ ಮಾಡುವಾಗ ಹೆಚ್ಚಿನ ಉಳಿತಾಯ ಸಾಧ್ಯವಾಗುತ್ತದೆ. ಈ ಋತುವಿನಲ್ಲಿ ನಮ್ಮನ್ನು ಹೆಚ್ಚು ರೋಮಾಂಚನಗೊಳಿಸಿರುವುದು ಕೇವಲ ಆರ್ಡರ್ ಪ್ರಮಾಣವಲ್ಲ. ಭಾರತೀಯರು ಆಯ್ಕೆ ಮಾಡಿಕೊಳ್ಳುತ್ತಿರುವ ವೈವಿಧ್ಯತೆ, ಕೊನೆಯ ನಿಮಿಷದ ಹಬ್ಬದ ಉಡುಗೊರೆಗಳು, ಗೌರ್ಮೆಟ್ ಟ್ರೀಟ್ ಗಳು ಮತ್ತು ಟ್ರೆಂಡಿಂಗ್ ಸ್ಮಾರ್ಟ್ ಫೋನ್ ಗಳವರೆಗೆ ಎಲ್ಲವನ್ನೂ ಹಿಂದೆಂದಿಗಿಂತಲೂ ವೇಗವಾಗಿ ಅವರಿಗೆ ತಲುಪಿಸಲಾಗುತ್ತದೆ.
ಮೆಟ್ರೋ ನಗರಗಳು ಮತ್ತು 2+ ಶ್ರೇಣಿಯ ನಗರಗಳಲ್ಲಿ ನಾವು ಗಮನಿಸುತ್ತಿರುವ ಆವೇಗವು ಸಾಂಸ್ಕೃತಿಕ ಬದಲಾವಣೆಯನ್ನು ಸೂಚಿಸುತ್ತದೆ. ಇದು ಶಾಪಿಂಗ್ ತಕ್ಷಣ, ಸಂತೋಷ ಮತ್ತು ನಂಬಿಕೆಯ ಬಗ್ಗೆ ಫ್ಲಿಪ್ ಕಾರ್ಟ್ ನಲ್ಲಿ ಭಾರತದ ಹಬ್ಬದ ಆಂದೋಲದಲ್ಲಿ ಈ ಹೊಸ ಅಧ್ಯಾಯವನ್ನು ರೂಪಿಸುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ. ಇಲ್ಲಿ ನಿಮಿಷಗಳಲ್ಲಿ ಪೂರೈಸಲಾದ ಪ್ರತಿಯೊಂದು ಆರ್ಡರ್ ಅತ್ಯುತ್ತಮ ಆಚರಣೆಯಾಗಿದೆ’’ ಎಂದು ಅಭಿಪ್ರಾಯಪಟ್ಟರು.
ಫ್ಲಿಪ್ ಕಾರ್ಟ್ ನಲ್ಲಿನ ಎಲ್ಲಾ ಬ್ಲಾಕ್ ಬಸ್ಟರ್ ಡೀಲ್ ಗಳು ದಿ ಬಿಗ್ ಬಿಲಿಯನ್ ಡೇಸ್ 2025 ಸೇಲ್ ಸಮಯದಲ್ಲಿ ಫ್ಲಿಪ್ ಕಾರ್ಟ್ ಮಿನಿಟ್ಸ್ ನಲ್ಲಿ ಲೈವ್ ಆಗಿವೆ. ಅಗತ್ಯ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಂದ ಹಿಡಿದು ಹಬ್ಬದ ಆಹಾರ ಪದಾರ್ಥಗಳು ಮತ್ತು ಉಡುಗೊರೆಗಳನ್ನು ನೀಡುವವರೆಗೆ ಈ ಋತುವಿನಲ್ಲಿ ಫ್ಲಿಪ್ ಕಾರ್ಟ್ ಮಿನಿಟ್ಸ್ ತ್ವರಿತ ವಿತರಣೆಯನ್ನು ಆಯ್ಕೆ, ಮೌಲ್ಯ ಮತ್ತು ಅನುಕೂಲತೆಯ ರಾಷ್ಟ್ರವ್ಯಾಪಿ ಆಚರಣೆಯಾಗಿ ಪರಿವರ್ತಿಸುತ್ತದೆ. ಅದು ಸಹ ಕೇವಲ 10 ನಿಮಿಷಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದೆ.
