ಬಲವಂತವಾಗಿ ಹಿಜಾಬ್​ ತೆಗೆಸಿದ ಕಂಡಕ್ಟರ್​! ಹಿಡಿಶಾಪ ಹಾಕಿದ ಪ್ರಯಾಣಿಕರೂ ಸತ್ಯ ತಿಳಿದು ಶಾಕ್​

ನವದೆಹಲಿ: 

ಕೆಲವರಿಗೆ ಎಷ್ಟೇ ಉಚಿತ ಸವಲತ್ತು ಕೊಟ್ಟರೂ ಇನ್ನಷ್ಟು ಮತ್ತಷ್ಟು ಪಡೆದುಕೊಳ್ಳುವ ಆಸೆ. ಅದಕ್ಕಾಗಿ ಎಂತೆಂಥ ವೇಷಗಳನ್ನು ಹಾಕಿಕೊಳ್ಳಲೂ ಅವರು ಹಿಂಜರಿಯುವುದಿಲ್ಲ. ಅಂಥದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ.

ಇಲ್ಲಿ ಸರ್ಕಾರ ಮಹಿಳೆಯರಿಗೆ ಉಚಿತ ಬಸ್​ ಸೇವೆ ಆರಂಭಿಸಿದೆ.ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸುವ ಉದ್ದೇಶದಿಂದ ಯುವಕನೊಬ್ಬ ಹಿಜಾಬ್​ ಧರಿಸಿ ಲೇಡೀಸ್​ ಸೀಟ್​ನಲ್ಲಿ ಬಂದು ಕುಳಿತಿದ್ದಾನೆ.

ST’ ಮೀಸಲಾತಿ ಹೆಚ್ಚಳದ ಕುರಿತಂತೆ ಸಿಎಂ ಬೊಮ್ಮಾಯಿ ಮಹತ್ವದ ಹೇಳಿಕೆ

ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಸ್​​​​ನಲ್ಲಿ ಪ್ರಯಾಣಿಸುತ್ತಿದ್ದ. ಹುಡುಗಿಯರಂತೆ ವರ್ತಿಸಲು ಸಾಕಷ್ಟು ಪ್ರಯತ್ನಿಸಿದ್ದಾನೆ. ಆದರೆ ಆತನ ನಡವಳಿಕೆ ನೋಡಿ ಕಂಡಕ್ಟರ್​ಗೆ ಸಂದೇಹ ಬಂದಿದೆ. ಮಾಸ್ಕ್​ ತೆಗೆಯಲು ಹೇಳಿದರೂ ಯುವಕ ಅದನ್ನು ಆರಂಭದಲ್ಲಿ ವಿರೋಧಿಸಿದ್ದಾನೆ. ನಂತರ ಕಂಡಕ್ಟರ್​ ಬಲವಂತ ಮಾಡಿದಾಗ ನಿಜ ಬಣ್ಣ ಬಯಲಾಗಿದೆ. ಒಳಗೆ ಗಡ್ಡ-ಮೀಸೆ ಇರುವ ಯುವಕ ಕಾಣಿಸಿದ್ದಾನೆ. ಗಡ್ಡ-ಮೀಸೆ ಇದ್ದರೂ ಯುವಕ ಮಹಿಳೆಯ ದನಿಯಲ್ಲಿಯೇ ಮಾತನಾಡಲು ಯತ್ನಿಸಿದ್ದಾನೆ. ಕೊನೆಗೆ ಹಿಜಾಬ್​ ಅನ್ನೂ ತೆಗೆಸಿದ ಕಂಡಕ್ಟರ್​ ಇದರ ವಿಡಿಯೋ ಕೂಡ ಮಾಡಿದ್ದಾರೆ.

ಪೊಲೀಸರಿಗೆ ಪಾಸ್‌ಪೋರ್ಟ್ ಮುಟ್ಟುಗೋಲು ಅಧಿಕಾರವಿಲ್ಲ: ಹೈಕೋರ್ಟ್

ಆರಂಭದಲ್ಲಿ ಹಿಜಾಬ್​, ಮಾಸ್ಕ್​ ತೆಗೆಸುತ್ತಿರುವುದನ್ನು ಕಂಡ ಇತರ ಪ್ರಯಾಣಿಕರು ಕಂಡಕ್ಟರ್​ ಮೇಲೆಯೇ ಹರಿಹಾಯ್ದಿದ್ದರು. ಹುಡುಗಿಯ ಬಳಿ ಇದೆಂಥ ದುರ್ವರ್ತನೆ ಎಂದುಕೊಂಡವರು ಕೆಲವರು. ಕೊನೆಗೆ ಅವರೂ ಬೆಚ್ಚಿಬಿದ್ದಿದ್ದಾರೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap