ಬಲವಂತದ ಮತಾಂತರ : ಆರೋಪಿಗೆ ಜೀವಾವಧಿ ಶಿಕ್ಷೆ

ಬುಲಂದ್‌ಶಹರ್:

    ಹಿಂದೂ ಯುವತಿಯನ್ನು ಬಲವಂತವಾಗಿ ಮತಾಂತರ ಮಾಡಿದ ಆರೋಪ ಪ್ರಕರಣದಲ್ಲಿ ಎಸ್‌ಸಿ/ಎಸ್‌ಟಿ ನ್ಯಾಯಾಲಯ, ಮುಸ್ಲಿಂ ಯುವಕನಿಗೆ ಜೀವಾವಧಿ ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ. 

    ಧಾರ್ಮಿಕ ಮತಾಂತರ ಕಾಯ್ದೆಯಡಿ ಅನೀಸ್ ಎಂಬ ಮುಸ್ಲಿಂ ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಆರೋಪಿ ತಪ್ಪಿತಸ್ಥ ಎಂದು ತೀರ್ಪು ನೀಡಿದೆ.

    ಧಾರ್ಮಿಕ ಮತಾಂತರ ಕಾಯ್ದೆಯಡಿ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ.ಮಾರ್ಚ್ 15, 2022 ರಂದು, ಅನೀಸ್ ವಿರುದ್ಧ ಗುಲಾವತಿ ಪೊಲೀಸ್ ಠಾಣೆಯಲ್ಲಿ ಹಿಂದೂ ಹುಡುಗಿಯನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.

    ಆರಂಭದಲ್ಲಿ ತನ್ನನ್ನು ಆಕಾಶ್ ಎಂದು ಪರಿಚಯಿಸಿಕೊಂಡಿದ್ದ ಅನೀಸ್, ನಂತರ ಹುಡುಗಿಯನ್ನು ಮತಾಂತರಗೊಳಿಸುವಂತೆ ಒತ್ತಾಯಿಸಿ ಮದುವೆಯಾದ ನಂತರ ಆಕೆಯ ಹೆಸರನ್ನು ಆಯೇಶಾ ಎಂದು ಬದಲಾಯಿಸಿದ್ದನು.

Recent Articles

spot_img

Related Stories

Share via
Copy link
Powered by Social Snap