ಮಂಡ್ಯದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ  ಪ್ರತಿಕ್ರಿಯೆ

ಮಂಡ್ಯ :

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ನಾನು, ಇತರೆ ಮುಖಂಡರು ಸೇರಿ ಒಂದು ತೀರ್ಮಾನ ಮಾಡಿದ್ದೇವೆ.ಎಲ್ಲಾ ಜಿಲ್ಲಾ ಕೇಂದ್ರಗಳಿಗೆ 5 ದಿನಗಳ ಕಾಲ ರಾಜ್ಯ ನಾಯಕರು ಹೋಗಬೇಕು.ಕೇಂದ್ರ, ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಬೇಕು.

ಸಂತೋಷ್ ಪಾಟೀಲ್ ಅನ್ನೋ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ ಬಿಜೆಪಿ ಕಾರ್ಯಕರ್ತ ಕೂಡ.ಸಾವಿಗೂ ಮುನ್ನ ಸಂತೋಷ್ ವಾಟ್ಸಾಪ್ ಮೆಸೇಜ್ ಮಾಡಿದ್ದಾರೆ.ನನ್ನ ಸಾವಿಗೆ ನೇರ ಕಾರಣ ಸಚಿವ ಈಶ್ವರಪ್ಪ ಅಂತಾ.ಇದನ್ನ ಸ್ವತಃ ಸಂತೋಷ್ ಪಾಟೀಲ್ ಸಾವಿಗೂ ಮುನ್ನ ಮಾಡಿರೋ ಆರೋಪ.ಸಂತೋಷ್ ಯಾರು ಅಂತಾನೇ ಗೊತ್ತಿಲ್ಲ ಅಂತಾರೆ ಈಶ್ವರಪ್ಪ.ಅದಕ್ಕೆ ಈಶ್ವರಪ್ಪ ಒಬ್ಬ ದಂಡ ಅಂತಾ ಹೇಳೋದು ನಾನು.

ಅಣ್ವಸ್ತ್ರ ದಾಳಿ ಭೀತಿಯಲ್ಲಿ ಜಗತ್ತು, ಉಕ್ರೇನ್​ ಬೆಂಬಲಕ್ಕೆ ಸಬ್​ಮರೀನ್ ಕಳುಹಿಸಿದ ಬ್ರಿಟನ್, ಕೆರಳಿದ ರಷ್ಯಾ

ಗೊತ್ತಿಲ್ಲದ ವ್ಯಕ್ತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೇಗೆ ಹಾಕಿದ್ರಿ?ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ.
ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ ಅಂತಾ.ಈಶ್ವರಪ್ಪ ಒಬ್ಬ ಕೊಲೆ ಗಡುಕ.ಬಸವರಾಜ ಬೊಮ್ಮಾಯಿ ಸರ್ಕಾರ ಕೊಲೆಗಡುಕ ಸರ್ಕಾರ.ಸಂತೋಷ್ ತಾಯಿ, ತಮ್ಮ, ಪತ್ನಿ ಎಲ್ಲರೂ ಹೇಳಿಕೆ ನೀಡಿದ್ದಾರೆ.ಈಶ್ವರಪ್ಪ 40 ಪರ್ಸೆಂಟ್ ಕಮೀಷನ್ ಕೇಳಿದ್ರು.ಅದಕ್ಕಾಗಿ ಒಡವೆ ಅಡವಿಟ್ಟು ಹಣ ಕೊಟ್ಟಿದ್ದೆವು ಅಂತಾ.ಸಾಲ ಮಾಡಿ ಹಣ ತಂದು ಮನೆ ಹಾಳು ಮಾಡಿಕೊಳ್ಳಬೇಕ?ಆದರೂ ಈಶ್ವರಪ್ಪ ಹೇಳ್ತಾರೆ ಆ ಕೆಲಸ ಮಂಜೂರಾಗಿಲ್ಲ ಅಂತಾ.

ಲಖೀಂಪುರ ಖೇರಿ ಗಲಭೆ ಪ್ರಕರಣ: ಆಶಿಶ್‌ ಮಿಶ್ರಾ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮಂಜೂರಾಗಿಲ್ಲ ಅಂದ್ರೆ ಕೆಲಸ ಮಾಡೋಕೆ ಏಕೆ ಹೇಳಿದೆ.ಆತ ಕೆಲಸ ಮಾಡಿರೋದಕ್ಕೆ ಹಿಂಡಲಗಾ ಗ್ರಾಪಂ ಅಧ್ಯಕ್ಷನೇ ಸಾಕ್ಷಿ.ಅಧ್ಯಕ್ಷರೇ ಈಶ್ವರಪ್ಪನ ಹತ್ತಿರ ಸಂತೋಷ್ ಕರೆದೊಯ್ದಿದ್ದನಂತೆ.ಅಂತಹದ್ದರಲ್ಲಿ ಈಶ್ವರಪ್ಪನ ಬಂಧಿಸಬೇಕೋ? ಬೇಡ್ವೋ?ಆದರೂ ಕುಮಾರಸ್ವಾಮಿ ಹೇಳ್ತಾರೆ ಅವರನ್ನ ಏಕೆ ಬಂಧಿಸಬೇಕು ಅಂತಾ?.ಈಶ್ವರಪ್ಪನಿಗೊಂದು, ಸಾಮಾನ್ಯ ಜನರಿಗೊಂದು ಕಾನೂನು ಇದೆಯಾ?

545 ಪಿಎಸ್‌ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ; ಬಿಜೆಪಿಯ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ ಬಂಧನ

ಒಬ್ಬ ಕಳ್ಳ, ಮತ್ತೊಬ್ಬ ಕಳ್ಳನಿಗೆ ಬೆಂಬಲಿಸೋದು.ಎರಡು ಸಲ ಮುಖ್ಯಮಂತ್ರಿ ಆಗಿದ್ದವರು ಇವರು.ಆದರೂ ಯಾಕಿಂಗ್ ಹೇಳ್ತಾರೋ?
ಏನ್ರೀ ಪೊಲೀಸರೇ ಅರೆಸ್ಟ್ ಮಾಡ್ತಿರಲಿಲ್ಲವೇನ್ರೀ ನೀವು?ಈಶ್ವರಪ್ಪನ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲು ಮಾಡಿಲ್ಲ.ಇದರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಇನ್ವಾಲ್ವ್ ಆಗಿದ್ದಾರೆ.ಈಶ್ವರಪ್ಪನಿಗೆ ಸಹಕರಿಸಲು ಭ್ರಷ್ಟಾಚಾರ ಪ್ರಕರಣ ಬಿಟ್ಟಿದ್ದಾರೆ.
ಅದಕ್ಕಾಗಿ ನಾವು ಹೋರಾಟ ಮಾಡ್ತಿದ್ದೇವೆ.ಈಶ್ವರಪ್ಪನ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲು ಮಾಡಬೇಕು.
ಕೂಡಲೇ ಬಂಧಿಸಬೇಕು ಅನ್ನೋದು ನಮ್ಮ ಆಗ್ರಹ.

ಬಿಜೆಪಿ ಸರ್ಕಾರ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್ !

ಯಾವತ್ತೂ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಕಮೀಷನ್ ಆರೋಪ ಮಾಡಿಲ್ಲ.ಇದೇ ಮೊದಲ ಬಾರಿಗೆ ಈ ಸರ್ಕಾರದ ವಿರುದ್ಧ ಸಂಘವೊಂದು ಆರೋಪ ಮಾಡಿದೆ.ಈ ಬಗ್ಗೆ ಪ್ರಧಾನಿಗೆ ಪತ್ರ ಕೂಡ ಬರೆದಿದ್ದಾರೆ. ಆದರೂ ನಾನು ಚೌಕಿಧಾರ್ ಅಂತಾರೆ ಮೋದಿ.9ತಿಂಗಳ ಹಿಂದೆ ಸರ್ಕಾರದ ವಿರುದ್ಧ ಪ್ರಧಾನಿಗೆ ಪತ್ರ ಬರೆಯುತ್ತಾರೆ.ಆ ಪತ್ರವನ್ನ ತಲೆಗೆ ಇಟ್ಕೊಂಡ್ ನಿದ್ದೆ ಮಾಡ್ತಿದ್ದಾರೆ ಮೋದಿ.

ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಕಟ್ಟಿದ್ದ ಹ್ಯೂಬ್ಲೆಟ್ ವಾಚ್ ಕೊಟ್ಟಿದ್ದವರು ಯಾರು?

9 ತಿಂಗಳಿಂದ ಏನೂ ಕ್ರಮ ವಹಿಸಿಲ್ಲ.ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕೇಳಿದೆ.ಅದನ್ನ ಸರ್ಕಾರ ಮತ್ತು ಸ್ಪೀಕರ್ ತಿರಸ್ಕಾರ ಮಾಡಿದ್ರು.ಹೀಗಾಗಿ ಜನರ ಬಳಿಗೆ ನ್ಯಾಯ ಕೇಳೋಕೆ ಬಂದಿದ್ದೇವೆ.ಕಳೆದ ಸಲ ಏಳಕ್ಕೆ ಏಳು ಕ್ಷೇತ್ರದಲ್ಲೂ ಸೋಲಿಸಿದ್ರಿ.ನಾನು ಏನು ತಪ್ಪು ಮಾಡಿದೆ ಅಂತಾ ಸೋಲಿಸಿದ್ರಿ?

ಯಾವ ತಪ್ಪಿಗಾಗಿ ನಮಗೆ ಈ ಶಿಕ್ಷೆ ಕೊಟ್ಟಿರಿ?ರೈತರು, ಜನಸಾಮಾನ್ಯರ ಪರ ಯೋಜನೆ ಕೊಟ್ಟಿದ್ದು ತಪ್ಪಾ?
ಕೈ ಮುಗಿದು ಪ್ರಾರ್ಥನೆ ಮಾಡ್ತೇನೆ.ಮತ್ತೆ ಅಂತಹ ತಪ್ಪು ಮಾಡದೆ.ಮುಂದಿನ ಚುನಾವಣೆಯಲ್ಲಿ ಏಳಕ್ಕೆ ಏಳು ಕ್ಷೇತ್ರ ಗೆಲ್ಲಿಸಿಕೊಡಿ.ಹಿಂದುಳಿದವರಿಗೆ, ದಲಿತರಿಗೆ ನಿರಂತರ ಅನ್ಯಾಯವಾಗಿದೆ.ಕುವೆಂಪು ಸರ್ವ ಜನಾಂಗದ ಶಾಂತಿಯ ತೋಟ ಅಂದ್ರು.
ಸರ್ವ ಜನಾಂಗದ ತೋಟವಾಗಿ ಉಳಿದಿದೆಯ?

ಈಶ್ವರಪ್ಪ ರಾಜೀನಾಮೆ ಬೆನ್ನಲ್ಲೇ ಬೊಮ್ಮಾಯಿ ಸರಕಾರದ ಮತ್ತೆ 2 ವಿಕೆಟ್ ಪತನ?

ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಅಂದ್ರೆ ಜಲಧಾರೆ ಮಾಡ್ತಿದ್ದಾರೆ.ಮೇಕೆದಾಟು ಪಾದಯಾತ್ರೆ ಮಾಡಿದ್ರೆ ನಾಳೆ ನೀರು ಬಂದುಬಿಡುತ್ತಾ ಅಂತಿದ್ರು. ಜಲಧಾರೆ ಮಾಡುದ್ರೆ ನಾಳೆಗೆ ನೀರು ಬಂದ್ಬಿಡ್ತದ?ಮೇಕೆದಾಟು ಡಿಪಿಆರ್ ಮಾಡಿದ್ದು ನಮ್ಮ ಸರ್ಕಾರ.ನಾನು ಸಿಎಂ ಆಗಿದ್ದಾಗ ನೀರಾವರಿಗೆ ವರ್ಷಕ್ಕೆ 10 ಸಾವಿರ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದೆ.5 ವರ್ಷಗಳಲ್ಲಿ 55 ಸಾವಿರ ಕೋಟಿ ನೀರಾವರಿ ಯೋಜನೆಗೆ ಕೊಟ್ಟೆ.ಮಂಡ್ಯ ಮೈಶುಗರ್ ಕಾರ್ಖಾನೆಗೆ ಹಣ ಕೊಟ್ಟು, ಆರಂಭಿಸಿದ್ದೆ.

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಇನ್ಮುಂದೆ ಪೋಡಿ, ಹದ್ದುಬಸ್ತು, ಇತರೆ ನಕ್ಷೆಗಳು ‘ಆನ್ ಲೈನ್’ನಲ್ಲೇ ಲಭ್ಯ

ಪೂರಿಗಾಲಿ ನೀರಾವರಿ ಯೋಜನೆ ಜಾರಿಗೆ ತಂದೆ. ನೀವೇನು ಕೊಟ್ಟಿದ್ದೀರಪ್ಪ? ಇದನ್ನ ಜನರಿಗೆ ಹೇಳಬೇಕು ಅಲ್ವಾ?
ಮತ್ತೆ ನಾವು ಅಧಿಕಾರಕ್ಕೆ ಬರ್ತೇವೆ.ಮಂಡ್ಯ ಮೈಶುಗರ್ ಕಾರ್ಖಾನೆಯನ್ನ ಮತ್ತೆ ಆರಂಭ ಮಾಡ್ತೇವೆ. ಈ ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪುವವನಲ್ಲ.ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಪೆಟ್ರೋಲ್ 64 ಇತ್ತು ಇವತ್ತು 111 ರೂಪಾಯಿ ಆಗಿದೆ.
414ರೂ ಇದ್ದ ಸಿಲಿಂಡರ್ ದರ ಸಾವಿರ ರೂಪಾಯಿ ಆಗಿದೆ.

ರಾಕಿ ಸಾಮ್ರಾಜ್ಯ ವೀಕ್ಷಿಸುತ್ತಿರುವ ಬೆಂಗಳೂರು ಬಾಯ್ಸ್; ಆರ್​ಸಿಬಿ ತಂಡಕ್ಕೆ ‘ಕೆಜಿಎಫ್ ಚಾಪ್ಟರ್ 2’ ವಿಶೇಷ ಪ್ರದರ್ಶನ

ಅಚ್ಛೇ ದಿನ್ ಬರಲಿದೆ ಅಂದ್ರಿ.ಭ್ರಷ್ಟಾಚಾರ ಹೊರಟೋಗುತ್ತೆ.ಕಪ್ಪು ಹಣ ವಾಪಸ್ ಬರುತ್ತೆ ಅಂದಿದ್ರಿ.ಅಚ್ಛೇ ದಿನ್ ಬಂತಾ ಮೋದಿಜಿ?ಯಡಿಯೂರಪ್ಪ, ಬೊಮ್ಮಾಯಿ ಬಂದ ಮೇಲೆ ಒಂದೇ ಒಂದು ಕೃಷಿ ಹೊಂಡಕ್ಕೆ ಹಣ ಕೊಟ್ಟಿಲ್ಲ.ಈ ಬಿಜೆಪಿ ಸರ್ಕಾರವೇ ಸುಳ್ಳಿನ ಕಂತೆ.
2 ಕೋಟಿ ಉದ್ಯೋಗ ಕೊಡ್ತೀವಿ ಅಂದಿದ್ರು.ಒಂದೇ ಒಂದು ಉದ್ಯೋಗ ಕೊಟ್ಟಿಲ್ಲ.ಮೋದಿ ತಮ್ಮನ್ನ ನಂಬಿದ ಯುವಕರಿಗೆಲ್ಲ ಪಂಗನಾಮ ಹಾಕಿದ್ರು.ಸಿಂಗ್ ಇದ್ದಾಗ 53ಲಕ್ಷದ 11 ಸಾವಿರ ಕೋಟಿ ಸಾಲ ಇತ್ತು.ಇವತ್ತು 157ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದು ಮೋದಿ ದೇಶಕ್ಕೆ ಮಾಡಿದ ಅನ್ಯಾಯ. ಮೋದಿ ಬಂದ ನಂತರ 100 ಲಕ್ಷ ಕೋಟಿ ಸಾಲ ಮಾಡಿದ್ದಾರೆ.

 ಪಾಯಿಂಟ್ ಟೇಬಲ್ ಅನ್ನೇ ತಲೆಕೆಳಗಾಗಿಸಿದ ಆರ್​ಸಿಬಿ ಗೆಲುವು: ಇಲ್ಲಿದೆ ನೂತನ ಅಂಕಪಟ್ಟಿ

ಕಾಂಗ್ರೆಸ್ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಕ್ಷ.ಬಿಜೆಪಿ ಯಾವತ್ತೂ ದೇಶಕ್ಕಾಗಿ ಹೋರಾಟ ಮಾಡಿದ ಪಕ್ಷವಲ್ಲ.ನಮ್ಮದು ಗಾಂಧೀಜಿ ಪಕ್ಷ. ಬಿಜೆಪಿಯದ್ದು ಸಾವರ್ಕರ್ ಪಕ್ಷ.ಮನುಷ್ಯತ್ವ ಬೇಕೋ? ಮನುವಾದ ಬೇಕೋ? ನೀವೇ ಯೋಚಿಸಿ.ಕೋಮುವಾದ ಬಿತ್ತುವ ಬಿಜೆಪಿ ಮತ್ತು ಅವರಿಗೆ ಬೆಂಬಲವಾಗಿ ನಿಲ್ಲುವ ಜೆಡಿಎಸ್ ಪಕ್ಷದ ವಿರುದ್ಧ ಮತ ಹಾಕಿ.ಕಣ್ಣೀರಿಗೆ ಇನ್ಮುಂದೆ ಮರುಳಾಗಬೇಡಿ.

ರಾಜಕೀಯ ನಮ್ಮಪ್ಪನ ಆಸ್ತಿನ?ಜನ ಆಶೀರ್ವಾದ ಮಾಡಿದ್ರೆ ಅಧಿಕಾರದಲ್ಲಿರಬೇಕು. ಇಲ್ಲವಾದರೆ ವಿರೋಧ ಪಕ್ಷದಲ್ಲಿ ಕೂರಬೇಕು.ಆದರೂ ರಾಜಕಾರಣಿಗಳಿಗೆ ಕಣ್ಣೀರು ಯಾಕ್ ಬರುತ್ತೆ? ಇಂತಹ ಕಣ್ಣೀರಿಗೆ ಮರುಳಾಗಬೇಡಿ.ಮಂಡ್ಯದಲ್ಲಿ ಮಾಧ್ಯಮಗಳಿಗೆ ಸಿದ್ದರಾಮಯ್ಯ ಹೇಳಿಕೆ.ಮಠಗಳ ಅನುದಾನ ಪಡೆಯಲು ಕಮಿಷನ್ ಕೊಡಬೇಕು ಎಂಬ ವಿಚಾರ.ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ದಿಂಗಾಲ್ಲೇಶ್ವರ ಸ್ವಾಮೀಜಿ.

ರಾಜ್ಯದ 75 ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳಲ್ಲಿ ಯೋಗ ಉತ್ಸವ: ಶ್ವಾಸ ಗುರು ವಚನಾನಂದ ಸ್ವಾಮೀಜಿ

ಸ್ವಾಮೀಜಿಗಳತ್ರನೆ ಲಂಚ ಕೇಳ್ತಾರೆ ಅಂದ್ರೆ ಎಂಥ ನಾಚಿಕೆಗೇಡಿನ‌ ಸರ್ಕಾರ ಇದು.ನಾವು ಮಾಡ್ತಿರುವ ಹೋರಾಟಗಳಿಗೆ ಇದು ಸಾಕ್ಷಿ ಇದ್ದಂತೆ.ಇದು 40% ಸರ್ಕಾರ ಅನ್ನೋದು ಸಾಬೀತಾಗಿದೆ.ಇದು ರಾಜ್ಯ ಸರ್ಕಾರದ ಹಣ ಆಗಿರುವುದರಿಂದ ಯಾರೇ ಆದರು ಕಮಿಷನ್ ಕೊಡ್ಬೇಕಾಗಿದೆ.ಇದನ್ನ ನಾನು ಖಂಡಿಸುತ್ತೇನೆ.ಸ್ವಾಮೀಜಿಗಳಿಗೆ ಕೊಟ್ಟ ದುಡ್ಡಿನಲ್ಲಿಯು ಕಮೀಷನ್ ಕೇಳ್ತಾರೆ ಅಂದ್ರೆ ಇದು ಎಂಥ ಭ್ರಷ್ಟ ಸರ್ಕಾರ ಅಂತ ಗೊತ್ತಾಗುತ್ತೆ.ಸ್ವಾಮೀಜಿಗಳತ್ರ ಕಮಿಷನ್ ಕೇಳೋದು ನಾಚಿಕೆಗೇಡಿನತನ.

ಸಿದ್ದರಾಮಯ್ಯ ಅವರಿಗೆ ಅದ್ದೂರಿ ಸ್ವಾಗತ ಕೋರಿದ ಮಂಡ್ಯದ ಜನರು

ಸಿಎಂ ಮನೆ ಮುತ್ತಿಗೆ ಹಾಕಿದ್ದಕ್ಕೆ ಕಾಂಗ್ರೆಸ್ ನಾಯಕರ ಮೇಲೆ FIR ವಿಚಾರ.ನಾನು A1 ಆದ್ರು ಆಗಲಿ, A2 ಆದ್ರು ಆಗಲಿ, ನಾವು ಇದನ್ನ ಹೆದರಿಸುತ್ತೇವೆ.ನಾವು 40% ಕಮಿಷನ್ ಕೇಳಿಲ್ಲ.ನಾವು ಮಾಡಿರುವುದು ಪ್ರತಿಭಟನೆ.ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಸಿದ್ದ ಟಾಂಗ್.ಹುಬ್ಬಳ್ಳಿ ಗಲಾಟೆ ವಿಚಾರ.ಹಿರೇಮಠ ಎನ್ನುವಾತ ಪೋಸ್ಟ್ ಮಾಡಿದ್ದ.ಯಾಕಾಗಿ ಪೋಸ್ಟ್ ಮಾಡಿದ್ದ ಅಂತ ಗೊತ್ತಿಲ್ಲ.

 ‘ಕೆಜಿಎಫ್ 2’ 3ನೇ ದಿನದ ಕಲೆಕ್ಷನ್ ಎಷ್ಟು? ಇಳಿಕೆಯೋ ಏರಿಕೆಯೊ?

ನಾವು ಮಾಡುತ್ತಿರುವ ಹೋರಾಟವನ್ನಡೈವರ್ಟ್ ಮಾಡೋಕೆ ಮಾಡಿದ್ರಾ ಗೊತ್ತಿಲ್ಲ.ಯಾರೇ ತಪ್ಪು ಮಾಡಿದ್ರು ಶಿಕ್ಷೆ ಆಗಬೇಕು.
ಪೋಸ್ಟ್ ಮಾಡಿದ ಬಳಿಕ ಗಲಾಟೆಯಾಗಿದೆ.ಯಾರು ಕೂಡ ಕಾನೂನನ್ನ ಕೈಗೆ ತೆಗೆದುಕೊಳ್ಳಬಾರದು.ಅಮಾಯಕರು ಬಿಡುಗಡೆ ಆಗಬೇಕು ಅಂತ ಕಮಿಷನರ್ ಗೆ ಪೋನ್ ಮಾಡಿ ಹೇಳಿದ್ದೇನೆ.ಮಂಡ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link