ಅಸ್ಪೃಶ್ಯತೆ ಆಚರಣೆ ಮಾಜಿ ಡಿಸಿಎಂ ಹೇಳಿಕೆಯಡಿ ಪ್ರಕರಣ ದಾಖಲಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಆಗ್ರಹ

ತುಮಕೂರು:

ಅಸ್ಪೃಶ್ಯತೆ ಆಚರಣೆ  ಇನ್ನೂ ಜೀವಂತವಾಗಿರುವ ಕುರಿತು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಅಂಬೇಡ್ಕರ್ ದಿನಾಚರಣೆಯಂದು ಕೊರಟಗೆರೆಯಲ್ಲಿ ನೀಡಿರುವ ಹೇಳಿಕೆ ಆಧರಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಆಗ್ರಹಿಸಿದರು.

                   ಮಾಜಿ ಶಾಸಕ ಕೆ.ಎನ್.ರಾಜಣ್ಣ

 ಆರ್‌ಸಿಬಿ- ಡೆಲ್ಲಿ ಮುಖಾಮುಖಿ: ಇಂದಿನ ಪಂದ್ಯದ ಲೆಕ್ಕಾಚಾರ ಹೀಗಿದೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಎಎಸ್ಪಿ ಉದೇಶ್ ಅವರಿಗೆ ಮನವಿ ಪತ್ರ ನೀಡಿ ಮಾತನಾಡಿದ ಕೆ.ಎನ್.ರಾಜಣ್ಣ ಅವರು, ದಲಿತನೆಂಬ ಕಾರಣಕ್ಕೆ ದೇವಸ್ಥಾನದೊಳಗೆ ತಮಗೆ ಪ್ರವೇಶ ನಿರಾಕರಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿಯಾಗಿದ್ದ ಪ್ರತಿಷ್ಠಿತ ವ್ಯಕ್ತಿಯೇ ಹೇಳಿರಬೇಕಾದರೆ ಇನ್ನೂ ಗ್ರಾಮೀಣ ಭಾಗದ ಬಡ ಮೀಸಲು ವರ್ಗದವರ ಕತೆ ಏನು? ಇದು ಇಡೀ ಜಿಲ್ಲೆಗೆ ಹಾಗೂ ಹಿಂದೂ ಸಮಾಜಕ್ಕೆ ಕೆಟ್ಟ ಹೆಸರು.

ಅಸ್ಪೃಶ್ಯತೆ ಆಚರಣೆ  ಮಾಡುವ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಬೇಕು ಎಂದು ಎಸ್ಪಿ ಅವರಿಗೆ ಪರಮೇಶ್ವರ ಹೇಳಿಕೆ ಕುರಿತು ಪ್ರತ್ರಿಕಾ ದಾಖಲೆಗಳನ್ನು ಒದಗಿಸಿರುವುದಾಗಿ ತಿಳಿಸಿದರು.

KGF 2 : ಹಿಂದಿ ಬಾಕ್ಸ್ ಆಫೀಸ್ ನಲ್ಲಿ ರಾಕಿ ಭಾಯ್ ಡಾಮಿನೇಷನ್ : 2 ನೇ ದಿನದ ಕಲೆಕ್ಷನ್..!!

ಬಿಜೆಪಿಯವರು ದಲಿತರನ್ನು ದೇವಾಲಯ ಒಳ ಬಿಡಿಸಲಿ:

ಅಸ್ಪೃಶ್ಯತೆ ಆಚರಣೆ ಕುರಿತಾಗಿ ಗೃಹ ಸಚಿವರಾಗಿದ್ದ ಪರಮೇಶ್ವರ ಅವರ ಹೇಳಿಕೆ ಅತ್ಯಂತ ಗಂಭೀರವಾದುದು. ಹಿಂದೂ ಧರ್ಮದ ಜಹಗೀರ್‍ದಾರಿ ಪಡೆದಿರುವಂತೆ ಮಾತನಾಡುವ ಬಿಜೆಪಿಯವರು ದಲಿತರನ್ನು ಮೊದಲು ದೇವಾಲಯ ಒಳ ಬಿಡಿಸುವ ಕೆಲಸ ಮಾಡಲಿ. ಅದನ್ನು ಬಿಟ್ಟು ಹಿಜಾಬ್, ಹಲಾಲ್, ಆಜಾನ್ ಕುರಿತಾಗಿ ಅನಗತ್ಯ ವಿವಾದ ಹುಟ್ಟುಹಾಕುವುದು ಬೇಡ ಎಂದರು. ಈ ವೇಳೆ ವಕೀಲರಾದ ನಾರಾಯಣಗೌಡ ಹಾಜರಿದ್ದರು.

ಆಲಮಟ್ಟಿ ಆಣೆಕಟ್ಟಿನಿಂದ ಕಳಸಕ್ಕೆ ನೀರು ಸಂಗ್ರಹಿಸುವ : ಹೆಚ್.ಡಿ ಕುಮಾರಸ್ವಾಮಿ

ಗುತ್ತಿಗೆದಾರ ಸಂತೋಷ್ ಸಾವಿನ ಕುರಿತಾಗಿ ಈಗಾಗಲೇ ಈಶ್ವರಪ್ಪ ಅವರ ತಲೆದಂಡವಾಗಿದೆ. ಪೊಲೀಸ್ ಎಫ್‍ಐಆರ್ ಸಹ ಮಾಡಲಾಗಿದೆ. ಆದರೆ ಎಫ್‍ಐಆರ್‍ನಲ್ಲಿ ಗುತ್ತಿಗೆದಾರ ಆರೋಪಿಸಿರುವಂತೆ 40% ಕಮಿಷನ್ ಕುರಿತು ಭ್ರಷ್ಟಾಚಾರ ವಿರೋಧಿ ಸೆಕ್ಷನ್ ದಾಖಲಿಸಿಲ್ಲ. ಇದು ಮೇಲ್ನೋಟಕ್ಕೆ ಆರೋಪಿತರನ್ನು ರಕ್ಷಿಸುವ ಕ್ರಮವೆನಿಸುತ್ತಿದೆ.

-ಕೆ.ಎನ್.ರಾಜಣ್ಣ ಮಾಜಿ ಶಾಸಕರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap