ನಾಲ್ಕು ಲಕ್ಷ ಹೊಸ ಬಿಪಿಎಲ್ ಕಾರ್ಡ್, ತಿಂಗಳೊಳಗೆ ವಿತರಣೆ: ಸಚಿವ ಉಮೇಶ್ ಕತ್ತಿ ಭರವಸೆ

ಬೆಂಗಳೂರು:

    ರಾಜ್ಯದಲ್ಲಿ ಹೊಸದಾಗಿ ಆದ್ಯತಾ ಪಡಿತರ ಚೀಟಿ (ಬಿಪಿಎಲ್ ಕಾರ್ಡ್) ಬಯಸಿ ಅರ್ಜಿ ಸಲ್ಲಿಸಿದವರ ಪೈಕಿ ಮನೆ ಮನೆ ಸಮೀಕ್ಷೆ ಪೂರ್ಣಗೊಂಡ 4.25 ಲಕ್ಷ ಅರ್ಜಿದಾರರ ಜೈವಿಕ ದತ್ತಾಂಶ ಸಂಗ್ರಹಿಸಿ, ಒಂದು ತಿಂಗಳೊಳಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಭರವಸೆ ನೀಡಿದರು.

ವಿಧಾನಪರಿಷತ್​ನಲ್ಲಿ ಸೋಮವಾರ ಕಾಂಗ್ರೆಸ್​ನ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿ, ಕಳೆದ ಮೂರು ವರ್ಷ (2022ರ ಫೆಬ್ರವರಿ ಅಂತ್ಯ)ಗಳಲ್ಲಿ ಆದ್ಯತಾ ಪಡಿತರ ಚೀಟಿ ಕೋರಿ ಒಟ್ಟು 15,53,745 ಅರ್ಜಿಗಳು ಸ್ವೀಕೃತವಾಗಿವೆ.

             ಇದರಲ್ಲಿ 8,03,782 ಅರ್ಹ ಅರ್ಜಿದಾರರಿಗೆ ಬಿಪಿಎಲ್ ಪಡಿತರ ಕಾರ್ಡ್ ವಿತರಿಸಲಾಗಿದೆ. ಕರೊನಾ ಹಾವಳಿ ಕಾರಣಕ್ಕೆ ಮನೆ ಮನೆ ಸಮೀಕ್ಷೆ, ಜೈವಿಕ ತಂತ್ರಾಂಶ ಸಂಗ್ರಹ ಸ್ಥಗಿತವಾಗಿತ್ತು. ಇದರಿಂದ ಪಡಿತರ ಚೀಟಿ ವಿತರಣೆ ವಿಳಂಬವಾಗಿದೆ ಎಂದರು. ಉಳಿದ ಅರ್ಜಿದಾರರ ಮನೆ ಮನೆ ಸಮೀಕ್ಷೆ, ದತ್ತಾಂಶ ಸಂಗ್ರಹ ಕಾರ್ಯ ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ಬಿಪಿಎಲ್ ಕಾರ್ಡ್ ನೀಡಲಾಗುವುದು. ಇಲಾಖೆ ಕೈಗೊಂಡ ವಿಶೇಷ ಕ್ರಮದಿಂದ ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಉಳಿದವರ ಹೊಂದಿದ್ದ 13 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ವಾಪಸ್ ಪಡೆಯಲಾಗಿದೆ ಎಂಬ ಕತ್ತಿ ಮಾಹಿತಿ ನೀಡಿದರು.

ಭಾರತದಲ್ಲಿ ಬೀದಿ ಬದಿ ಮಕ್ಕಳ ಸಂಖ್ಯೆ ಎಷ್ಟು? ಎನ್‌ಪಿಸಿಆರ್ ವರದಿ ಹೇಳುವುದೇನು?

ನಿಯಂತ್ರಣ ಅಸಾಧ್ಯ:

ಕಚ್ಚಾ ತೈಲ, ಖಾದ್ಯ ತೈಲ ಹಾಗೂ ಕಬ್ಬಿಣದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆ ಅವಲಂಬಿತವಾದ ಕಾರಣ ಮುಕ್ತ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ನಿಯಂತ್ರಣ ಅಸಾಧ್ಯ. ಆದರೆ ಕೃತಕ ಅಭಾವ ಸೃಷ್ಟಿ, ಅಧಿಕ ಬೆಲೆಗೆ ಮಾರಾಟ ತಡೆಗೆ ಅಗತ್ಯ ಕ್ರಮವಹಿಸಲಾಗಿದೆ ಎಂದು ಕಾಂಗ್ರೆಸ್​ನ ಎಸ್.ರವಿ ಪ್ರಶ್ನೆಗೆ ಉಮೇಶ್ ಕತ್ತಿ ಉತ್ತರಿಸಿದರು.

ಖಾದ್ಯತೈಲ ಅಕ್ರಮ ದಾಸ್ತಾನು, ಅಧಿಕ ಬೆಲೆಗೆ ಮಾರಾಟ ನಿಯಂತ್ರಣಕ್ಕಾಗಿ ಕಳೆದ 1,368 ತಪಾಸಣೆಗಳಾಗಿವೆ. ಹೆಚ್ಚಿನ ಬೆಲೆಗೆ ಮಾರಾಟಕ್ಕೆ ಸಂಬಂಧಿಸಿ ಇದುವರೆಗೆ 75 ಮೊಕದ್ದಮೆಗಳನ್ನು ಹೂಡಿದ್ದು, 29 ದಾವೆಗಳಲ್ಲಿ 2,96,000 ರೂ. ದಂಡ ವಸೂಲಿ ಮಾಡಲಾಗಿದೆ. ಡಿಸೇಲ್ ಹಾಗೂ ಪೆಟ್ರೋಲ್ ಮೇಲೆ ರಾಜ್ಯ ವಿಧಿಸುತ್ತಿರುವ ಸೆಸ್ ಇಳಿಕೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಸೆಸ್ ಪರಿಷ್ಕರಣೆ ವಿಷಯವು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು ಎಂದು ಉಮೇಶ್ ಕತ್ತಿ ಸ್ಪಷ್ಟಪಡಿಸಿದರು.

ಏಪ್ರಿಲ್ 1 ರಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಅಮಿತ್ ಶಾ ಭೇಟಿ

ನೇಕಾರರಿಗೂ ಯಶಸ್ವಿನಿ ವಿಸ್ತರಿಸಿ:

 ನೇಕಾರರಿಗೂ ಯಶಸ್ವಿನಿ ಯೋಜನೆ ವಿಸ್ತರಿಸಿ ಎಂದು ಬಿಜೆಪಿಯ ದೊಡ್ಡನಗೌಡ ಹಾಗೂ ಸಿದ್ದು ಸವದಿ ಸರ್ಕಾರವನ್ನು ಒತ್ತಾಯಿಸಿದರು. ಸಹಕಾರ ಇಲಾಖೆಯ ಬೇಡಿಕೆ ಮೇಲಿನ ಚರ್ಚೆಗೆ ಸಚಿವ ಎಸ್.ಟಿ. ಸೋಮಶೇಖರ್ ಉತ್ತರಿಸುವ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಸದಸ್ಯರು, ನೇಕಾರರೂ ಸಂಕಷ್ಟದಲ್ಲಿದ್ದಾರೆ.

ಅವರಿಗೂ ಈ ಯೋಜನೆ ಪ್ರಯೋಜನ ಕೊಡಿ ಎಂದು ಕೇಳಿದರು. ಇದಕ್ಕೆ ಸ್ಪಷ್ಟ ಉತ್ತರ ನೀಡದ ಎಸ್.ಟಿ.ಸೋಮಶೇಖರ್, ಸಹಕಾರ ಸಂಘಗಳ ವಂತಿಗೆ ಸೇರಿ 300 ಕೋಟಿ ರೂ.ಗಳನ್ನು ಯಶಸ್ವಿನಿ ಯೋಜನೆಗೆ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ ಎಂದರು. ನಿರ್ದಿಷ್ಟ ದಾಖಲೆ ಸಲ್ಲಿಸದ 13,500 ರೈತರ ಸಾಲಮನ್ನಾ ಮಾಡಲಾಗಿಲ್ಲ. ಅನೇಕ ಬಾರಿ ನೋಟಿಸ್ ನೀಡಿದರೂ ಯಾವುದೇ ಸಕಾರಾತ್ಮಕ ಉತ್ತರ ಬಂದಿಲ್ಲ.

ಅಂತಹವರಿಗೆ ಇನ್ನೊಂದು ಅವಕಾಶ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದರು. 31 ಸಾವಿರ ರೈತರ ಹಸಿರು ಪಟ್ಟಿ ಸಿದ್ಧವಾಗಿದೆ. ಆರ್ಥಿಕ ಇಲಾಖೆ ಜತೆ ರ್ಚಚಿಸಿ ಏಪ್ರಿಲ್​ನಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ಸೋಮಶೇಖರ್ ಹೇಳಿದರು.

ತಾಯಿ ಅವರಿಗೆ ಐಟಿ ನೊಟೀಸ್ ನೀಡಿರುವ ಬಗ್ಗೆ ಆತಂಕ ಇಲ್ಲ , ಸೂಕ್ತ ವಿವರ ಸಲ್ಲಿಸಿದರೆ ಆಯಿತು ಎಂದ ಹೆಚ್.ಡಿ.ಕುಮಾರಸ್ವಾಮಿ

ವೈದ್ಯಕೀಯ ಸೀಟು ಲ್ಯಾಪ್ಸ್ ಆಗಲ್ಲ:

 ರಾಜ್ಯದಲ್ಲಿರುವ ಸರ್ಕಾರಿ ಹಾಗೂ ಖಾಸಗಿ 67 ವೈದ್ಯಕೀಯ ಕಾಲೇಜುಗಳಲ್ಲಿ 10,045 ಸೀಟುಗಳು ಲಭ್ಯವಿದ್ದು, ಯಾವುದೇ ವರ್ಷ ಲ್ಯಾಪ್ಸ್ (ವ್ಯಪಗತ) ಆಗಿಲ್ಲ, ಆಗುವುದೂ ಇಲ್ಲವೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು. ವಿಧಾನಪರಿಷತ್​ನಲ್ಲಿ ಬಿಜೆಪಿಯ ಚಿದಾನಂದಗೌಡ ಪ್ರಶ್ನೆಗೆ ಉತ್ತರಿಸಿ, ಖಾಸಗಿ ಕಾಲೇಜುಗಳಲ್ಲಿ ಆಡಳಿತ ಮಂಡಳಿ/ಎನ್​ಆರ್​ಐ ಕೋಟಾದಡಿ 2017ರಲ್ಲಿ 648, 2018ರಲ್ಲಿ 466, 2019ರಲ್ಲಿ 527 ಹಾಗೂ 2020ರಲ್ಲಿ 697 ಸೀಟುಗಳು ಮಾಪ್​ಅಪ್ ಸುತ್ತು ಮುಗಿದ ಬಳಿಕ ಉಳಿದಿದ್ದವು. 2021ರ ಮಾಪ್​ಅಪ್ ರೌಂಡ್ ಪ್ರಗತಿಯಲ್ಲಿರುವ ಕಾರಣ ಉಳಿಯುವ ಸೀಟುಗಳ ಬಗ್ಗೆ ಇನ್ನೂ ತಿಳಿದಿಲ್ಲ.

ದರ್-ಉಸ್-ಸಲಾಂ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಮಾಪ್​ಅಪ್ ಸುತ್ತು ಮುಗಿದ ಬಳಿಕ ಉಳಿಕೆ ಸೀಟುಗಳನ್ನು ಆಯಾ ಕಾಲೇಜಿಗೆ ನೀಡುತ್ತೇವೆ. ಕರ್ನಾಟಕ ಪ್ರಾಧಿಕಾರದಿಂದ ನೋಂದಾಯಿಸಲ್ಪಟ್ಟ, ನೀಟ್ ಪರೀಕ್ಷೆಯಲ್ಲಿ ಅರ್ಹ ವಿದ್ಯಾರ್ಥಿಗಳ ಪಟ್ಟಿ, ಖಾಲಿ ಉಳಿದಿರುವ ಸೀಟುಗಳ ಆಧಾರದಲ್ಲಿ 1:10 ರಂತೆ ಕಾಲೇಜುಗಳಿಗೆ ಪಟ್ಟಿ ಪ್ರಕಟಿಸಿ, ಸದರಿ ವಿದ್ಯಾರ್ಥಿಗಳಿಗೆ ಇಂಟರ್-ಸೆ-ಮೆರಿಟ್ ಪ್ರಕಾರ ಸೀಟು ಹಂಚಿಕೆ ಮಾಡುತ್ತಾರೆ. ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳು ಒಂದೂ ಉಳಿಯುವುದಿಲ್ಲ ಎಂದು ಸುಧಾಕರ್ ವಿವರಿಸಿದರು.

ಯೋಧರಿಗೆ ವರ್ಷಕ್ಕೆ ಕನಿಷ್ಟ 100 ರಜೆ ಚಿಂತನೆ

ಶಾಲೆ ಆವರಣದಲ್ಲೇ ಅಂಗನವಾಡಿ ಕಟ್ಟಡ: 

ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಪ್ರಕಾರ, ಅಂಗನವಾಡಿ ಕೇಂದ್ರಗಳು ಪ್ರಾಥಮಿಕ ಶಾಲಾ ಪೂರ್ವ ಕೇಂದ್ರ (ಬಾಲವಾಡಿ)ಗಳಾಗಿ ಪರಿಗಣನೆಯಾಗಲಿದ್ದು, ಇನ್ನುಮುಂದೆ ಶಾಲೆ ಆವರಣದ ಲಭ್ಯ ಜಾಗದಲ್ಲಿ ಅಂಗನವಾಡಿ ಕೇಂದ್ರಗಳ ಹೊಸ ಕಟ್ಟಡಗಳು ನಿರ್ವಣವಾಗಲಿವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಪರಿಷತ್​ನಲ್ಲಿ ಜೆಡಿಎಸ್​ನ ಕೆ.ಟಿ.ಶ್ರೀಕಂಠೇಗೌಡ ಪ್ರಶ್ನೆಗೆ ಉತ್ತರಿಸಿ, ಈಗಾಗಲೆ 4 ಸಾವಿರ ಪ್ರಾಥಮಿಕ ಶಾಲೆಗಳ ಆವರಣಕ್ಕೆ ಅಂಗನವಾಡಿ ಕೇಂದ್ರಗಳನ್ನು ಸ್ಥಳಾಂತರಿಸಿ ಕಟ್ಟಡ ನಿರ್ವಿುಸಲಾಗಿದೆ ಎಂದರು. ರಾಜ್ಯಾದ್ಯಂತ ಇಂತಹ ಕೇಂದ್ರಗಳಲ್ಲಿ 600 ಗೌರವ ಶಿಕ್ಷಕರು ಕೆಲಸ ಮಾಡುತ್ತಿದ್ದು, ನೂತನ ನೀತಿ ಪ್ರಕಾರ ಸರ್ಕಾರಿ ಶಾಲೆಗಳ ಆವರಣದಲ್ಲಿ ಬಾಲವಾಡಿ ತೆರೆದಾಗ ಈ ಶಿಕ್ಷಕರಿಗೆ ಗೌರವಧನ ಕೊಟ್ಟು ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ನಾಗೇಶ್ ಆಶ್ವಾಸನೆ ನೀಡಿದರು.

ಕೆಪಿಎಸ್ಸಿ ಮೌಖಿಕ ಅಂಕ 25ಕ್ಕೆ ಇಳಿಕೆ?: 

ಕರ್ನಾಟಕ ಲೋಕಸೇವಾ ಆಯೋಗದ ಮೌಖಿಕ ಪರೀಕ್ಷೆಗೆ ನಿಗದಿಯಾಗಿದ್ದ 200 ಅಂಕಗಳನ್ನು 50ಕ್ಕೆ ಇಳಿಕೆ ಮಾಡಲಾಗಿದೆ. ಇದನ್ನು 25 ಅಂಕಕ್ಕೆ ಇಳಿಸುವ ಬಗ್ಗೆ ಅಂತಿಮ ತೀರ್ವನವಾಗಿಲ್ಲ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ವಿಧಾನಪರಿಷತ್​ನಲ್ಲಿ ತಿಳಿಸಿದ್ದಾರೆ.

ಗೆಜೆಟೆಡ್ ಪೊ›ಬೇಷನರಿ ಹುದ್ದೆಗಳಿಗೆ ವ್ಯಕ್ತಿತ್ವ ಪರೀಕ್ಷೆ ಅಂಕಗಳನ್ನು 50ರಿಂದ 25ಕ್ಕೆ ಕಡಿತಗೊಳಿಸುವ ಕುರಿತು ಕೆಪಿಎಸ್ಸಿ ನಿಯಮ 2021ಕ್ಕೆ ತಿದ್ದುಪಡಿ ತರಲು ಕರಡು ರಚಿಸಿ ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ಸದನದಲ್ಲಿ ವ್ಯಕ್ತವಾಗಿರುವ ಸದಸ್ಯರ ಅಭಿಪ್ರಾಯಗಳನ್ನು ಪರಿಗಣಿಸಲಾಗುವುದು ಎಂದರು.

ನಾನ್ ಗೆಜೆಟೆಡ್ ಪೊ›ಬೇಷನರಿ ಹುದ್ದೆಗಳಿಗೆ ಮೌಖಿಕ ಪರೀಕ್ಷೆ ಇಲ್ಲದೆ ಮುಖ್ಯ ಪರೀಕ್ಷೆ ಅಂಕಗಳ ಆಧಾರದಲ್ಲಿಯೇ ನೇಮಕ ಮಾಡುವ ಪದ್ದತಿ ಮುಂದುವರಿಯಲಿದೆ ಎಂದ ಮಾಧುಸ್ವಾಮಿ, 2000ರಲ್ಲಿ ನಿಯಮ ಬದಲಾವಣೆ ಮಾಡಲಾಗಿದೆ. ಕೆಪಿಎಸ್ಸಿಗೆ ನೇಮಕಾತಿ ನಿಯಮದಲ್ಲಿ ಅವರೊಂದಿಗೆ ಸಮನ್ವಯತೆ ಕಡ್ಡಾಯವಲ್ಲ. ನಾನ್ ಗೆಜೆಟೆಡ್​ಗೆ ನೇರ ನೇಮಕಾತಿ ಮಾಡಬೇಕು. ಅವರಿಗೆ ಮೌಖಿಕ ಪರೀಕ್ಷೆ ಬೇಡ ಎನ್ನುವುದು ನಮ್ಮ ಉದ್ದೇಶ. ಈ ಹುದ್ದೆಗಳಿಗೆ ಸಂದರ್ಶನವಿಲ್ಲದೆ ನೇಮಕಕ್ಕೆ ಚಿಂತಿಸಲಾಗಿದೆ ಎಂದು ಹೇಳಿದರು.

ಅಂಕ ಇಳಿಕೆಗೆ ವಿರೋಧ:

ವ್ಯಕ್ತಿತ್ವ ಪರೀಕ್ಷೆ ಅಂಕ 50 ಅಂಕಕ್ಕೆ ಇಳಿಕೆ ಮಾಡಿರುವುದು ಬಹಳ ಕಡಿಮೆಯಾಗಿದ್ದು, ಗ್ರಾಮಾಂತರ ಮಕ್ಕಳಿಗೆ ನ್ಯಾಯ ಕೊಡಲು ಸಾಧ್ಯವಾಗುವುದಿಲ್ಲ. ವ್ಯಕ್ತಿತ್ವ ಅಂಕಗಳು ಕಡಿಮೆ ಮಾಡಿರುವ ಕಾರಣ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಅನ್ಯಾಯವಾಗಲಿದೆ ಎಂದು ರುದ್ರೇಗೌಡ, ಶ್ರೀಕಂಠೇಗೌಡ, ತಿಪ್ಪೇಸ್ವಾಮಿ, ರಮೇಶ್ ಹೇಳಿದರು.

ಸರ್ಕಾರ ಈ ಬಗ್ಗೆ ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು. ಮಧ್ಯಪ್ರವೇಸಿಸಿದ ಲಕ್ಷ್ಮಣ ಸವದಿ, ಈ ಹಿಂದೆ ಮೋಟಾರ್ ವಹಿಕಲ್ ನೇಮಕಾತಿ ವೇಳೆ ಶೇ.90 ಅಂಕ ಪಡೆದವರಿಗೆ ಹುದ್ದೆ ಸಿಕ್ಕಿಲ್ಲ. ಆದರೆ ಶೇ.60 ಅಂಕ ಪಡೆದವರಿಗೆ ಸಿಕ್ಕಿದೆ ಎಂದರು.

ರಾಜ್ಯಾದ್ಯಂತ ಏಕರೂಪ ದರಪಟ್ಟಿ: 

ಕಟ್ಟಡ ಮತ್ತು ರಸ್ತೆ ನಿರ್ವಣಕ್ಕೆ ರಾಜ್ಯಾದ್ಯಂತ ಏಕರೂಪ ದರಪಟ್ಟಿ (ಎಸ್​ಆರ್) ಜಾರಿ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು. ವಿಧಾನಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವರು, ವಿವಿಧ ಇಂಜಿನಿಯರ್ ವಿಭಾಗಗಳಲ್ಲಿ ಒಂದೊಂದು ರೀತಿಯ ದರ ಪಟ್ಟಿ ಇತ್ತು. ರಾಜ್ಯದಲ್ಲಿ 32 ದರ ಪಟ್ಟಿಗಳಿದ್ದವು. ಇದನ್ನೆಲ್ಲ ಕ್ರೂಢೀಕರಿಸಿ, ಏಕರೂಪ ದರಪಟ್ಟಿಯನ್ನು ಜಾರಿಗೆ ತರಲಾಗಿದೆ. ಇದರಿಂದ ಹಣ ಉಳಿತಾಯವಾಗಲಿದೆ ಎಂದರು.

ಅತಿಥಿಗೃಹಗಳಿಗೆ ಬ್ರೇಕ್:

ಇನ್ನುಮುಂದೆ ರಾಜ್ಯದಲ್ಲಿ ಅತಿಥಿಗೃಹವನ್ನು ಅವಶ್ಯಕತೆ ಇರುವ ಕಡೆ ಮಾತ್ರ ನಿರ್ವಿುಸಲಾಗುವುದು. ಯಾರೋ ಒಬ್ಬರಿಗೆ ಅನುಕೂಲವಾಗುವಂತೆ ಮಾಡುವುದಿಲ್ಲ ಎಂದರು.

ಟೋಲ್ ರದ್ದತಿಗೆ ಕ್ರಮ:

ಟೋಲ್​ಗಳಲ್ಲಿ ಸಮಸ್ಯೆ ಇರುವುದು ನಿಜ. ಸುಧಾರಣೆ ತರಲು ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಟೋಲ್ ಏಜೆನ್ಸಿಗಳ ಜತೆ ಸಭೆ ನಡೆಸಿದರೂ ಪೂರ್ಣ ಪ್ರಯೋಜನವಾಗಿಲ್ಲ ಎಂದು ಸಚಿವ ಸಿ.ಸಿ. ಪಾಟೀಲ್ ತಿಳಿಸಿದರು. ಟೋಲ್ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅವುಗಳ ರದ್ದತಿಗೆ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರದ ಟೋಲ್ ಆಗಿದ್ದರೆ ಕೇಂದ್ರಕ್ಕೆ ಪತ್ರ ಬರೆೆದು ಮನವಿ ಮಾಡಲಾಗುವುದು. ರಾಜ್ಯ ಸರ್ಕಾರದ ಟೋಲ್ ಇದ್ದರೆ ರಾಜ್ಯ ಸರ್ಕಾರವೇ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.

 ʻತಡರಾತ್ರಿ ಹೊರಗೆ ತಿರುಗಾಡುವವರನ್ನು ಪ್ರಶ್ನಿಸುವ ಸಂಪೂರ್ಣ ಹಕ್ಕು ಪೊಲೀಸರಿಗಿದೆʼ: ಹೈಕೋರ್ಟ್

ಸರ್ಕಾರಿ ಸೌಲಭ್ಯ ಎರಡು ಮಕ್ಕಳಿಗೆ ಸೀಮಿತಗೊಳಿಸಿ: 

ರಾಜ್ಯದಲ್ಲಿ ಜನಸಂಖ್ಯೆ ಸ್ಪೋಟವಾಗುತ್ತಿದೆ. ಇದರ ನಿಯಂತ್ರಣಕ್ಕೆ ಸರ್ಕಾರ ಕ್ರಮ ವಹಿಸಬೇಕೆಂದು ಬಿಜೆಪಿಯ ಭಾರತಿ ಶೆಟ್ಟಿ ಆಗ್ರಹಿಸಿದರು. ಪರಿಷತ್​ನಲ್ಲಿ ಮಾತನಾಡಿದ ಇವರು, ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಏನೇ ನಿಯಮ ಜಾರಿಗೆ ತಂದರೂ ಇದು ಸಾಧ್ಯವಾಗುತ್ತಿಲ್ಲ.

ಉತ್ತರ ಪ್ರದೇಶದ ಸರ್ಕಾರ ಎರಡು ಮಕ್ಕಳಿಗಿಂತ ಹೆಚ್ಚಿದ್ದವರೆ ಸರ್ಕಾರಿ ಸೌಲಭ್ಯ ಕಡಿತ ಮಾಡುವುದಾಗಿ ಹೇಳಿದೆ. ಅದನ್ನು ಪರಿಶೀಲಿಸಿ ಇಲ್ಲಿಯೂ ಅಂತಹದೊಂದು ಕ್ರಮ ಜಾರಿ ಮಾಡಬೇಕು ಎಂದರು. ಇದಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಹೊಸದಾಗಿ ಆದ್ಯತಾ ಪಡಿತರ ಚೀಟಿ (ಬಿಪಿಎಲ್ ಕಾರ್ಡ್) ಬಯಸಿ ಅರ್ಜಿ ಸಲ್ಲಿಸಿದವರ ಪೈಕಿ ಮನೆ ಮನೆ ಸಮೀಕ್ಷೆ ಪೂರ್ಣಗೊಂಡ 4.25 ಲಕ್ಷ ಅರ್ಜಿದಾರರ ಜೈವಿಕ ದತ್ತಾಂಶ ಸಂಗ್ರಹಿಸಿ, ಒಂದು ತಿಂಗಳೊಳಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಭರವಸೆ ನೀಡಿದರು.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap