ಮಧುಗಿರಿ :
ಆನಲೈನ್ ನಲ್ಲಿ, ಪಾನ್ ಕಾರ್ಡ್ ಅಪಡೆಟ್ ಮಾಡುವುದಾಗಿ ಹೇಳಿ 8,37,941/- ರೂಗಳನ್ನು ವಂಚಿಸಿರುವ ಘಟನೆ ಭಾನುವಾರ ನಡೆದಿದೆ.
ಪಟ್ಟಣದ ವಾಸಿ ಕೆ.ಬಿ.ದೇವೇಂದ್ರ ಬಾಬು ಬಿನ್ ಬಲರಾಮಯ್ಯ ಶೆಟ್ಟಿ (61) ಎನ್ನುವವರಿಗೆ ಜ.29 ರ ಸಂಜೆ ಸುಮಾರು 5:00 -ಗಂಟೆಯ ಸಮಯದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ 8277803987 ಈ ಮೊಬೈಲ್ ನಂಬರ್ ನಿಂದ ಕರೆ ಮಾಡಿ ನಿಮ್ಮ ಪಾನ್ ಕಾರ್ಡ್ ಅಪಡೆಟ್ ಮಾಡಬೇಕೆಂದು ಹೇಳಿ ಜಾಲತಾಣದ ಲಿಂಕ್ ಒಂದನ್ನು ಕಳುಹಿಸಿಕೊಟ್ಟಿದ್ದಾನೆ.
ಅಪರಿಚಿತ ವ್ಯಕ್ತಿಯು ಹೇಳಿದಂತೆ ವ್ಯಾಪಾರಸ್ಥನು ತನ್ನ ಮೊಬೈಲ್ ನಲ್ಲಿ ಲಿಂಕ್ ನ್ನು ತೆರೆದಿದ್ದು, ಆ ಪೇಜ್ ನಲ್ಲಿಯೇ ಕೆ.ಬಿ.ದೇವೆಂದ್ರ ಬಾಬು ರವರಿಗೆ ಸೇರಿದ ಎಸ್.ಬಿ.ಐ ಬ್ಯಾಂಕ್ ಖಾತೆ ನಂಬರ್ 41398206763 ನ ಇಂಟರ್ ನೆಟ್ ಬ್ಯಾಂಕ್ ನ ಪಾಸ್ ವರ್ಡ್ ಮತ್ತು ಐಡಿ ಹಾಕಿದಾಗ ಒ.ಟಿ.ಪಿ ಬಂದಿದೆ . ಆ ಒಟಿಪಿ ಯನ್ನು ನೊಂದಾಯಿಸಿದಾಗ 8,37,941/- ರೂಗಳು ಕಡಿತಗೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿ ಮೋಸಮಾಡಿರುವ ವ್ಯಕ್ತಿಯನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಂಡು ಬರಬೇಕಾದ ಹಣವನ್ನು ವಾಪಸ್ ಕೊಡಿಸಬೇಕೆಂದು ತುಮಕೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ