ಬೆಂಗಳೂರು :
ರಾಜ್ಯ ಸರ್ಕಾರವು (Karntaka Government) ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ (Good news for farmers) ನೀಡಿದ್ದು, ಜನವರಿ 26 ರ ಗಣರಾಜ್ಯೋತ್ಸವ ದಿನದಂದು ರೈತರ ಮನೆ ಬಾಗಿಲಿಗೆ ಉಚಿತ ಪಹಣಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.
ಅಶೋಕ್ (Minister R. Ashok) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 26 ರಂದು ಕಂದಾಯ ಇಲಾಖೆಯಿಂದ ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಗುವುದು.
ಈ ಪೈಕಿ ಪಹಣಿಯನ್ನು ಉಚಿತವಾಗಿ ನೀಡುವ ಕಾರ್ಯಕ್ರಮವೂ ಒಂದಾಗಿದೆ. ಒಂದೇ ದಿನದಲ್ಲಿ ಪಹಣಿನೀಡುವ ಕೆಲಸ ಮಾಡಲಿದ್ದೇವೆ. 45 ಲಕ್ಷ ರೈತರಿಗೆ ಮನೆ ಬಾಗಿಲಿಗೆ ಪಹಣಿ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ