ಶ್ರೀದೇವಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಧುಗಿರಿ :-

      ಇತಿಹಾಸ ಪ್ರಸಿದ್ಧ ಶ್ರೀ ಮೀನಗೊಂದಿ ಮಲೇರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಶ್ರೀದೇವಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರ ವತಿಯಿಂದ ಆಗಸ್ಟ್ 2 ಶನಿವಾರ ಬೆಳಗ್ಗೆ 10 ಗಂಟೆಗೆ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.

ಮಧುಗಿರಿ ತಾಲೂಕು ಬಂದ್ರೀಹಳ್ಳಿ ತೇರಿನ ಬೀದಿಯ ಶ್ರೀ ಮೀನುಗೊಂದಿ ಮಲೇರಂಗನಾಥ ಸ್ವಾಮಿ ದೇವಸ್ಥಾನದ ಬಳಿ 9 ಮಂದಿ ಸೋಂಪುರ ಬುಡಕಟ್ಟಿನ ಮುತ್ತರಾಯನಹಳ್ಳಿ ಕೀರ್ತಿಶೇಷ ದಿ|| ದೊಡ್ಡ ರಂಗಯ್ಯ ಶ್ರೀಮತಿ ಲಕ್ಷ್ಮಮ್ಮನವರ ಸ್ಮರಣಾರ್ಥ ಹಾಗೂ ತುಮಕೂರು ಎಂ ಆರ್ ಪೆಟ್ರೋಲ್ ಪಂಪ್ ಮಾಲೀಕರಾದ ದಿ|| ಹುಲಿಯಪ್ಪನವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿ ದೇವಮ್ಮನವರ ಕುಟುಂಬದವರ ಸಹಯೋಗದಲ್ಲಿ ಹಾಗೂ ಉಪನ್ಯಾಸಕರಾದ ಮಾಲಿಂಗೇಶ್ , ಮುಖ್ಯ ಶಿಕ್ಷಕರಾದ ಲಕ್ಷ್ಮೀ ರಂಗಯ್ಯ, ಯುವ ಮುಖಂಡ ಚಾಣಕ್ಯ ಅವರ ಸಹಕಾರದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ .

Recent Articles

spot_img

Related Stories

Share via
Copy link