ಬೆಂಗಳೂರು
ಏಪ್ರಿಲ್ 26ರಂದು ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಕೆಲವು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಕರ್ನಾಟಕದ 14 ಕ್ಷೇತ್ರಗಳಾದ ಉಡುಪಿ-ಚಿಕ್ಕಮಂಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ನಾಳೆ ಮತದಾನ ನಡೆಯಲಿದೆ.
ಈ ಬಾರಿ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಮತದಾನದ ದಿನ ರ‍್ಯಾಪಿಡೋ ಸಂಸ್ಥೆ ವಿಶೇಷವಾದ ಸೇವೆ ನೀಡಲು ಮುಂದಾಗಿದೆ. ಮತದಾನದ ದಿನ ವಿಕಲಚೇತನ ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಬೈಕ್, ಟ್ಯಾಕ್ಸಿ, ಆಟೋ ಮತ್ತು ಕಾರು ಸೇವೆಗಳನ್ನು ನೀಡುವುದಾಗಿ ರ‍್ಯಾಪಿಡೋ ಸಂಸ್ಥೆ ತಿಳಿಸಿದ್ದು, ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಈ ಸೇವೆಯನ್ನು ಪಡೆಯಬಹುದಾಗಿದೆ.
ಮತಗಟ್ಟೆಗೆ ಹೋಗಿ ಮತದಾನ ಮಾಡಲು ಮತದಾನ ರ‍್ಯಾಪಿಡೋವನ್ನು ಉಪಯೋಗಿಸಿ. ರ‍್ಯಾಪಿಡೋನ ಈ ಸೇವೆಯನ್ನು ಬಳಸಿಕೊಳ್ಳುವ ಹಿರಿಯ ನಾಗರಿಕರು, ವಿಕಲಚೇತನರು VOTENOW ಕೋಡ್ ಬಳಸಿ ಉಚಿತ ಸೇವೆಯನ್ನು ಪಡೆಯುವಂತೆ ರ‍್ಯಾಪಿಡೋ ಸಂಸ್ಥೆ ತಿಳಿಸಿದೆ.
ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ರ‍್ಯಾಪಿಡೋ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಮತಗಟ್ಟೆ ಹೋಗಿ ಮತದಾನ ಮಾಡಲು ವ್ಯವಸ್ಥೆಯನ್ನು ಮಾಡಿದೆ. ಈ ಮೂಲಕ ಹಿರಿಯ ನಾಗರಿಕರು ಮತ್ತು ವಿಕಲಚೇತನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಮತೆ ರ‍್ಯಾಪಿಡೋ ಸಹ ಸಂಸ್ಥಾಪಕ ಪವನ್ ಗುಂಟುಪಲ್ಲಿ ವಿವರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ