ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಗುರುಸಿದ್ದಯ್ಯ 93 ವರ್ಷ ಅನಾರೋಗ್ಯದಿಂದ ಸೋಮವಾರ ನಿಧನರಾದರು.
ಇವರು ಸ್ವತಂತ್ರ ಚಳುವಳಿ ಹಾಗೂ 1956ರಲ್ಲಿ ನಡೆದ ಮೈಸೂರು ಚಲೋ ಹಾಗೂ ವಿವಿಧ ಚಳುವಳಿಗಳಲ್ಲಿ ಭಾಗಿಯಾಗಿದ್ದರು.
ಹಾಗಲವಾಡಿ ಹೋಬಳಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೀರಾವರಿ ಹೋರಾಟ ಮಾಡಿದ್ದರು. ಮೃತರು 5ಜನ ಮಕ್ಕಳನ್ನು ಆಗಲಿದ್ದಾರೆ. ಅವರ ಅಂತ್ಯಕ್ರಿಯೇ ಸ್ವಗ್ರಾಮ ಹಾಗಲವಾಡಿಯಲ್ಲಿ ನಡೆಯಿತು. ಶಾಸಕ ಎಸ್ .ಆರ್.ಶ್ರೀನಿವಾಸ್, ತಹಶೀಲ್ದಾರ್ ಪ್ರದೀಪ್ ಕುಮಾರ್ ಮೃತರ ಅಂತಿಮ ದರ್ಶನ ಪಡೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
