ಇಂಧನ ಬೆಲೆ ಸ್ಥಿರ: ಸಾರ್ವಜನಿಕರಿಗೆ ಕೊಂಚ ರಿಲೀಫ್‌

ಬೆಂಗಳೂರು:

ಕಳೆದ ಕೆಲ ದಿನಗಳಿಂದ ಸ್ಥಿರವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸಾರ್ವಜನಿಕರಿಗೆ ಕೊಂಚ ರಿಲೀಫ್‌ ನೀಡಿದೆ. ತೈಲ ಕಂಪನಿಗಳು ಏಪ್ರಿಲ್ 6 ರಂದು ಕೊನೆಯದಾಗಿ ಲೀಟರ್‌ಗೆ 80 ಪೈಸೆ ಹೆಚ್ಚಿಸಿದ್ದವು. ಇನ್ನು ದೂರ ಪ್ರಯಾಣ ಮಾಡುವವರು ತಮ್ಮ ವಾಹನ ಚಾಲನೆ ಮಾಡುವ ಮುನ್ನ ಪೆಟ್ರೋಲ್‌ ಡೀಸೆಲ್‌ ಬೆಲೆ ಎಷ್ಟಿದೆ ಎಂದು ನೋಡಿಕೊಳ್ಳುವುದು ಸೂಕ್ತ.

ಕಲ್ಲಿದ್ದಲು ತುರ್ತು ಸಾಗಾಟಕ್ಕೆ ದೇಶಾದ್ಯಂತ 650 ಕ್ಕೂ ಹೆಚ್ಚು ಪ್ರಯಾಣಿಕರ ರೈಲುಗಳು ರದ್ದು..!

ರಾಜ್ಯ ರಾಜಧಾನಿ ಬೆಂಗಳೂರು ನಗರದ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್​​ಗೆ 111.09 ರೂಪಾಯಿ ಇದ್ದು,ಡೀಸೆಲ್ ಬೆಲೆ ಒಂದು ಲೀಟರ್​ಗೆ 94.79 ರೂಪಾಯಿ ದರವಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ ಇಂತಿದೆ. ಮಂಗಳೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್​ಗೆ 110.29 ರೂಪಾಯಿ ಇದ್ದು, ಡೀಸೆಲ್ ದರ ಒಂದು ಲೀಟರ್​ಗೆ 94.03 ರೂಪಾಯಿಯಿದೆ. ರಾಜ್ಯದಲ್ಲಿಯೂ ಸಹ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

4ನೇ ಅಲೆಯ ಭೀತಿ: ಭಾರತದಲ್ಲಿ 24ಗಂಟೆಯಲ್ಲಿ 3,688 ಕೋವಿಡ್ ಪ್ರಕರಣ ಪತ್ತೆ, 50 ಮಂದಿ ಸಾವು

ಮೈಸೂರಿನಲ್ಲಿ ಪೆಟ್ರೋಲ್ರ ಒಂದು ಲೀಟರ್‌ಗೆ 110.61 ರೂಪಾಯಿ, ಡೀಸೆಲ್‌ ದರ ಒಂದು ಲೀಟರ್‌ಗೆ 94.35 ರೂಪಾಯಿ ಇದೆ. ಶಿವಮೊಗ್ಗದಲ್ಲಿ ಇಂದಿನ ತೈಲ ದರ ಪೆಟ್ರೋಲ್ ಲೀಟರ್​ಗೆ 112.74 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 96.19 ರೂಪಾಯಿ ಇದೆ. ದಾವಣಗೆರೆಯಲ್ಲಿ ಪೆಟ್ರೋಲ್ ಲೀಟರ್​ಗೆ 113.09 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 96.46 ರೂಪಾಯಿ ಇದೆ.

ಇಂದು ಸೂರ್ಯಗ್ರಹಣ ಈ ರಾಶಿಗಳ ನಸೀಬು ಫಳ ಫಳ ಹೊಳೆಯುತ್ತದಂತೆ! ನಿಮ್ಮ ರಾಶಿ ಇದೆಯಾ?

​ಮಹಾನಗರಗಳುಪೆಟ್ರೋಲ್ ದರಡೀಸೆಲ್ ದರ
ನವದೆಹಲಿ105.41 ರೂ96.67 ರೂ
ಮುಂಬೈ120.51 ರೂ104.77 ರೂ
ಕೋಲ್ಕತ್ತಾ115.12 ರೂ99.83 ರೂ
ಚೆನ್ನೈ110.85 ರೂ100.94 ರೂ
ಭೋಪಾಲ್118.14 ರೂ101.16 ರೂ
ಹೈದರಾಬಾದ್119.49 ರೂ105. 49 ರೂ

       

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ