ಮೊದಲ ಹಂತದಲ್ಲಿ 1754 ಗುಂಪುಗಳಿಗೆ ತಲಾ 10 ಸಾವಿರ ಸುತ್ತುನಿಧಿ : ಡಾ.ನಾರಾಯಣಗೌಡ

ಬೆಂಗಳೂರು:

       ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಯೋಜನೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿಡಲಾಗಿದ್ದು, ಇಂದು ಮೊದಲ ಹಂತದಲ್ಲಿ 1754 ಗುಂಪುಗಳಿಗೆ ತಲಾ 10 ಸಾವಿರ ಸುತ್ತುನಿಧಿ ಬಿಡುಗಡೆ ಮಾಡಲಾಗಿದೆ ಎಂದು ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ.

     ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಬಜೆಟ್ ನಲ್ಲಿ ಘೋಷಿಸಿದ್ದಂತೆ ಸ್ವಾಮಿವಿವೇಕಾನಂದ ಯುವ ಸ್ವಸಹಾಯ ಗುಂಪುಗಳನ್ನು ರಚಿಸಲಾಗುತಿದ್ದು, ಈಗಾಗಲೇ ಮೊದಲ ಹಂತದಲ್ಲಿ 5956 ಗ್ರಾಮ ಪಂಚಾಯತ್‌ನಲ್ಲಿ ಒಂದೊAದು ಆದ್ಯತಾ ಗುಂಪುಗಳನ್ನು ರಚಿಸಲಾಗಿದೆ. ಮೊದಲ ಹಂತದಲ್ಲಿ 1754 ಗುಂಪುಗಳಿಗೆ ತಲಾ 10 ಸಾವಿರ ಸುತ್ತುನಿಧಿ ಬಿಡುಗಡೆ ಮಾಡಲಾಗಿದ್ದು, ಇನ್ನೊಂದು ವಾರದಲ್ಲಿ ನೋಂದಣಿಯಾಗಿರುವ ಎಲ್ಲಾ ಗುಂಪುಗಳಿಗೆ ಸುತ್ತುನಿಧಿ ಬಿಡುಗಡೆ ಮಾಡಲಾಗುವುದು.

    ಇದರ ಜೊತೆಗೆ ಒಂದು ವಾರದೊಳಗೆ ಎರಡನೇ ಹಂತದಲ್ಲಿ ಪ್ರತಿ ಪಂಚಾಯತ್ ಗೆ ಎರಡರಂತೆ 12 ಸಾವಿರ ಸ್ವಾಮಿ ವಿವೇಕಾನಂದ ಯುವಕರ ಜಂಟಿ ಹಕ್ಕು ಬಾಧ್ಯತಾ ಗುಂಪುಗಳ ರಚನಾ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಪ್ರತಿ ಗುಂಪುಗಳಿಗೆ ತಲಾ 10 ಸಾವಿರ ಸುತ್ತುನಿಧಿ, ಯೋಜನಾ ಚಟುವಟಿಕೆಗಳನ್ನು ಕೈಗೊಳ್ಳಲು 5 ಲಕ್ಷ ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಒಂದು ಲಕ್ಷ ರೂ. ಸಬ್ಸಿಡಿ ನೀಡಲಾಗುವುದು.

    ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ವಿಷನ್ ಕರ್ನಾಟಕ ಫೌಂಡೇಷನ್, ಬೆಂಗಳೂರು ಎಂಬ ಸಂಸ್ಥೆಯ ಮೂಲಕ ಈಗಾಗಲೇ 85 ಯೋಜನಾ ವರದಿಗಳನ್ನು ತಯಾರಿಸಿ  ಪೋರ್ಟಲ್ ನಲ್ಲಿ ಅಳವಡಿಸಲಾಗಿದ್ದು, ರಚನೆಗೊಂಡಂತಹ ಗುಂಪುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap