ಹಿರಿಯ ಪತ್ರಕರ್ತ ಜಿ ಎನ್‌ ರಂಗನಾಥರಾವ್‌ ನಿಧನ

ಬೆಂಗಳೂರು :

     ಹಿರಿಯ ಪತ್ರಕರ್ತ, ಲೇಖಕ ಹಾಗೂ ಅನುವಾದಕರಾಗಿದ್ದ ಜಿ. ಎನ್. ರಂಗನಾಥರಾವ್ ಅವರು ಸೋಮವಾರ ನಿಧನರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬಸವನಗುಡಿಯ ಬಿಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

     ಮೃತರಿಗೆ 81 ವರ್ಷ ವಯಸ್ಸಾಗಿತ್ತು. 1942ರಲ್ಲಿ ಬೆಂಗಳೂರು ಸಮೀಪದ ಹಾರೋಹಳ್ಳಿಯಲ್ಲಿ ಜನಿಸಿದ ಅವರು, ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ಪತ್ರಕರ್ತರಾಗಿ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದರು.

    1962ರಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿಜೀವನದ ಆರಂಭಿಸಿದ್ದ ಅವರು ನಂತರ ಪ್ರಜಾವಾಣಿ ಸೇರಿದ್ದರು. ಪ್ರಜಾವಾಣಿಯಲ್ಲಿ ಹಂತ ಹಂತವಾಗಿ ಮೇಲೇರಿ ಕಾರ್ಯ ನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಪ್ರಜಾವಾಣಿ ಸಾಪ್ತಾಹಿಕ ಪುರವಣಿ ಮುಖ್ಯಸ್ಥರಾಗಿ, ಸುಧಾ ವಾರಪತ್ರಿಕೆಯ ಉಸ್ತುವಾರಿಯಾಗಿ ಹತ್ತು ಹಲವಾರು ಲೇಖಕರನ್ನು ಬೆಳೆಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link