ಗದಗ : ರೈತರ ಜೀವ ಹಿಂಡುತ್ತಿರುವ ವಿದೇಶಿ ಪಕ್ಷಿಗಳು

ಗದಗ

   ಆ ವಿದೇಶಿ ಪಕ್ಷಿಗಳು, ಪ್ರತಿ ವರ್ಷ ನಮ್ಮ ನಾಡಿಗೆ ಬರ್ತಾವೆ. ಕೆಲವು ತಿಂಗಳು ನಮ್ಮ ನಾಡಿನಲ್ಲಿದ್ದು ಪುನಃ, ತಮ್ಮ ತಾಯಿ ನಾಡಿಗೆ ವಾಪಸ್ಸ್ ಹೋಗುತ್ತವೆ. ಆದರೆ ಇದೀಗ ವಿದೇಶಿ ಪಕ್ಷಿಗಳಿಂದ ಅನ್ನದಾತರಿಗೆ (Farmers) ಸಂಕಷ್ಟ ಎದುರಾಗಿದೆ.‌ ಹಿಂಡು ಹಿಂಡಾಗಿ ಬಂದು, ಅನ್ನದಾತರು ಬೆಳೆದ ಬೆಳೆಯನ್ನು ತಿಂದು ಹಾಕುತ್ತಿವೆ. ಆ ಮೂಲಕ ಸಾಕಷ್ಟು ಹಾನಿ ಉಂಟಾಗಿದೆ.

   ಹಕ್ಕಿಗಳ ಕಾಟಕ್ಕೆ ಅನ್ನದಾತರ ಬೆವರು ಹರಿಸಿ ಬೆಳೆದ ಬೆಳೆ ಸರ್ವನಾಶ ಆಗುತ್ತಿದೆ. ಅನ್ನದಾತರು ಬೆಳೆದ ಬೆಳೆಯನ್ನು ತಿಂದು ಹಾಕಿ ಅವರಿಗೆ ಭಾರಿ ಪ್ರಮಾಣದಲ್ಲಿ ಹಾನಿ ಮಾಡುತ್ತಿವೆ. ಅಂದಹಾಗೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಗೆ ವಿದೇಶದಿಂದ ಪಕ್ಷಿಗಳು ಬರುತ್ತಿವೆ. ಈ ಹಿಂದೆ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದ ಪಕ್ಷಿಗಳು, ಇದೀಗ ಅವುಗಳ ಸಂಖ್ಯೆ ಹೆಚ್ಚಳವಾಗಿದೆ. 

   ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ಹಿಂಡು ಹಿಂಡಾಗಿ, ಮಾಗಡಿ ಸುತ್ತಮುತ್ತಲಿನ ಗ್ರಾಮದ ರೈತರು ಬೆಳೆದ ಬೆಳೆಗಳನ್ನು ತಿಂದು ಹಾಕುತ್ತಿವೆ. ಚಿಗುರೋಡೆದ ಕಡಲೆ, ಶೇಂಗಾ, ಸೇರಿದಂತೆ ಜಮೀನಿನಲ್ಲಿ ಬೆಳೆದ ಧಾನ್ಯಗಳನ್ನು ತಿಂದು ಹಾಕುತ್ತಿವೆ. ಹೀಗಾಗಿ ಜಿಲ್ಲೆಯ ಮಾಗಡಿ, ಗೊಜನೂರು, ಯಳವತ್ತಿ ಸೇರಿದಂತೆ ಕೆರೆಯ ಸುತ್ತಮುತ್ತಲಿನ ಜಮೀನಿನಲ್ಲಿ ಬೆಳೆದ ಬೆಳೆ ಹಕ್ಕಿಗಳ ಪಾಲಾಗುತ್ತಿವೆ. ಹೀಗಾಗಿ ಅನ್ನದಾತರು ಸಾಲ ಮಾಡಿ ಬೆಳೆದ ಬೆಳೆ ವಿದೇಶಿ ಹಕ್ಕಿಗಳ ಪಾಲಾಗುತ್ತಿವೆ.

   ಒಂದ್ಕಡೆ ಮಾಗಡಿ ಕೆರೆಯಲ್ಲಿ ಪ್ರವಾಸಿಗರ ಮನ ಗೆದ್ದ ವಿದೇಶಿ ಪಕ್ಷಿಗಳು ಅನ್ನದಾತರಿಗೆ ಸಂಕಷ್ಟ ತಂದೊಡ್ಡಿವೆ. ಹೀಗಾಗಿ ರೈತರು ವಿದೇಶಿ ಹಕ್ಕಿಗಳ ಕಾಟಕ್ಕೆ ಕಂಗಾಲಾಗಿದ್ದಾರೆ. ಹೀಗಾಗಿ ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕು ಅಂತ ಒತ್ತಾಯಿಸಿದ್ದಾರೆ. 

   ಇನ್ನೂ ವಿದೇಶಿಯ ಹಕ್ಕಿಗಳು ಪ್ರತಿವರ್ಷ ಚಳಿಗಾಲಕ್ಕೆ ಲಗ್ಗೆ ಇಡುತ್ತವೆ. ಮಂಗೊಲಿಯಾ, ಆಸ್ಟ್ರೇಲಿಯಾ, ಜಪಾನ, ಪಾಕಿಸ್ತಾನದ ಲಡಾಕ್ ಹೀಗೆ ಅನೇಕ ದೇಶದ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಆ ದೇಶದ ಹವಾಮಾನವೇ ವೈಪರೀತ್ಯ ಈ ಪಕ್ಷಿಗಳು ಇಲ್ಲಿಗೆ ಬರಲು ಕಾರಣ. ಬಾರ್ ಹಡೆಡ್ ಗೂಸ್, ಬ್ರಾಮಿಣಿ ಡೆಕ್, ಬ್ಲಾಕ್ ಐಬಿಸ್, ಇಟಲ್ ಗಿಬ್ಸ್, ರೆಡ್ ಥಾರ್ಟ, ಪಾಂಟೆಡ್ ಸ್ಪಾರ್ಕ ಸೇರಿದಂತೆ ಅನೇಕ ಜಾತಿಯ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಅವುಗಳನ್ನು ನೋಡೋದು ಕಣ್ಣಿಗೆ ಹಬ್ಬ. ಆದರೆ ಇದೇ ಪಕ್ಷಿಗಳು ಗದಗ ಜಿಲ್ಲೆಯ ಅನ್ನದಾತರು ಬೆಳೆದ ಬೆಳೆಯನ್ನು ಹಾಳು ಮಾಡ್ತಾಯಿವೆ.

  ವಿದೇಶದಿಂದ ಬರುವ ಪಕ್ಷಿಗಳಿಗೆ ಜಿಲ್ಲೆಯ ಅನ್ನದಾತರ ಯಾವುದೇ ತೊಂದರೆ ಮಾಡೋದಿಲ್ಲ. ಆದರೆ ಆ ಪಕ್ಷಿಗಳು ಆಹಾರಕ್ಕಾಗಿ ರೈತರಿಗೆ ಜಮೀನಿಗೆ ಲಗ್ಗೆ ಇಡ್ತಾವೆ. ಹೀಗಾಗಿ ರೈತರು ಬೆಳೆದ ಬೆಳೆಯನ್ನು ತಿಂದು ಹಾಕುತ್ತಿವೆ. ಒಂದು ಭಾರಿ ಪಕ್ಷಿಗಳ ಸಮೂಹ ರೈತರಿಗೆ ಜಮೀನಿಗೆ ಬಂದರೆ, ಆ ಜಮೀನಿನಲ್ಲಿ ಫಸಲು ಸಂಪೂರ್ಣ ಹಾನಿಯಾಗುತ್ತಿದೆ. ಹೀಗಾಗಿ ನಮಗೆ ಹಾನಿಯಾದ ಪ್ರದೇಶಕ್ಕೆ ಪರಿಹಾರ ನೀಡಬೇಕು ಎಂದು ಪಟ್ಟು ಹಿಡದಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದ್ರೆ, ಹಕ್ಕಿಗಳ ನಾಶ ಮಾಡಿದ್ರೆ, ಪರಿಹಾರದ ವ್ಯವಸ್ಥೆ ಇಲ್ಲ. ಆದರೆ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದ್ರು ರೈತರಿಗೆ ಅನಕೂಲ ಮಾಡುವುದಾಗಿ ಡಿಎಫ್ಓ ಸಂತೋಷ್ ಹೇಳಿದ್ದಾರೆ. 

  ಅತಿವೃಷ್ಟಿ, ಅನಾವೃಷ್ಠಿಯಿಂದ, ಪ್ರಾಣಿಗಳ ಹಾವಳಿಯಿಂದ ಬೆಳೆ ಹಾನಿ ಆಗುತ್ತೆ. ಈವಾಗ ವಿದೇಶಿ ಹಕ್ಕಿಗಳ ಸಮೂಹದಿಂದ ಬೆಳೆ ಹಾನಿಯಾಗುತ್ತಿದೆ. ಹೀಗಾಗಿ ಈ ಕುರಿತು ಜನಪ್ರತಿನಿಧಿಗಳು ಚರ್ಚೆ ಮಾಡ್ಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ರೈತರ ಕೂಗಾಗಿದೆ.

Recent Articles

spot_img

Related Stories

Share via
Copy link