ಗದಗ-ಬೆಟಗೇರಿ ನಗರಸಭೆ ಆಸ್ತಿ ಹಗರಣ :ಮಾಜಿ ಅಧ್ಯಕ್ಷೆ ಸೇರಿ ಹಲವರಿಗೆ ನಡುಕ

ಗದಗ

   ಕರ್ನಾಟಕದಲ್ಲಿ ಮುಡಾ ಹಗರಣ ಮತ್ತು ವಾಲ್ಮೀಕ ಹಗರಣಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಈ ಮಧ್ಯೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ನಗರಸಭೆ ಆಸ್ತಿ ಹಗರಣ ಭಾರಿ ಸಂಚಲನ ಮೂಡಿಸಿದೆ. ಹೀಗಾಗಿ ಮಾಜಿ ಅಧ್ಯಕ್ಷೆ, ಸದಸ್ಯರು, ಲೀಜ್​ ದಾರರಿಗೆ ನಡುಕು‌ ಶುರುವಾದಂತಾಗಿದೆ. ಬಿಜೆಪಿ ಆಡಳಿತದ ವಿರುದ್ಧ ಅವಳಿ ನಗರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

   ನೂರಾರು ಕೋಟಿ ರೂ. ಮೌಲ್ಯದ ನಗರಸಭೆ ಆಸ್ತಿ ಲೂಟಿಗೆ ರೂಪಿಸಿದ್ದ ಸಂಚು ಬಯಲಾಗಿದೆ. ನಗರಸಭೆ ಹಿಂದಿನ ಪ್ರಭಾರಿ ಪೌರಾಯುಕ್ತ ಪ್ರಶಾಂತ್​ ವರಗಪ್ಪನವರ್​ ಎಂಬುವವರ ದೂರು ಆಧರಿಸಿ ಗದಗ ನಗರ ಸಭೆಯ ಮಾಜಿ ಅಧ್ಯಕ್ಷೆ ಮತ್ತು ಬಿಜೆಪಿ ಸದಸ್ಯರಾದ ಅನಿಲ್ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ವಿರುದ್ಧ ಬಡಾವಣೆ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

  ನೂರಾರು ಕೋಟಿ ರೂ. ಮೌಲ್ಯದ 35 ಎಕರೆ ಆಸ್ತಿ ಕಬಳಿಸುವ ದುರುದ್ದೇಶದಿಂದ ಲೀಜ್ ನೀಡಲು ನಕಲಿ ಠರಾವು ಸೃಷ್ಟಿಸಿ, ಪೌರಾಯುಕ್ತರ ನಕಲಿ ಸಹಿ ಮಾಡಿ ಮಂಜೂರು ಮಾಡಲಾಗಿದೆ. ಎ1 ಖಾಸಗಿ ವ್ಯಕ್ತಿ ವಿಜಯಲಕ್ಷ್ಮಿ ಶಿಗ್ಲಿಮಠ ಹಾಗೂ ಎ2 ಸೆಕ್ರೆಟರಿ ದಿ ಕಾಟನ್ ಮಾರ್ಕೆಟ್ ವರ್ಕ್ ಓವನರ್ಸ್ ಹಾಗೂ​ ಅಸೋಸಿಯೇಟ್ಸ್ ವಿರುದ್ಧವೂ ಪ್ರಶಾಂತ್​ ದೂರು ದಾಖಲಿಸಿದ್ದಾರೆ. ಎ2 ಸೆಕ್ರೆಟರಿ ದಿ ಕಾಟನ್ ಮಾರ್ಕೆಟ್ ವರ್ಕ್ ಓವನರ್ಸ್ ಹಾಗೂ ಅಸೋಸಿಯೇಟ್ಸ್​ಗೆ 35 ಎಕರೆ ಲೀಜ್ ನೀಡಲು ನಕಲಿ ಠರಾವು ಸೃಷ್ಟಿ ಮಾಡಲಾಗಿದೆ.

   2023ರ ಅಕ್ಟೋಬರ್​​ 26ರಂದು ನಗರಸಭೆಗೆ ಎ2 ಪತ್ರ ನೀಡಿದ್ದಾರೆ. 2024ರ ಫೆಬ್ರವರಿ 9ರಂದು ನಗರಸಭೆ ಸಾಮಾನ್ಯ ಸಭೆ ನಡೆದಿದೆ. ಸಭೆಯಲ್ಲಿ ಠರಾವು ನಂ. 378 ಪಾಸಾಗಿದೆ. ಎಲ್ಲ ಆಸ್ತಿ ಅನುಭೋಗದಾರರಿಗೆ ಲೀಜ್ ನೀಡಲಾಗಿದೆಂದು ನಕಲಿ ಠರಾವು ಸೃಷ್ಟಿ ಮಾಡಲಾಗಿದೆ.

   2024ರ ಜುಲೈ 22ರಂದು ಲೀಜ್ ನೀಡಿದೆ ಅಂತ ನಕಲಿ ಪತ್ರ ಸೃಷ್ಟಿಸಿ ನಗರಸಭೆ ಆಯುಕ್ತರ ನಕಲಿ ಸಹಿ ಮಾಡಲಾಗಿದೆ. ಈ ಮೂಲಕ ನಗರಸಭೆ, ಸರ್ಕಾರಕ್ಕೆ ಮಾಡಲಾಗುತ್ತಿರುವ ಅಪರಾಧ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೂಚಕರಾಗಿ ಬಿಜೆಪಿ ಸದಸ್ಯರಾದ ಅನಿಲ ಅಬ್ಬಿಗೇರಿ, ಗೂಳಪ್ಪರಿಂದ ಸಹಿ ಕೂಡ ಹಾಕಿದ್ದಾರೆ.

 

Recent Articles

spot_img

Related Stories

Share via
Copy link